Asianet Suvarna News Asianet Suvarna News

Karnataka Politics : ಮೇಲುಕೋಟೆ ಕಾಂಗ್ರೆಸ್‌ ಗೆಲುವು ನಿಶ್ಚಿತ

ಮೇಲುಕೋಟೆ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ತಮಗೆ 100ಕ್ಕೆ 100ರಷ್ಟುಟಿಕೆಟ್‌ ದೊರಕುವ ಭರವಸೆ ಇದೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದು ಟಿಕೆಟ್‌ ಆಕಾಂಕ್ಷಿ ಎಂ.ಆನಂದಕುಮಾರ್‌ ಹೇಳಿದರು.

Karnataka Politics  Melukote Congress victory is certain snr
Author
First Published Jan 15, 2023, 6:43 AM IST

ಪಾಂಡವಪುರ:  ಮೇಲುಕೋಟೆ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ತಮಗೆ 100ಕ್ಕೆ 100ರಷ್ಟುಟಿಕೆಟ್‌ ದೊರಕುವ ಭರವಸೆ ಇದೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದು ಟಿಕೆಟ್‌ ಆಕಾಂಕ್ಷಿ ಎಂ.ಆನಂದಕುಮಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 1993ರಿಂದಲೂ ಯುವ ಕಾಂಗ್ರೆಸ್‌, ಕೆಪಿಸಿಸಿಯಲ್ಲಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ 2013, 2018 ಹಾಗೂ 2023ರಲ್ಲಿ ಅರ್ಜಿ ಸಲ್ಲಿಸಿದ್ದು, ಪಕ್ಷದ ಹೈಕಮಾಂಡ್‌ ನನಗೆ ಟಿಕೆಟ್‌ ನೀಡುವ ಭರವಸೆ ಇದೆ ಎಂದರು.

ಪಕ್ಷದಲ್ಲಿ 3 ಡಜನ್‌ ನಾಯಕರಿಂದ ನನ್ನ ಹೆಸರೇಳಿಸುವಷ್ಟುನಿಷ್ಠೆ ಹೊಂದಿದ್ದು, ಯಾವ ಪಕ್ಷಕ್ಕೂ ಹೋಗಿಲ್ಲ. 2018ರ ಚುನಾವಣೆಯಲ್ಲಿ ಅರ್ಜಿ ಸಲ್ಲಿಸಿದಾಗ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ರೈತನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದ ಹಿನ್ನೆಲೆ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಪಕ್ಷ ಬೆಂಬಲ ಸೂಚಿಸಿತು. ಆಗ ಪಕ್ಷದ ಸೂಚನೆಯಂತೆ ರೈತಸಂಘದ ದರ್ಶನ್‌ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸಿದ್ದೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡ ವೇಳೆಯೂ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪಕ್ಷ ಹೇಳಿಂದಂತೆ ಕೇಳಿದ್ದೇನೆ ಹೊರತು ಎಂದಿಗೂ ಪಕ್ಷ ದ್ರೋಹ ಮಾಡಿಲ್ಲ ಎಂದರು.

ಲಾಕ್‌ಡೌನ್‌ ವೇಳೆ ಕ್ಷೇತ್ರದ ಜನರಿಗೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವ ಜತೆಗೆ ಪಕ್ಷಕ್ಕೆ ಬಹಳ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಮೇಲುಕೋಟೆಯಲ್ಲಿ ಈ ಬಾರಿ ಹೊಸ ಮುಖವನ್ನು ಜನರು ಬಯಸಿದ್ದಾರೆ. ಟಿಕೆಚ್‌ ತಂದೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನನ್ನು ಆಯ್ಕೆ ಮಾಡಿದರೆ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿ 24*7 ಮಾದರಿ ಕ್ಷೇತ್ರದಲ್ಲಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಟಿಕೆಟ್‌ ನನಗೆ ಕೊಡಿ ಅಂತಾ ಕೇಳ್ತಿಲ್ಲ. ಜತೆಗೆ ಚುನಾವಣೆ ವೇಳೆ ಬಂದು ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿಲ್ಲ. ಕ್ಷೇತ್ರದ ಎರಡು ಕಡೆ ಕಚೇರಿ ತೆರೆದು ಕೆಲಸ ಮಾಡುತ್ತಿದ್ದೇನೆ. 5 ವರ್ಷದಿಂದಲೂ ಇಲ್ಲೇ ಇದ್ದೇನೆ. ಯಾರೇ ಆಗಲಿ ಮತದಾರರ ಕೈಗೆ ಸಿಗಬೇಕು. ಬೇರೆಲ್ಲೋ ಇದ್ದು ಚುನಾವಣೆ ವೇಳೆ ಬರುವುದಲ್ಲ ಎಂದರು.

ಸ್ಥಳೀಯ ಕಾರ್ಯಕರ್ತರ ಜತೆ ಚರ್ಚಿಸಿ ಯಾರಿಗೆ ಟಿಕೆಚ್‌ ನೀಡಬೇಕೆಂದು ತೀರ್ಮಾನಿಸಿ ಟಿಕೆಟ್‌ ನೀಡಬೇಕು. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಹಾಕುವುದಂತೂ ಖಚಿತ. ಜತೆಗೆ ಕಾಂಗ್ರೆಸ್‌ ಬಾವುಟ ಹಾರಿಸಲಿದ್ದೇವೆ ಎಂದು ವಿಶ್ವಾಸದಿಂದ ಹೇಳಿದರು.

ಕ್ಷೇತ್ರದಲ್ಲಿ ಮೂವರು ಆಕಾಂಕ್ಷಿಗಳು ಸಹೋದರಂತಿದ್ದೇವೆ. ಜ.16ರ ನಾ ನಾಯಕಿ ಮಹಿಳಾ ಸಮಾವೇಶವಿದ್ದು, ಮೂವರು ಟಿಕೆಚ್‌ ಆಕಾಂಕ್ಷಿಗಳು ಸಮಾವೇಶಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದೊಯ್ಯವ ಪ್ರಯತ್ನದಲ್ಲಿದ್ದೇವೆ. ಫೆಬ್ರವರಿ ಮೊದಲ ವಾರದ ಬಳಿಕ ಎಲ್ಲರೂ ಒಗ್ಗೂಡಿ ಚುನಾವಣೆ ಕೆಲಸ ಮಾಡಲಿದ್ದೇವೆ. ಮೇಲುಕೋಟೆಯಲ್ಲಿ ಕಾಂಗ್ರೆಸ್‌ ಇಲ್ಲ ಎನ್ನುವುದಾದರೆ ನಾಲ್ವರು ಅರ್ಜಿ ಹಾಕಿರುವುದೇ ಪಕ್ಷ ಬಲವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್‌ ಪಕ್ಷ ಅಡಮಾನವಿಡುತ್ತಿದ್ದಾರೆ ಎಂಬ ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುಟ್ಟರಾಜುಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಎಚ್‌.ಡಿ.ದೇವೇಗೌಡರು ಪ್ರಧಾನಿ ಹುದ್ದೆಗೇರಲು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಇದೇ ಕಾಂಗ್ರೆಸ್‌ ಬೆಂಬಲ ನೀಡಿರುವುದನ್ನು ಹಾಗೂ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಕಾಂಗ್ರೆಸ್‌ನ ತೇಜಸ್ವಿನಿ ಸೋಲಿಸಿದ್ದನ್ನು ಪುಟ್ಟರಾಜು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಆರ್‌.ರಮೇಶ್‌ ಮಾತನಾಡಿ, ಜೆಡಿಎಸ್‌ ಪಕ್ಷದಷ್ಟುಕಾಂಗ್ರೆಸ್‌ ಯಾರಿಗೆ ಅಡಮಾನವಿಟ್ಟಿಲ್ಲ. ಎಂಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಬಿಜೆಪಿಯ ನಾಮ ನಿರ್ದೇಶಕ ಉಮೇಶ್‌ ಯಾರು ಎಂಬುದೇ ಗೊತ್ತಿಲ್ಲ. ಅವರಿಗೆ ಅಡಮಾನವಿಟ್ಟಜೆಡಿಎಸ್‌, ಆರ್‌ಎಪಿಸಿಎಂಎಸ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಡಮಾನವಿಟ್ಟಿತು ಎಂದು ಛೇಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಿಕ್ಕಬ್ಯಾಡರಹಳ್ಳಿ ಧರ್ಮಣ್ಣ, ಸಿ.ಆರ್‌.ರಮೇಶ್‌, ಕೋ.ಪು.ಗುಣಶೇಖರ್‌, ಅಂಕಯ್ಯ, ಹಾರೋಹಳ್ಳಿ ಚಿಕ್ಕಣ್ಣ, ಬಸ್ತಿಹಳ್ಳಿ ಕುಮಾರ್‌ , ಅಂತನಹಳ್ಳಿ ಬಸವರಾಜು, ಚಿಕ್ಕಾಯಿರಹಳ್ಳಿ ರಾಜೇಶ… ಇತರರಿದ್ದರು.

Follow Us:
Download App:
  • android
  • ios