ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ  ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಐಡಿ ಕಾರ್ಡನ್ನು ಧರಿಸದೇ, ಕನ್ನಡವನ್ನು ಮಾತಾಡದೇ ಗ್ರಾಹಕರ ಮೇಲೆ ದರ್ಪ ತೋರಿಸುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖ‌ಂಡ ಮಂಜುನಾಥ್ ಗೌಡ ಆರೋಪಿಸಿದ್ದಾರೆ.‌ 

ಉತ್ತರ ಕನ್ನಡ (ಜು.03): ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಐಡಿ ಕಾರ್ಡನ್ನು ಧರಿಸದೇ, ಕನ್ನಡವನ್ನು ಮಾತಾಡದೇ ಗ್ರಾಹಕರ ಮೇಲೆ ದರ್ಪ ತೋರಿಸುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖ‌ಂಡ ಮಂಜುನಾಥ್ ಗೌಡ ಆರೋಪಿಸಿದ್ದಾರೆ.‌ ಕೆನರಾ ಬ್ಯಾಂಕ್ ಗುಣವಂತೆ ಶಾಖೆಯಲ್ಲಿ ವ್ಯವಹಾರ ನಡೆಸಲು ಹಾಗೂ ಈ ಹಿಂದೆ‌ ಇಲ್ಲಿನ ಎಟಿಎಂನಲ್ಲಿ ಕರೆಂಟ್ ಶಾಕ್ ಹೊಡಿಯುತ್ತಿದ್ದ ಕಾರಣ ಪ್ರಶ್ನಿಸಲು ಹೋದಾಗ ಬ್ಯಾಂಕ್ ಸಿಬ್ಬಂದಿ ಹಿಂದಿಯಲ್ಲೇ ವ್ಯವಹಿಸುತ್ತಿದ್ದದ್ದು ಕಂಡು ಬಂತು. ಅಲ್ಲದೇ, ನಿಯಮಾನುಸಾರ ಐಡಿ ಕೂಡಾ ಧರಿಸಿರಲಿಲ್ಲ. 

ಇದನ್ನು ಪ್ರಶ್ನಿಸಿದಾಗ ಬ್ಯಾಂಕ್ ಸಿಬ್ಬಂದಿ ದರ್ಪದಿಂದ ಉತ್ತರಿಸಿದ್ದಾರೆ. ಯಾರಿಗೆ ಬೇಕಾದರೂ ಕಂಪ್ಲೀಟ್ ಮಾಡಿ ಅಂತ ಹೇಳುತ್ತಿದ್ದು, ಇದು ರಾಜ್ಯದಲ್ಲಿ ಕನ್ನಡಿಗರಿಗೆ ಮಾಡುವ ಅವಮಾನ. ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಸ್ಥಳೀಯ ಭಾಷೆಯಲ್ಲೇ ವ್ಯವಹರಿಸುವಂತೆ ನಿಯಮಗಳಿವೆ. ಆದರೆ, ಹೊರರಾಜ್ಯದಿಂದ ಬಂದವರು ಹಿಂದಿ ಬಿಟ್ಟು ಕನ್ನಡದಲ್ಲಿ ವ್ಯವಹರಿಸಲು ತಯಾರಿಲ್ಲ. ಈ ಕಾರಣದಿಂದ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು‌‌. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರವೇ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಮುಖ‌ಂಡ ಮಂಜುನಾಥ್ ಗೌಡ ಎಚ್ಚರಿಸಿದ್ದಾರೆ.

ಆಸ್ಪತ್ರೆ ನಿರ್ವಹಣೆಯಲ್ಲಿ ಆಡಳಿತ ಮಂಡಳಿ ವಿಫಲ: ಸಚಿವ ಚಲುವರಾಯಸ್ವಾಮಿ ಅಸಮಾಧಾನ

ತಜ್ಞ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿ ಮನ​ವಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಜನರಿಗೆ ತೊಂದರೆ ಆಗುತ್ತಿದ್ದು, ಆದಷ್ಟುಬೇಗನೇ ತಜ್ಞ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ರವಿ ಲಿಂಗಶೆಟ್ಟಿಆಗ್ರಹಿಸಿದರು. ಈ ಕುರಿತು ಆಸ್ಪತ್ರೆಗೆ ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರು, ಅರವಳಿಕೆ ತಜ್ಞರು ಮತ್ತು ಚಿಕ್ಕ ಮಕ್ಕಳ ವೈದ್ಯರು ಇಲ್ಲ. ಇದರಿಂದಾಗಿ ಬಡ ರೋಗಿಗಳಿಗೆ ಸಮಸ್ಯೆ ಆಗಿದೆ. 

ರಾಜಕಾರಣದಲ್ಲಿ ಸೇವಾ ಮನೋಭಾವನೆ ಕಣ್ಮರೆ: ಸಂತೋಷ್‌ ಹೆಗ್ಡೆ ಆತಂಕ

ಪ್ರತಿದಿನ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ನೂರಾರು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಅದರಲ್ಲೂ ಪ್ರತಿ ತಿಂಗಳು ನೂರಾರು ಹೆರಿಗೆಗಳು ಆಗುವ ಇಲ್ಲಿ ಹೆರಿಗೆ ವೈದ್ಯರೇ ಇಲ್ಲ. ಕಾರಣ ಆದಷ್ಟುಬೇಗನೇ ಅವಶ್ಯ ಇರುವ ವೈದ್ಯರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ವೈದ್ಯಾಧಿಕಾರಿ ಶ್ರೀಕಾಂತ ಕಾಟೆವಾಲೆ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೀರಪ್ಪ ಪೂಜಾರ, ಶಿವಣ್ಣ ಗಿಡಿಬಿಡಿ, ಎಂ.ಎಂ. ಖಂಡೋಜಿ, ರಾಜು ಹಾದಿಮನಿ, ಮಂಜುನಾಥ ಚಂದರಗಿ, ಜಮಾಲ್‌ಸಾಬ್‌ ನದಾಫ್‌, ಬಸವರಾಜ ದೇಸಾಯಿ, ಪ್ರವೀಣ ಇದ್ದರು.