* ಬಿಯರ್ ಬೆಲೆಯೂ 5-10 ರು. ಏರಿಕೆ ಸಾಧ್ಯತೆ* ರಷ್ಯಾ ಯುದ್ಧದ ಕಾರಣ ಅಗತ್ಯ ವಸ್ತು ಪೂರೈಕೆ ಸಮಸ್ಯೆ* ಡೀಸೆಲ್, ಪೆಟ್ರೋಲ್ ದರ ಏರಿಕೆಯಿಂದಲೂ ಪರಿಣಾಮ* ಈಗಾಗಲೇ ಬಾರಲ್ಲಿ ಅನಧಿಕೃತವಾಗಿ 10 ರು. ಹೆಚ್ಚು ವಸೂಲಿ
ಬೆಂಗಳೂರು(ಏ.07) ಬೇಸಿಗೆಯಲ್ಲಿ (Summer) ತಂಪಾಗಲು ಮದ್ಯಪ್ರಿಯರು(Liquor) ಆಯ್ಕೆ ಮಾಡುತ್ತಿದ್ದ ಬಿಯರ್‌ಗೂ (Beer) ಈಗ ಬೆಲೆ ಏರಿಕೆ ಬಿಸಿ ತಟ್ಟಿದೆ. ಈಗಾಗಲೇ ಬಾರ್, ರೆಸ್ಟೋರೆಂಟ್‌ಗಳಲ್ಲಿ ಬಿಯರ್ ಬಾಟಲ್‌ಗೆ ಅನಧಿಕೃತವಾಗಿ 5 ರಿಂದ 10 ರು. ಹೆಚ್ಚಿನ ದರ ವಸೂಲಿ ಮಾಡುತ್ತಿದ್ದು, ಕಂಪನಿಗಳ ಮನವಿ ಮೇರೆ ಮುಂದಿನ ವಾರ ಅಬಕಾರಿ ಇಲಾಖೆಯಿಂದಲೇ ಅಧಿಕೃತವಾಗಿ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ.
‘ಉಕ್ರೇನ್, ರಷ್ಯಾ ಯುದ್ಧದಿಂದ ಬಾರ್ಲಿ ಸೇರಿದಂತೆ ಬಿಯರ್ ಉತ್ಪಾದನೆಗೆ ಅಗತ್ಯ ವಸ್ತುಗಳ ಪೂರೈಕೆ ಸಮಸ್ಯೆಯಾಗಿ ಬೆಲೆ ಏರಿಕೆಯಾಗಿದೆ. ಜತೆಗೆ ಡೀಸೆಲ್ ಮತ್ತು ಪೆಟ್ರೊಲ್ ದರ ಹೆಚ್ಚಳದಿಂದ ಸಾಗಣೆ ದರವೂ ಅಧಿಕವಾಗಿದೆ. ಹೀಗಾಗಿ, ಬಿಯರ್ ಕಂಪನಿಗಳು ಪ್ರತಿ ಬಾಟಲ್‌ಗೆ 5 ರಿಂದ 10 ರು. ಬೆಲೆ ಹೆಚ್ಚಿಸಬೇಕು ಎಂದು ಅಬಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏ.15 ವೇಳೆ ಬಿಯರ್ ಮೇಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ’ ಎಂದು ಬಿಯರ್ ಕಂಪನಿ ಮೂಲಗಳು ತಿಳಿಸಿವೆ.
ಆದರೆ, ಈಗಾಗಲೇ ರಾಜ್ಯದ ಬಹುತೇಕ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಿಂಗ್‌ಫಿಷರ್, ಬಡ್‌ವೈಸರ್, ಟುಬರ್ಗೋ ಬ್ರಾಂಡ್‌ನ ಬಿಯರ್ ಬಾಟಲ್‌ಗಳ ಮೇಲೆ 5-10 ರು. ಹೆಚ್ಚಿನ ದರವನ್ನು ವಸೂಲಿ ಮಾಡಲಾಗುತ್ತಿದೆ. ಹೆಚ್ಚಳ ದರ ಮುದ್ರಣವಾಗಿಲ್ಲ ಎಂದು ಗ್ರಾಹಕರು ಪ್ರಶ್ನಿಸಿದರೆ, ಮುಂದಿನ ವಾರದಲ್ಲಿ ಮುದ್ರಣಗೊಂಡು ಬರುತ್ತದೆ ಎಂಬ ಉತ್ತರವನ್ನು ಬಾರ್, ರೆಸ್ಟೋರೆಂಟ್ ಸಿಬ್ಬಂದಿ/ಮಾಲೀಕರು ನೀಡುತ್ತಿದ್ದಾರೆ.
ಬಸ್‌ನಲ್ಲಿ ಬಿಯರ್ ಕುಡಿದು ತೂರಾಡಿದ ಶಾಲಾ ವಿದ್ಯಾರ್ಥಿನಿಯರು
*ಕಿಂಗ್‌ಫಿಶರ್ 30 ಲೀ. ಹಿಂದಿನ ದರ - 4,848 ರು. ಇಂದಿನ ದರ -5,540 ರು.
*ಬಡ್‌ವೈಸರ್ 30 ಲೀ. ಹಿಂದಿನ ದರ - 5,120 ರು. ಇಂದಿನ ದರ -5,780 ರು.
*ಕಿಂಗ್ ಫಿಷರ್ ಸ್ಟ್ರಾಂಗ್ (650 ಎಂ.ಎಲ್) ಎಂಆರ್‌ಪಿ - 155 ಬಾರ್ - 180 (ವಸೂಲಿ 195/200ರು.)
ಬಿಯರ್ ದರ ಹೆಚ್ಚಳವಿಲ್ಲ, ಸಚಿವ ಗೋಪಾಲಯ್ಯ ಸ್ಪಷ್ಟನೆ: ಸರ್ಕಾರದಿಂದ ಬಿಯರ್ ದರ ಹೆಚ್ಚಳ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಚರ್ಚೆಯನ್ನು ನಡೆಸಿಲ್ಲ. ದರ ಹೆಚ್ಚಳ ಮಾಡುವುದಿಲ್ಲ. ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಇನ್ನು ಬಾರ್, ರೆಸ್ಟೋರೆಂಟ್‌ಗಳು ಆನ್‌ಲೈನ್ ಮೂಲಕವೇ ಮದ್ಯ ದಾಸ್ತಾನು (ಸ್ಟಾಕ್) ಬುಕ್ಕಿಂಗ್ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದರಿಂದ ದಾಸ್ತಾನು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಗುರುವಾರದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ‘ಕನ್ನಡಪ್ರಭ’ಕ್ಕೆ ಸ್ಪಷ್ಟನೆ ನೀಡಿದ್ದಾರೆ.
ತಾಂತ್ರಿಕ ತೊಂದರೆ ಕಾಟ: ಮದ್ಯ ಪೂರೈಕೆಗೆ ಆನ್‌ಲೈನ್ ಮೂಲಕವೇ ಬೇಡಿಕೆ ಸಲ್ಲಿಸಬೇಕು (ವೆಬ್ ಇಂಡೆಂಟ್) ಎಂಬ ಹೊಸ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ರಾಜ್ಯಾದ್ಯಂತ ಮದ್ಯ ಮಾರಾಟ ಮಳಿಗೆಗಳಿಗೆ ಸರಿಯಾಗಿ ಮದ್ಯ ಪೂರೈಕೆಯಾಗಿಲ್ಲ. ಈ ಸಮಸ್ಯೆ ಗುರುವಾರದವರೆಗೂ ಮುಂದುವರೆಯುವ ಸಾಧ್ಯತೆಯಿರುವುದರಿಂದ ಮದ್ಯ ಮಾರಾಟ ಮಳಿಗೆಗಳು ವ್ಯಾಪಾರ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಮದ್ಯದಂಗಡಿಗಳಿಗೆ ಕರ್ನಾಟಕ ರಾಜ್ಯ ಪಾನಿಯ ನಿಗಮ (ಕೆಎಸ್‌ಬಿಸಿಎಲ್) ದ ಮೂಲಕವೇ ಮದ್ಯ ಸರಬರಾಜಾಗುತ್ತಿದ್ದು, ಈ ಮೊದಲು ಮದ್ಯದಂಗಡಿಗಳು ಅಗತ್ಯ ಸ್ಟಾಕ್ ಅನ್ನು ನಿತ್ಯ ಅಥವಾ ಎರಡ್ಮೂರು ದಿನಕ್ಕೊಮ್ಮೆ ಬ್ಯಾಂಕ್‌ನಲ್ಲಿ ಹಣ ಪಾವತಿಸಿ ಡಿಪೋಗಳಿಂದ ಪಡೆಯುತ್ತಿದ್ದವು. ಆದರೆ ಇದರಿಂದ ಬಾರ್‌ಗಳ ಮಾಲೀಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೊಸ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಅವಾಂತರ ಸೃಷ್ಟಿಯಾಗಿದೆ.
