ಪಾಂಡವಪುರ [ಅ.03]:  ರಾಜ್ಯದಲ್ಲಿ ಪ್ರಸ್ತತ ನಡೆಯುತ್ತಿರುವ ರಾಜಕೀಯ ನಡವಳಿಗಳನ್ನು ಗಮನಿಸಿದರೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ. ಚುನಾವಣೆ ನಡೆದರೆ ಜೆಡಿಎಸ್‌ ಹೆದರಿ ಕೂರುವುದಿಲ್ಲ ಎಂದು ಮಾಜಿ ಸಚಿವ ಸಿ ಎಸ್‌.ಪುಟ್ಟರಾಜು ಹೇಳಿದರು.

ಪಟ್ಟಣದ ಹೇಮಾವತಿ ಬಡಾವಣೆಯ ಹಿಂಭಾಗದ ಐಟಿಐ ಕಾಲೇಜಿನ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಲಯನ್ಸ್‌ ಕ್ಲಬ್ ಆಫ್‌ ಫ್ರೆಂಚ್‌ ರಾಕ್ಸ್‌ ಭವನದ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಪುಟ್ಟರಾಜು. ಈ ಮಾಧ್ಯಮದವರು ಯಡಿಯೂರಪ್ಪನವರನ್ನು ರಾಜಹುಲಿ ಎಂದು ಬಿಂಬಿಸಿದರು. ಆದರೆ ಅವರ ಪಕ್ಷದ ಶಾಸಕರುಗಳು ಅವರನ್ನು ಬಗ್ಗಿ ನಡೆಯುವಂತೆ ಮಾಡುತ್ತಿದ್ದಾರೆಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಎಂ ಯಡಿಯೂರಪ್ಪನವರ ಮಾತುಗಳು ಸದ್ಯದ ರಾಜಕೀಯ ಬೆಳವಣಿಗೆ, ಪರಿಸ್ಥಿತಿಯನ್ನು ಬಿಂಬಿಸುತ್ತಿವೆ. ಭಾಷಣದಲ್ಲಿ ಬೆಳವಣಿಗೆಗಳ ಬಗ್ಗೆ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪನವರು ಎಷ್ಟುದಿನ ಆಳ್ವಿಕೆ ನಡೆಸುತ್ತಾರೋ ಅಷ್ಟೇ ಅವರ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ. ರಾಜಕೀಯವಾಗಿ ಕುಗ್ಗುತ್ತಾರೆ ಎಂಬುದು ಗೋಚರವಾಗುತ್ತಿದೆ ಎಂದರು.

ಸದ್ಯದ ಸ್ಥಿತಿಯಲ್ಲಿ ನಾವು ಸರ್ಕಾರ ರಚಿಸುವ ಯಾವುದೇ ಚಿಂತನೆ ನಮ್ಮಲಿಲ್ಲ. ಒಂದು ವೇಳೆ ಮಧ್ಯಾಂತರ ಚುನಾವಣೆಯ ನಿಗದಿಯಾದರೂ ಸಹ ಹೆದರಿ ಕುಳಿತುಕೊಳ್ಳುವ ಜಯಮಾನ ನಮ್ಮದಲ್ಲ. ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದರು. ಸಂದರ್ಭದಲ್ಲಿ ಲಯನ್ಸ್‌ ಕ್ಲಬ್‌ ಜಿಲ್ಲಾ ರಾಜ್ಯಪಾಲ ನಾಗರಾಜು ಬೈರಿ,ಮಾಜಿ ಜಿಲ್ಲಾ ರಾಜ್ಯಪಾಲ ಲ. ದೇವೇಗೌಡ,ಉಮಾದೇವಿ, ಅಧ್ಯಕ್ಷ ಎಲ್ ಆದರ್ಶ, ಲಯನ್ಸ್‌ ಕ್ಲಬ್‌ ನ ಸದಸ್ಯರಾದ ಇ.ಎಸ್‌.ನಾಗರಾಜು, ಪ್ರೊ.ನಾರಾಯಣಗೌಡ, ಚನ್ನೇಗೌಡ, ಕೆ.ಎಚ್‌.ರಾಮೇಗೌಡ, ನವೀನ್‌, ಚಂದನ್‌ ಇದ್ದರು.