ದೇಶ ಮತ್ತು ರಾಜ್ಯದ ಉಳಿವಿಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಕೆ. ವೆಂಕಟೇಶ್‌ ಹೇಳಿದರು.

 ಪಿರಿಯಾಪಟ್ಟಣ : ದೇಶ ಮತ್ತು ರಾಜ್ಯದ ಉಳಿವಿಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಕೆ. ವೆಂಕಟೇಶ್‌ ಹೇಳಿದರು.

ತಾಲೂಕಿನ ತರಿಕಲ… ಕಾವಲು ಗ್ರಾಮದಲ್ಲಿ ನಡೆದ ಕಾಂಗ್ರೆಸ… ಪಕ್ಷ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿರುವ ಬಿಜೆಪಿ ಹಾಗೂ ರಾಜಕೀಯ ಪಕ್ಷವಾಗದೆ ಕುಟುಂಬ ಪಕ್ಷವಾಗಿರುವ ಜೆಡಿಎಸ್‌ ಅನ್ನು ಅಧಿಕಾರದಿಂದ ದೂರವಿಟ್ಟು ಮಧ್ಯಮ ವರ್ಗ ಕಾರ್ಮಿಕರು ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ, ತಾಲೂಕಿನಲ್ಲಿ ರಾಜಕಾರಣವನ್ನು ಹೊಲಸು ಮಾಡಿ ದುಡ್ಡು ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಶಾಸಕ ಹಾಗೂ ಮೈಮುಲ… ಅಧ್ಯಕ್ಷರನ್ನು ಅಧಿಕಾರದಿಂದ ಈ ಬಾರಿ ಕಿತ್ತು ಬಿಸಾಡುವ ಉದ್ದೇಶದಿಂದ ಅಭಿವೃದ್ಧಿ ಪರ ಇರುವ ಕಾಂಗ್ರೆಸ್‌ಗೆ ಅನ್ಯ ಪಕ್ಷಗಳನ್ನು ತೊರೆದು ಮುಖಂಡರು ಯುವಕರು ಸೇರ್ಪಡೆಯಾಗುತ್ತಿರುವುದು ಚುನಾವಣಾ ಫಲಿತಾಂಶದ ದಿಕ್ಸೂಚಿಯಾಗಿದೆ, ನನ್ನ ಜೊತೆಯಲ್ಲಿದ್ದ ಅವರಿಗೆ ರಾಜಕೀಯ ಶಕ್ತಿ ನೀಡಿ ಬೆಳೆಸಿದ್ದೆ ಆತನ ವರ್ತನೆ ನೋಡಿ 20 ವರ್ಷಗಳ ಹಿಂದೆಯೇ ನನ್ನ ಜೊತೆಯಿಂದ ಹೊರ ಹಾಕಿದೆ ನೀತಿ ಸಂಹಿತೆ ಜಾರಿಯಾದ ಮೇಲೆ ಅವರ ಬೆಂಬಲಿಗರನ್ನು ಬ್ಯಾಟರಿ ಹಾಕಿ ಹುಡುಕುವಂತೆ ಅವರ ಜೊತೆಯಲ್ಲಿದ್ದವರು ನಮ್ಮ ಪಕ್ಷ ಸೇರುತ್ತಿರುವುದು ಸಂತಸದ ವಿಷಯ ಎಂದರು.

ಆದಿ ಜಾಂಬವ ಸಮಾಜದ ಜಿಲ್ಲಾ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್‌, ವಿಧಾನಪರಿಷತ್‌ ಸದಸ್ಯ ಡಿ. ತಮ್ಮಯ್ಯ ಸಹೋದರ ಡಿ. ಕುಮಾರ್‌, ಬೆಟ್ಟದಪುರ ಬ್ಲಾಕ್‌ ಕಾರ್ಯದರ್ಶಿ ಪುಟ್ಟರಾಜು, ಮುಖಂಡ ಈರಯ್ಯ, ನಿವೃತ್ತ ಶಿಕ್ಷಕ ನಾಗಣ್ಣೇಗೌಡ ಮಾತನಾಡಿದರು. ಈ ವೇಳೆ ಗ್ರಾಮದ ಹಲವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕಾಂಗ್ರೆಸ್‌ ಅಧ್ಯಕ್ಷ ಡಿ.ಟಿ. ಸ್ವಾಮಿ, ರಹಮತ್‌ ಜಾನ್‌ ಬಾಬು, ಕೆಪಿಸಿಸಿ ಸದಸ್ಯ ನಿತಿನ್‌ ವೆಂಕಟೇಶ್‌, ಮುಖಂಡರಾದ ಹೊಲದಪ್ಪ, ನಾಗಣ್ಣ, ಬೆಕ್ಕರೆ ನಂಜುಂಡಸ್ವಾಮಿ, ಮೋಹನ್‌ ಮಾಸ್ಟರ್‌, ರಾಮಚಂದ್ರ, ಶಿವಣ್ಣ, ಪುಟ್ಟಯ್ಯ, ಮಲ್ಲಯ್ಯ, ಮಹೇಂದ್ರ ಮತ್ತು ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಇದ್ದರು.

ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳ ಆಯ್ಕೆ

ದಾಂಡೇಲಿ : ದಾಂಡೇಲಿ ಬ್ಲಾಕ್‌ ಕಾಂಗ್ರೆಸ್‌ ನೂತನ ಪದಾಧಿಕಾರಿಗಳನ್ನು ಶಾಸಕ ಆರ್‌.ವಿ. ದೇಶಪಾಂಡೆ ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ದಾಂಡೇಲಿ ಬ್ಲಾಕ್‌ ಕಾಂಗ್ರೆಸ್‌ ನೂತನ ಅಧ್ಯಕ್ಷ ವಿಠ್ಠಲ ಆರ್‌. ಹೆಗಡೆ ತಿಳಿಸಿದರು.

ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ನೂತನ ಉಪಾಧ್ಯಕ್ಷರಾಗಿ ರವೀಂದ್ರನಾಥ ಪೆಟು ನಾಯ್ಕ, ಗೌಸ್‌ ಖತಿಬ, ಅಡಿವೆಪ್ಪ ಭದ್ರಕಾಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್‌.ಎಸ್‌. ಪೂಜಾರ, ಮೊಹಮ್ಮದ ಇಕ್ಬಾಲ ಶೇಖ, ಮೋಹನ ಹಲವಾಯಿ, ಅನಿಲ ದಂಡಗಲ, ಪೌಲ್‌ ಫರ್ನಾಂಡಿಸ್‌ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ದಿವಾಕರ ನಾಯ್ಕ, ಶಿವಲೀಲಾ ಚೌಡಿ, ರಫೀಕ್‌ ಅಹಮ್ಮದ ಖಾನ್‌, ಫ್ರಾನ್ಸಿಸ್‌ ಮಾಸ್ಕರನೆಸ್‌, ಅನ್ವರ ಪಠಾಣ, ಕಿರಣ ಸಿಂಗ್‌ ರಜಪೂತ, ಪ್ರಮೀಳಾ ಮಾನೆ, ಮೆಥ್ಯು ಡೆವಿಡ್‌ ಕೊಂಡಕಿ, ಮೀನಾಕ್ಷಿ ಕನ್ಯಾಡಿ, ದವಲ್‌ಸಾಬ್‌ ಕಾಸೀಮ್‌ಸಾಬ್‌ ನೀರಲಗಿ, ರೇಣುಕಾ ಭಜಂತ್ರಿ ಹಾಗೂ ಪಕ್ಷದ ಖಜಾಂಚಿಯಾಗಿ ಬಶೀರ ಗಿರಿಯಾಳ ಆಯ್ಕೆಗೊಂಡಿದ್ದಾರೆ ಎಂದು ತಿಳಿಸಿದರು.

ದಾಂಡೇಲಿ ಕಾಂಗ್ರೆಸ್‌ ಮಹಿಳಾ ಘಟಕಾಧ್ಯಕ್ಷೆ ರೇಣುಕಾ ಬಂದಮ್ಮ, ಅಬ್ದುಲ ಸತ್ತಾರ ಅಜ್ರೇಕರ, ರಾಮಲಿಂಗ ಜಾಧವ, ಕೀರ್ತಿ ಗಾಂವಕರ, ಎಸ್‌.ಎಸ್‌. ಪೂಜಾರ, ಗೌಸ್‌ ಖತಿಬ್‌, ಪ್ರತಾಪ ಸಿಂಗ್‌ ರಜಪೂತ ಹಾಗೂ ಪಕ್ಷದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.