ಬೆಂಗಳೂರು(ಮಾ.04): ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಅವರು ಕೊರೋನಾ ವೈರಸ್ ತಡೆಯಲು ಮಾಸ್ಕ್‌ ಧರಿಸುವ ವಿಚಾರವಾಗಿ ಮಾತನಾಡುತ್ತಲೇ ಹೆಲ್ಮೆಟ್ ಧರಿಸುವುದರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ.

ದೇಶವೇ ಕೊರೋನಾ ವೈರಸ್ ಬಗ್ಗೆ ಜಾಗೃತಿ ವಹಿಸಿದ್ದು, ಭಯಂಕರ ವೈರಸ್ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. 3 ಸಾವಿರ ಜನ ಮೃತಪಟ್ಟಾಗಲೇ ಜನ ಎಚ್ಚೆತ್ತುಕೊಂಡು ಸರ್ಜಿಕಲ್ ಮಾಸ್ಕ್‌ಗಳನ್ನು ಬಳಸಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮಾಸ್ಕ್‌ಗಾಗಿ ಬೇಡಿಕೆಯೂ ಹೆಚ್ಚಿದೆ. ಇದೇ ಸಂದರ್ಭ ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಈ ಸಂಬಂಧ ಅರ್ಥಪೂರ್ಣ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ.

Strange paradox! Isn’t it. pic.twitter.com/RtMPVGTeSJ

— DGP KARNATAKA (@DgpKarnataka) March 3, 2020

ಕೊರೋನಾ ವೈರಸ್‌ನಿಂದ ಮೂರು ಸಾವಿ ಜನರ ಮೃತಪಟ್ಟಿದ್ದಾರೆ. ಈಗ ಜಗತ್ತಿನ ಜನರೆಲ್ಲರೂ ಸರ್ಜಿಕಲ್ ಮಾಸ್ಕ್ ಧರಿಸಲು ಮುಗಿಬೀಳುತ್ತಿದ್ದಾರೆ. ಆದರೆ ಹೆಲ್ಮೆಟ್ ಧರಿಸದೆ ಪ್ರತಿ ವರ್ಷ 10 ಲಕ್ಷದ 35 ಸಾವಿರದಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಆದರೂ ಜನರಿಗೆ ಹೆಲ್ಮೆಟ್ ಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.