Bengaluru Traffic advisory ಲೋಕಸಭೆ ಮತ ಎಣಿಕೆ ಹಿನ್ನೆಲೆ ಬೆಂಗಳೂರಿನಲ್ಲಿ ಈ ರಸ್ತೆಗಳು ಬಂದ್!
ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಹೊಸ ಸಲಹೆಯನ್ನು ನೀಡಿದೆ, ವಾಹನಗಳ ನಿಲುಗಡೆಯನ್ನು ನಿಷೇಧಿಸುವ ಪ್ರಮುಖ ರಸ್ತೆಗಳು ಮತ್ತು ಪರ್ಯಾಯ ಮಾರ್ಗಗಳನ್ನು ಪಟ್ಟಿ ಮಾಡಿದೆ.
ಬೆಂಗಳೂರು (ಜೂ.4): ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಹೊಸ ಸಲಹೆಯನ್ನು ನೀಡಿದೆ, ವಾಹನಗಳ ನಿಲುಗಡೆಯನ್ನು ನಿಷೇಧಿಸುವ ಪ್ರಮುಖ ರಸ್ತೆಗಳು ಮತ್ತು ಪರ್ಯಾಯ ಮಾರ್ಗಗಳನ್ನು ಪಟ್ಟಿ ಮಾಡಿದೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಂಚಾರ ಕೇಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ಈ ಕೆಳಗಿನ ರಸ್ತೆಗಳಲ್ಲಿ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಮತ ಎಣಿಕೆ ಸುಗಮವಾಗಿ ಸಾಗಲು ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಒಂಬತ್ತು ಪ್ರದೇಶಗಳನ್ನು ಸೂಚಿಸಿದೆ.
ಲೋಕಸಭಾ ಮತ ಎಣಿಕೆ ಹಿನ್ನೆಲೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ
RRMR ರಸ್ತೆ - ರಿಚ್ಮಂಡ್ ವೃತ್ತದಿಂದ ಹಡ್ಸನ್ ಜಂಕ್ಷನ್
ವಿಠ್ಠಲ್ ಮಲ್ಯ ರಸ್ತೆ - ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್
ಎನ್.ಆರ್.ರಸ್ತೆ - ಹಡ್ಸನ್ ವೃತ್ತದಿಂದ ಟೌನ್ ಹಾಲ್ ಜಂಕ್ಷನ್
ಕೆಬಿ ರಸ್ತೆ - ಎಚ್‌ಎಲ್‌ಡಿ ಜಂಕ್ಷನ್‌ನಿಂದ ಕ್ವೀನ್ಸ್ ಜಂಕ್ಷನ್.
ಕೆ.ಜಿ.ರಸ್ತೆ - ಪೊಲೀಸ್ ಕಾರ್ನರ್ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್ ಜಂಕ್ಷನ್.
ನೃಪತುಂಗ ರಸ್ತೆ - ಕೆಆರ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್.
ಕ್ವೀನ್ಸ್ ರಸ್ತೆ - ಬಾಳೇಕುಂದ್ರಿ ವೃತ್ತದಿಂದ CTO ವೃತ್ತಕ್ಕೆ.
ಸೆಂಟ್ರಲ್ ಸ್ಟ್ರೀಟ್ ರಸ್ತೆ - ಬಿಆರ್‌ವಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತ
ಎಂಜಿ ರಸ್ತೆ - ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್
ಪರ್ಯಾಯವಾಗಿ, ಪೊಲೀಸರು ಎರಡು ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿದ್ದು, ಸೇಂಟ್ ಜೋಸೆಫ್ ಕಾಲೇಜು ಮೈದಾನ, ಮತ್ತು ದಿ
ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳವನ್ನು ಘೋಷಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಪೊಲೀಸರ ಅಧಿಕೃತ ಅಕೌಂಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.