ಗೋವಾದಲ್ಲಿ ಪಾರ್ಟಿ ಮುಗಿಸಿ ವಾಪಸ್ ಬರೋ ವೇಳೆ ಅಪಘಾತ: ಕರ್ನಾಟಕದ ಮೂವರ ದುರ್ಮರಣ
* ಗೋವಾದ ಮಾಪುಸಾದ ಕುಚೇಲಿ ಬಳಿ ನಡೆದ ಘಟನೆ
* ಪಾರ್ಟಿ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ನಡೆದ ಅಪಘಾತ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಬೆಳಗಾವಿ(ಮೇ.22): ಗೋವಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರ ದುರ್ಮರಣಕ್ಕೀಡಾಗಿದ್ದಾರೆ. ಮರಕ್ಕೆ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಗೋವಾದ ಮಾಪುಸಾದ ಕುಚೇಲಿ ಬಳಿ ಇಂದು(ಭಾನುವಾರ) ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.
ದುರ್ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಾರ್ಟಿ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ.
"
ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 8 ಮಂದಿ ಬಲಿ
ಮೃತರನ್ನ ಬೆಳಗಾವಿಯ ನಾಯರ್ ಅನಗೋಳ್ಕರ್ (28), ರೋಹನ್ ಗದಗ(26), ಸನ್ನು ಅನ್ವೇಕೆರ್ ಅಂತ ತಿಳಿದು ಬಂದಿದೆ. ಅಪಘಾತದಲ್ಲಿ ವಿಶಾಲ್ ಕಾರೇಕರ್(27)ಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಬದಿಯಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಾಪುಸಾ ಉತ್ತರ ಗೋವಾದ ಮಾಪುಸಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.