ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟವನ್ನು ಪೊಲೀಸ್ ಇಲಾಖೆ ನಿಯಂತ್ರಿಸುತ್ತಿದ್ದು, ಕರ್ನಾಟಕ ಪೊಲೀಸ್ ರಾಜ್ಯವಾಗುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಆರೋಪಿಸಿದ್ದಾರೆ.
ಮೈಸೂರು(ಫೆ.20): ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟವನ್ನು ಪೊಲೀಸ್ ಇಲಾಖೆ ನಿಯಂತ್ರಿಸುತ್ತಿದ್ದು, ಕರ್ನಾಟಕ ಪೊಲೀಸ್ ರಾಜ್ಯವಾಗುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಆರೋಪಿಸಿದ್ದಾರೆ.
ರಾಜ್ಯದ ಹಲವು ನಗರ ಪೊಲೀಸ್ ಆಯುಕ್ತರು ಆರ್‌ಎಸ್‌ಎಸ್ ಸೂತ್ರದ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ವಿರುದ್ಧ ದನಿ ಎತ್ತುವವರನ್ನು ಕಾನೂನು ಬಾಹಿರವಾಗಿ ಬಂಧಿಸಿರುವುದು ಖಂಡನೀಯ. ಬೆಂಗಳೂರು, ಮಂಗಳೂರಿನಲ್ಲಿ ಅನಗತ್ಯವಾಗಿ 144 ಜಾರಿಗೊಳಿಸಲಾಯಿತು. ಅಲ್ಲದೆ ರಾಯಚೂರಿನಲ್ಲಿ ಸಿಎಎ ವಿರುದ್ಧ ಭಿತ್ತಿಪತ್ರ ಹಂಚಿದಕ್ಕಾಗಿ ಸಾಮಾಜಿಕ ಹೋರಾಟಗಾರರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಜೆಪಿ ಏಜಂಟರಂತೆ ವರ್ತನೆ:
ಚಿತ್ರದುರ್ಗದಲ್ಲಿ ಗೋಡೆ ಬರಹ ಕಾರಣಕ್ಕಾಗಿ ಹೋರಾಟಗಾರರನ್ನು ಬೆದರಿಸಲಾಗಿದೆ. ಬೀದರ್‌ನ ಶಾಹೀನ್ ಶಾಲೆಯಲ್ಲಿ ಸಾಮಾಜಿಕ ನಾಟಕ ಪ್ರದರ್ಶಿಸಿದ ಮಕ್ಕಳು ಮತ್ತು ಪೋಷಕರ ಮೇಲೆ ರಾಷ್ಟ್ರದ್ರೋಹ ಕೇಸು ದಾಖಲಿಸಿ ಜೈಲಿಗೆ ಅಟ್ಟಿರುವುದು ಖಂಡನೀಯ. ಈಗ ಅವರಿಗೆ ಜಾಮೀನು ಸಿಕ್ಕಿದೆ. ಕಾನೂನು ಬಾಹಿರವಾಗಿ ಮಕ್ಕಳ ಹಕ್ಕು ಉಲ್ಲಂಘನೆ ಮಾಡಿ ವಿಚಾರಣೆ ನಡೆಸಿದ್ದಾರೆ. ಇವೆಲ್ಲವೂ ಪೊಲೀಸ್ ರಾಜ್ಯವನ್ನಾಗಿ ಮಾಡಲು ನಡೆಯುತ್ತಿರುವ ಹುನ್ನಾರು. ಬಿಜೆಪಿ ಏಜೆಂಟರಂತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದರು.
ಭೂಗರ್ಭದಿಂದ ಲೀಥಿಯಂ ಪಡೆವ ಕಾರ್ಯ ಶುರು: 50 ಎಕರೆ ಭೂಮಿ ಅಗೆತ
ಪೊಲೀಸ್ ಇಲಾಖೆ ಮೇಲೆ ಗೌರವವಿದೆ ಆದರೆ ಕೆಲ ರಾಜಕೀಯ ಅಜೆಂಡಾವುಳ್ಳ ಪೊಲೀಸರ ವಿರೋಧ ಹೋರಾಟ ನಡೆಸಬೇಕಿದೆ. ಸಂವಿಧಾನವನ್ನು ಅನುಸರಿಸುತ್ತಿವೆ ಎಂದು ಪ್ರಮಾಣ ವಚನ ಸ್ವೀಕರಿಸಿದ ಪೊಲೀಸರು ಅದಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇಂಥವರ ವಿರುದ್ಧ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಫೆ. 22 ರಂದು ಮೈಸೂರಿನಲ್ಲಿ ಪುರ ಭವನದಲ್ಲಿ ಫೆ.22 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ರಿಯಾಝ್, ಮಾತನಾಡಿ, ಮಂಗಳೂರಿನ ಗೋಲಿಬಾರ್‌ನಲ್ಲಿ ಪೊಲೀಸರದ್ದೆ ತಪ್ಪೆಂದು ವರದಿ ಬಂದಿದೆ. ಹೈಕೋಟ್ ಸಹ ಪೊಲೀಸರ ಮೇಲೆ ಕ್ರಮ ಕೈಗೊಂಡಿಲ್ಲವೇಕೆ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹೀಗಾಗಿ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜ್ಯ ಕಾರ‍್ಯದರ್ಶಿ ಆಶ್ರಫ್ ದಾವಣಗೆರೆ, ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ನದೀಮ್ ಇದ್ದರು.
ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್
ಐ ಲವ್ ಅಮೆರಿಕಾ, ಐ ಲವ್ ಇಂಗ್ಲೆಂಡ್ ಎಂಬಂತೆ ಪಾಕಿಸ್ತಾನ್ ಜಿಂದಾಬಾದ್ ಎಂದರೆ ತಪ್ಪು ಹೇಗಾಗುತ್ತದೆ. ನಾವು ಈ ಮೂಲಕ ಹಾಗೆ ಕರೆದವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ತಮಗಿಷ್ಟವಾದ ದೇಶಕ್ಕೆ ಜಿಂದಾಬಾದ್ ಹೇಳಿದರೆ ತಪ್ಪು ಎನಿಸಲ್ಲ ಎಂದು ಸಿಎಫ್‌ಐ ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ತಿಳಿಸಿದ್ದಾರೆ.
