ನಕಲಿ ವಿಮಾ ಕಾರ್ಡು ವಿತರಣೆ ಪ್ರಕರಣದಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಸೂರ್ಯ ಮುಕುಂದರಾಜ್‌ ಭವಿಷ್ಯ ನುಡಿದಿದ್ದಾರೆ.

ತುಮಕೂರು (ಡಿ. 24): ನಕಲಿ ವಿಮಾ ಕಾರ್ಡು ವಿತರಣೆ ಪ್ರಕರಣದಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಸೂರ್ಯ ಮುಕುಂದರಾಜ್‌ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ (Election) ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ವಿಮೆ ಬಾಂಡ್‌ ಹಂಚಿದ್ದಾರೆ ಎಂಬುದು ಸಾಬೀತಾಗಿದೆ. ಸ್ವತಹಃ ಐಆರ್‌ಡಿಬಿಯೇ ಕಮ್ಮಗೊಂಡನಹಳ್ಳಿ ಶ್ರೀಮಾರುತಿ ಚಾರಿಟಬಲ್‌ ಟ್ರಸ್ಟ್‌ನಿಂದ ಗ್ರಾಮಾಂತರ ಕ್ಷೇತ್ರದ ಸುಮಾರು 16 ಸಾವಿರ ಮಕ್ಕಳಿಗೆ ನೀಡಿರುವ ವಿಮಾ ಬಾಂಡ್‌ ನಕಲಿ ಎಂಬುದನ್ನು ಒಪ್ಪಿಕೊಂಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ , ನ್ಯಾಯಾಲಯದ ರಜೆ ಮುಗಿದ ನಂತರ ತೀರ್ಪು ಹೊರಬೀಳಲಿದ್ದು, ಗೌರಿಶಂಕರ್‌ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಖಚಿತ ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಬಿ.ಸುರೇಶಗೌಡ ಸಹ ಹಲವಾರು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, 2008ರಲ್ಲಿ ಅಂದಿನ ಗುಬ್ಬಿ ಶಾಸಕರಾಗಿದ್ದ ಎಸ್‌.ಆರ್‌.ಶ್ರೀನಿವಾಸ್‌ ಅವರನ್ನು ಅಪರೇಷನ್‌ ಕಮಲ ಮಾಡಲು ಹೋಗಿ ಸಿಕ್ಕಿಕೊಂಡಿದ್ದು, ಈ ಸಂಬಂಧ ಶಿವಮೊಗ್ಗದ ರಮೇಶಗೌಡ ಎಂಬುವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಸ್ವತಹಃ ಶಾಸಕ ಶ್ರೀನಿವಾಸ್‌ ಅವರು ಅಪರೇಷನ್‌ ಕಮಲಕ್ಕೆ 25 ಕೋಟಿ ರು.ಅಮೀಷ ಒಡ್ಡಿದ್ದರು ಎಂಬುದಾಗಿ ಸಾಕ್ಷ ನುಡಿದಿದ್ದು, ಅವರು ಸಹ ಶೀಘ್ರದಲ್ಲಿಯೇ ಆಪರಾಧಿಯಾಗಲಿದ್ದಾರೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರ ಹಾಲಿ ಮತ್ತು ಮಾಜಿ ಶಾಸಕರುಗಳ ಜಿದ್ದಾಜಿದ್ದಿನ ಮೇಲಾಟದಿಂದ ನಲುಗಿ ಹೋಗಿದೆ. ಹಣ, ತೋಳ್ಬಲದಿಂದಲೇ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಇವರ ನಡುವೆ ಸಜ್ಜನ ರಾಜಕಾರಣಿಯೊಬ್ಬರನ್ನು ಕ್ಷೇತ್ರದ ಜನತೆ ಎದುರು ನೋಡುತ್ತಿದ್ದು, ಕಾಂಗ್ರೆಸ್‌ ಆ ಸ್ಥಾನವನ್ನು ತುಂಬಲಿದೆ. ನಾನು ಸೇರಿದಂತೆ ಮೂವರು ಯುವಕರು ಕಾಂಗ್ರೆಸ್‌ ಪಕ್ಷದಿಂದ ಟಿಕೇಟ್‌ ಬಯಸಿದ್ದು, ಭ್ರಷ್ಟಾಚಾರ ಮುಕ್ತ, ಭಯಮುಕ್ತ ವಾತಾವರಣ ನೀಡುವುದೇ ನಮ್ಮ ಗುರಿ ಎಂದು ಹೇಳಿದರು.

ಚುನಾವಣಾ ಆಕ್ರಮದಿಂದ ತುಂಬಿ ಹೋಗಿರುವ ಗ್ರಾಮಾಂತರ ಕ್ಷೇತ್ರದ ಯುವಜನರಿಗೆ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ 2023ರ ಜನವರಿಯಲ್ಲಿ ಮತ ಭ್ರಷ್ಟಾಚಾರದ ವಿರುದ್ದ ನಾವು ಎಂಬ ವಿನೂತನ ಜಾಗೃತಿ ಆಂದೋಲನವನ್ನು ಆಯೋಜಿಸಿದ್ದು, ಮತ ಭ್ರಷ್ಟಾಚಾರ ವಿರೋಧಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ಶೀರ್ಷಿಕೆಯಡಿ ಆಭಿಯಾನ ನಡೆಯಲಿದೆ ಎಂದರು.

 ದೂರುದಾರನಿಗೆ ಆಮಿಷ

ಚಿಕ್ಕಮಗಳೂರು (ಡಿ.22): ಕಾಫಿನಾಡ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಟಿ ಡಿ ರಾಜೇಗೌಡ ವರ್ಸಸ್ ಮಾಜಿ ಶಾಸಕ ಡಿ ಎನ್ ಜೀವರಾಜ್ ನಡುವೆ ನಡೆಯುತ್ತಿರುವ ಶೀತಲ ಸಮರ ಮುಗಿಯುವ ಲಕ್ಷಣಗೋಚರವಾಗುತ್ತಿಲ್ಲ,.ಹಾಲಿ ಶಾಸಕ ಟಿ ಡಿ ರಾಜೇಗೌಡ ಖರೀದಿ ಮಾಡಿರುವ 123 ಕೋಟಿ ಆಸ್ತಿ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಶಾಸಕರ ವಿರುದ್ದ ಲೋಕಾಯುಕ್ತದಲ್ಲಿ ಕೇಸ್ ದಾಖಲು ಮಾಡಿದ ದೂರುದಾರ ವಿಜಯಾನಂದ ಐದೇ ದಿನಕ್ಕೆ ಕೇಸ್ ಹಿಂಪಡೆಯುವ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೋಂದು ಆರೋಪ ಹೊರಬರುವ ಮೂಲಕ ಆಸ್ತಿ ಖರೀದಿ ಮಾಡಿರುವ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. 

ಶಾಸಕರ ಸಂಬಂಧಿ ಪಿ.ಎ. ಹೆಸರಲ್ಲಿ ಛಾಪಕಾಗದ ತೆಗೆದಿರುವುದು ವೈರಲ್: 
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ನಾನು ಯಾರಿಗೂ ಮೋಸ ಮಾಡಿಲ್ಲ. ಅನ್ಯಾಯ ಮಾಡಿಲ್ಲ. ಕಾನೂನಾತ್ಮಕವಾಗೇ ವ್ಯವಹಾರ ನಡೆಸಿರೋದು ಎಂದು ಎಲ್ಲಿ ಬೇಕಾದ್ರು ಹೇಳ್ತೀನಿ. ರಾಜಕೀಯಕ್ಕಾಗಿ ನನ್ನ ಮೇಲೆ ಆರೋಪ ಮಾಡ್ತಿರೋ ಮಾಜಿ ಶಾಸಕ ಡಿ.ಎನ್.ಜೀವರಾಜ್ ದೇವಾಲಯಕ್ಕೆ ಬರಲಿ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದ್ದರು. ಕಾರಣ ಇಷ್ಟೆ, ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಶಬಾನ ರಂಜಾನ್ ಟ್ರಸ್ಟ್ ಮೂಲಕ 123 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದು ಅದಕ್ಕೆ ಹಣ ಎಲ್ಲಿಂದ ಬಂತು ಎಂದು ಕೊಪ್ಪ ತಾಲೂಕಿನ ವಿಜಯಾನಂದ ಎಂಬುವರು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದರು.

Udupi: 2 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನ-ಬೆಳ್ಳಿ ಕದ್ದಿದ್ದ ಕಾರ್ಕಳ ಮನೆಗಳ್ಳರ ಬಂಧನ

ಆದರೆ, ನಾಲ್ಕೇ ದಿನಕ್ಕೆ ಕೇಸ್ ವಾಪಸ್ ಪಡೆದಿದ್ದರು. ಆಗ ಬಿಜೆಪಿ ಹಣ ನೀಡಿ, ಬೆದರಿಸಿ ಕೇಸ್ ಹಿಂಪಡೆದಿದ್ದಾರೆ ಎಂದು ಆರೋಪಿಸಿತ್ತು. ಆಗಲೂ ಶಾಸಕ ರಾಜೇಗೌಡ ಎಲ್ಲಾ ಆರೋಪವನ್ನ ತಳ್ಳಿ ಹಾಕಿದ್ದರು. ಅದರೆ, ವಿಜಯಾನಂದ ಕೇಸ್ ಹಿಂಪಡೆಯಲು ತೆಗೆದ ಬಾಂಡ್ ಪೇಪರ್ನಲ್ಲಿ ಶಾಸಕ ರಾಜೇಗೌಡರ ಸಂಬಂಧಿಯ ಪಿ.ಎ. ಫೋನ್ ನಂಬರ್, ಸಹಿ ಏಕೆ-ಹೇಗೆ ಬಂತು ಎಂದು ಬಿಜೆಪಿ ಮತ್ತೆ ಪ್ರಶ್ನಿಸಿದೆ. ಅಂದರೆ, ಅಲ್ಲಿಗೆ ಶಾಸಕರ ಕಡೆಯವರೇ ಕೇಸ್ ಹಿಂಪಡೆಸಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾದಂತಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ್ ಗೌಡ ಆರೋಪಿಸಿದ್ದಾರೆ.