'ಮಳೆ ಬಾರದಿದ್ದರೆ ಬತ್ತ ಬೆಳೆಯುವುದು ಹೇಗೆ?' ಜೋಯಿಡಾ ರೈತರ ಆತಂಕ

 ತಾಲೂಕಿನಲ್ಲಿ ಶೇ. 80ರಷ್ಟುಅರಣ್ಯವಿದೆ. ಕಾಳಿ ನದಿ ಹರಿದಿದೆ. ಕರ್ನಾಟಕದ ಕಾಶ್ಮೀರ ಎಂದೇ ಹೇಳಲಾಗುತ್ತದೆ. ಆದರೂ ಮಳೆ ಬಾರದೇ ನದಿ-ಹಳ್ಳ-ಕೊಳ್ಳಗಳೆಲ್ಲ ಬತ್ತಿ ಹೋಗಿವೆ. ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ.

Karnataka monsoon delay lack of rain joida farmers worry at uttarakannada rav

ಅನಂತ ದೇಸಾಯಿ

ಜೋಯಿಡಾ (ಜು.9) : ತಾಲೂಕಿನಲ್ಲಿ ಶೇ. 80ರಷ್ಟುಅರಣ್ಯವಿದೆ. ಕಾಳಿ ನದಿ ಹರಿದಿದೆ. ಕರ್ನಾಟಕದ ಕಾಶ್ಮೀರ ಎಂದೇ ಹೇಳಲಾಗುತ್ತದೆ. ಆದರೂ ಮಳೆ ಬಾರದೇ ನದಿ-ಹಳ್ಳ-ಕೊಳ್ಳಗಳೆಲ್ಲ ಬತ್ತಿ ಹೋಗಿವೆ. ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಜೋರಾಗಿ ಸುರಿಯಬೇಕಿದ್ದ ಮಳೆ ಇಬ್ಬನಿಯಂತೆ ಬೀಳುತ್ತಿದ್ದು, ಜೋರು ಮಳೆ ನೋಡಿದ ರೈತರಿಗೆ ಇದು ಮಳೆಯಂತೆ ಅನ್ನಿಸುತ್ತಿಲ್ಲ. ಹೀಗಾದರೆ ನಾವು ಬತ್ತ ಬೆಳೆಯುವುದು ಹೇಗೆ? ಎನ್ನುವ ಆತಂಕ ಅವರದು.

ಸಂಪೂರ್ಣ ಹದಗೆಟ್ಟಶಿರಸಿ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ!

ತಾಲೂಕಿನಲ್ಲಿ 5 ಸಾವಿರ ಹೆಕ್ಟೇರ್‌ ಬತ್ತ ಬೆಳೆಯುವ ಕ್ಷೇತ್ರವಿದೆ. ತಾಲೂಕಿನ 16 ಗ್ರಾಪಂಗಳ ಪೈಕಿ ಹತ್ತಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಬತ್ತವನ್ನು ಹೇರಳವಾಗಿ ಬೆಳೆಯಲಾಗುತ್ತದೆ.

ಬತ್ತಕ್ಕೆ ಕೋತಾ:

ಕಳೆದ ವರ್ಷ ಮಳೆಯ ವೈಪರೀತ್ಯದಿಂದಾಗಿ ಸಾವಿರಾರು ಎಕರೆ ಬತ್ತ ಬೆಳೆಯುವ ಕ್ಷೇತ್ರವನ್ನು ರೈತರು ಬತ್ತ ಬೆಳೆಯದೆ ಕೈ ಬಿಟ್ಟಿದ್ದರು. ಈ ವರ್ಷದ ಮಳೆ ಇನ್ನು ಸರಿಯಾಗಿ ಆರಂಭವಾಗಿಲ್ಲ. ಬತ್ತ ಬೆಳೆಯಬೇಕೋ ಬೇಡವೋ ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಮಳೆ ಒಂದು ನಿಗದಿತ ಮಟ್ಟದಲ್ಲಿ ಬಿದ್ದು ಹಳ್ಳ- ಕೊಳ್ಳಗಳು ತುಂಬಿದರೆ ಮಾತ್ರ ನಮಗೆ ಬೆಳೆ ಬೆಳೆಯಲು ಧೈರ್ಯ ಬರುತ್ತದೆ. ಮಳೆ ಬರಬಹುದೆಂದು ಹೇಗೆ ಹೇಳುವುದು. ಆದರೂ ನಮಗೆ ಮಳೆಯ ಬಗ್ಗೆ ಭರವಸೆ ಇದೆ ಎನ್ನುತ್ತಾರೆ ತಾಲೂಕಿನ ರೈತರು.

ಈ ವರ್ಷದಲ್ಲಿ ಈವರೆಗೆ ತಾಲೂಕಿನಲ್ಲಿ 308 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿನ ಕೆಲವು ರೈತರು ಬತ್ತದ ಸಸಿಮಡಿ ತಯಾರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾದರೆ, ಎಲ್ಲ ರೈತರೂ ಕೃಷಿ ಚುವಟಿಕೆಯಲ್ಲಿ ತೊಡಗುತ್ತಾರೆ. ಕೃಷಿ ಇಲಾಖೆ ರೈತರ ಬೇಡಿಕೆಗೆ ಸಿದ್ಧವಾಗಿದೆ. ವಿವಿಧ ತಳಿಯ ಬತ್ತದ ಬೀಜ 800 ಕ್ವಿಂಟಲ್‌ ದಾಸ್ತಾನು ಇದ್ದು, ಅವಶ್ಯ ಬಿದ್ದಲ್ಲಿ ತರಿಸಿಕೊಡುತ್ತೇವೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಖಾನಾಪುರ: ವಾಹನ ಡಿಕ್ಕಿ, ಮೂವರು ಕೃಷಿ ಕಾರ್ಮಿಕ ಮಹಿಳೆಯರು ಸಾವು

ಸುಪಾ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಸಾಕಷ್ಟುನೀರಿತ್ತು. ಈ ವರ್ಷ ಜಲಾಶಯದ ನೀರಿನ ಮಟ್ಟ525 ಮೀಟರ್‌ಗೆ ಇಳಿದಿದೆ.

ರೈತರಿಗೆ ಬೇಕಾದ ಬೀಜ, ಗೊಬ್ಬರ ಎಲ್ಲವೂ ಸಾಕಷ್ಟುಪ್ರಮಾಣದಲ್ಲಿ ದಾಸ್ತಾನು ಇದೆ. ಮಳೆ ಹಿನ್ನಡೆ ಆಗಿದೆ. ರೈತರು ಸಸಿ ಮಡಿ ಮಾಡುತ್ತಿದ್ದಾರೆ. ತಾಲೂಕಿನಲ್ಲಿನ ರೈತರಿಗೆ ಇಲಾಖೆಯಿಂದ ಎಲ್ಲ ಸಹಕಾರ ನೀಡುತ್ತಿದ್ದೇವೆ. ಮಳೆ ಇಲ್ಲದೆ ಬರಗಾಲ ಘೋಷಣೆ ಮಾಡುವುದಕ್ಕೂ ಸರ್ಕಾರ ಪ್ರಕೃತಿ ವಿಕೋಪ ನಿರ್ವಹಣಾ ಘಟಕವನ್ನು ಕೇಳಿ ಸೂಕ್ತ ನಿರ್ಧಾರ ಮಾಡುತ್ತದೆ.

ಪಿ.ಐ. ಮಾನೆ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ

ಈಗಾಗಲೇ ಮಳೆ ಸಾಕಷ್ಟುಪ್ರಮಾಣದಲ್ಲಿ ಬೀಳಬೇಕಾಗಿತ್ತು. ನಾನು ಸಸಿಮಡಿ ಸಿದ್ಧತೆ ಮಾಡುತ್ತಿದ್ದೇನೆ. ಇನ್ನು 15 ದಿನಗಳ ಒಳಗೆ ಮಳೆ ಜೋರಾಗಿ ಬೀಳದೆ ಹೋದರೆ ಬತ್ತದ ನಾಟಿ ಮಾಡಲು ಸಾಧ್ಯವಿಲ್ಲ. ಅಷ್ಟರ ಒಳಗೆ ಸಸಿಮಡಿ ಆಗಲೇಬೇಕು. ಮುಂದೆ 3 ತಿಂಗಳು ಮಳೆ ಸರಿಯಾಗಿ ಬೀಳದಿದ್ದರೆ. ಬತ್ತ ಕೈ ಸಿಗಲ್ಲ.

ದಾಮು ಮಂಥೆರೋ, ಕೃಷಿಕ

Latest Videos
Follow Us:
Download App:
  • android
  • ios