Asianet Suvarna News Asianet Suvarna News

Karnataka Politics: ಪಕ್ಷ ಬಿಟ್ಟು ಹೋಗಿರುವವರು ಕಾಂಗ್ರೆಸ್‌ಗೆ ಮರಳಿ ಶಕ್ತಿ ತುಂಬಿ

ಕೆಲ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿರುವ ಮುಖಂಡರು ಕಾಂಗ್ರೆಸ್‌ಗೆ ಮರಳುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕಿ ಮಲ್ಲಾಜಮ್ಮ ಮನವಿ ಮಾಡಿದರು.

Karnataka Politics  Those who left the party re join And Give Strength Mallajamma snr
Author
First Published Dec 30, 2022, 6:09 AM IST

  ಮಳವಳ್ಳಿ (ಡಿ.30):  ಕೆಲ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿರುವ ಮುಖಂಡರು ಕಾಂಗ್ರೆಸ್‌ಗೆ ಮರಳುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕಿ ಮಲ್ಲಾಜಮ್ಮ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ (BJP)  ಸರ್ಕಾರದಿಂದ ಬೇಸತ್ತಿರುವ ಜನರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಕ್ಷೇತ್ರದಲ್ಲಿ ಮುರ್ನಾಲ್ಕು ವರ್ಷಗಳಿಂದ ಅಭಿವೃದ್ಧಿ ಎಂಬುವುದು ಮರಿಚಿಕೆಯಾಗಿದೆ. ಕ್ಷೇತ್ರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಹಿತಕ್ಕಾಗಿ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಒಬ್ಬರಂತೆ ಸುಮಾರು 30 ಮಂದಿ ಮಹಿಳೆಯರಿಗೆ ಬಿ.ಫಾರಂ ಟಿಕೆಚ್‌ ನೀಡಬೇಕೆಂದು ರಾಜ್ಯ ಹಾಗೂ ರಾಷ್ಟನಾಯಕರಲ್ಲಿ ಮನವಿ ಮಾಡುತ್ತೇವೆ. ಅಧಿವೇಶನ ಮುಗಿದ ಕೂಡಲೇ ಕಾಂಗ್ರೆಸ… ಪಕ್ಷದಲ್ಲಿರುವ ಮಹಿಳಾ ನಾಯಕಿಯರ ನಿಯೋಗ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯವನ್ನು ಮಂಡಿಸಲಾಗುವುದು ಎಂದು ಹೇಳಿದರು.

ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಜನವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ತೆಗೆದುಹಾಕಬೇಕಿದೆ. ಪಕ್ಷವನ್ನು ಸಂಘಟಿಸುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಜ.8 ರಂದು ನಡೆಯಲಿರುವ ಪರಿಶಿಷ್ಟಜಾತಿ ಪರಿಶಿಷ್ಟಪಂಗಡದ ಐಕ್ಯತಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಐಕ್ಯತಾ ಸಮಾವೇಶಕ್ಕೆ ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಜಿ.ಪರಮೇಶ್ವರ್‌, ಸೇರಿದಂತೆ ರಾಜ್ಯ ಮತ್ತು ರಾಷ್ಟನಾಯಕರು ಭಾಗವಹಿಸಲಿದ್ದಾರೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಜನರಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದರು.

 ಕಾಂಗ್ರೆಸ್ ಬಲಗೊಳಿಸಲು ತಂತ್ರ

ವಿವಿಧ ಕಾರಣಗಳಿಗೆ ಬಿಜೆಪಿ ಕಡೆ ವಾಲಿರುವ ಹಿಂದುಳಿದ ವರ್ಗಗಳ ಮತದಾರರನ್ನು  ಸೆಳೆಯಲು ಹಾಗೂ ಅವರನ್ನು ರಾಜಕೀಯವಾಗಿ ಮುಂಚೂಣಿಗೆ ತರಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. 

Haveri: ಮಾರ್ಚ್‌ನಲ್ಲಿ ಹಿಂದುಳಿದ ವರ್ಗಗಳ ಕಾಂಗ್ರೆಸ್‌ ಸಮಾವೇಶ: ಮಧು ಬಂಗಾರಪ್ಪ

ಶಿರಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಾಂಗ್ರೆಸ್(Congress) ಪಕ್ಷದ ಶಕ್ತಿಯೇ ಹಿಂದುಳಿದ ವರ್ಗದ ಮತದಾರರಾಗಿದ್ದಾರೆ. ಆದರೆ, ಕೆಲವು ಪ್ರಮಾಣದಲ್ಲಿ ಕಾಲಕ್ರಮೇಣ ಅವರು ಬಿಜೆಪಿ(BJP) ಕಡೆ ವಾಲಿದ್ದಾರೆ. ಅಂತಹ ಮತದಾರರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಕಾರ್ಯಕ್ರಮ ರೂಪಿಸಿದೆ. ಈಗಾಗಲೇ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಹಿರಿಯರು, ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸಿ ಸಂಘಟನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ  ಮತದಾರರನ್ನು ಮುಂಚೂಣಿಗೆ ತರಲು ಕ್ರಮ ತೆಗೆದುಕೊಳ್ಳುವ ಜತೆ ಪದಾಧಿಕಾರಿ ಸ್ಥಾನ ನೀಡಲು  ಚಿಂತನೆ ನಡೆದಿದೆ ಎಂದರು.

ಎಲ್ಲ ಜಿಲ್ಲೆಯಲ್ಲೂ ಕಾಂಗ್ರೆಸ್‌ ಒಬಿಸಿ ಸಮಾವೇಶ: ಮಧು ಬಂಗಾರಪ್ಪ

 ಒಬಿಸಿ(OBC) ಪುನರ್ ರಚನೆ, ಪದಾಧಿಕಾರಿಗಳ ನೇಮಕ ಶೀಘ್ರದಲ್ಲೇ ಮಾಡಲಾಗುವುದು. ಇದರ ಜತೆ ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ಒಬಿಸಿ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ. ಜ.15ರಿಂದ ಫೆ.28ರೊಳಗೆ ಆ ಸಮಾವೇಶ ಪೂರ್ಣಗೊಂಡ ನಂತರ ರಾಜ್ಯ ಸಮಾವೇಶ ಮಾಡಲಾಗುವುದು ಎಂದರು. 

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ(S Bangarappa) ಅವರು ಒಬಿಸಿ ಮತದಾರರಿಗಾಗಿ ಸಾಕಷ್ಟು ಕಾರ್ಯ ಮಾಡಿದ್ದರು. ಈಗ ಮತ್ತೆ ಆ ಕಾಲ ಸನ್ನಿಹಿತವಾಗಿದೆ ಎಂದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ರಕ್ಷಣೆ, ಯುವ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರ ಜತೆ ಒಬಿಸಿ ಅಭಿವೃದ್ಧಿ ಸಂಬಂಧ ಕಾರ್ಯಕ್ರಮ ಕೂಡಾ ಇದೆ.  ಕಾಂಗ್ರೆಸ್ ಜಾರಿಗೊಳಿಸಿದ್ದ ಎಲ್ಲ ಭಾಗ್ಯ ಯೋಜನೆಗಳನ್ನು ಇದು ಒಳಗೊಂಡಿದೆ ಎಂದರು. ಬಿಜೆಪಿಗರು ಅರಣ್ಯ ಅತಿಕ್ರಮಣದಾರರು ಜಾಮೀನು ಪಡೆದು ತಿರುಗುವಂಥ ಸ್ಥಿತಿ ತಂದಿದ್ದಾರೆ. ಅನ್ನ ಕೊಡುವ ರೈತರನ್ನು ಭೂಕಳ್ಳರಂತೆ ಬಿಂಬಿಸಲಾಗುತ್ತಿದೆ. ವಸತಿ ರಹಿತರಿಗೆ ಮನೆ ನೀಡಲಾಗಿಲ್ಲ. ಭಾವನಾತ್ಮಕ ವಿಷಯ ತಂದು ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ ಎಂದರು.

Follow Us:
Download App:
  • android
  • ios