ವಿಜಯಪುರ: ಚುನಾವಣೆ ಹಿನ್ನೆಲೆ ಭೀಮಾತೀರದ ಗ್ಯಾಂಗ್‌ಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು..!
ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಶಾಂತಿಯುತವಾಗಿ ಎಲೆಕ್ಷನ್ ನಡೆಸಲು ಎಲ್ಲ ರೀತಿಯ ಕ್ರಮಗಳನ್ನ ತೆಗೆದುಕೊಂಡಿದೆ. ಅದ್ರಲ್ಲು ಭೀಮಾತೀರದ ಕುಖ್ಯಾತಿಯ ನಟೋರಿಯಸ್ ಕ್ರಿಮಿನಲ್ ಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.
ವಿಜಯಪುರ (ಏ.17) : ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಶಾಂತಿಯುತವಾಗಿ ಎಲೆಕ್ಷನ್ ನಡೆಸಲು ಎಲ್ಲ ರೀತಿಯ ಕ್ರಮಗಳನ್ನ ತೆಗೆದುಕೊಂಡಿದೆ. ಅದ್ರಲ್ಲು ಭೀಮಾತೀರದ ಕುಖ್ಯಾತಿಯ ನಟೋರಿಯಸ್ ಕ್ರಿಮಿನಲ್ ಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಭೀಮಾತೀರದಲ್ಲಿ ಆಕ್ಟಿವ್ ಆಗಿರೋ 4 ಗ್ಯಾಂಗ್ ಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟಿದೆ. ಅದ್ರಲ್ಲು ಬೆದರಿಸಿ, ಹೆದರಿಸಿ ಮತ ಹಾಕಿಸುವ ಕ್ರಿಮಿನಲ್ ಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಅದ್ರಲ್ಲು ಚುನಾವಣೆಯ ವ್ಯವಸ್ಥೆಯನ್ನೆ ಹಾಳುಗೆಡವ ಬಲ್ಲ ರೌಡಿಗಳಿಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ..
ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸ್ ಇಲಾಖೆ..!
ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಸೂವ್ಯವಸ್ಥಿತವಾಗಿ ಚುನಾವಣೆಯನ್ನ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನ ತೆಗೆದುಕೊಂಡಿವೆ. ಅದ್ರಲ್ಲು ಚುನಾವಣೆಯಲ್ಲಿ ಶಾಂತಿಸುವ್ಯಸ್ಥೆಗೆ ಧಕ್ಕೆ ತರಬಲ್ಲ, ಕ್ರಿಮಿನಲ್ಸ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದ್ರಲ್ಲು ರೌಡಿಶೀಟರ್ ಗಳಿಂದ ಬಾಂಡ್ ಓವರ್ ಮಾಡಿಸಿಕೊಳ್ಳುವ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. 10 ಲಕ್ಷದಿಂದ 25 ಲಕ್ಷದ ವರೆಗೆ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದೆ. ಕ್ರೈಂಗಳಲ್ಲಿ ಆಕ್ಟಿವ್ ಆಗಿರೋ ಕ್ರಿಮಿನಲ್ಸ್ ಗಳ ಮೇಲೆ ಈ ಮೂಲಕ ಹದ್ದಿನ ಕಣ್ಣು ಇಡಲಾಗಿದೆ..
Mann Ki Baat 100 Episodes: ಪ್ರಧಾನಿಯ 'ಮನಸಿನ ಮಾತಿಗೆ' ಶತಕದ ಸಂಭ್ರಮ!
ಭೀಮಾತೀರದ ಗ್ಯಾಂಗುಗಳ ಮೇಲೆ ಕಣ್ಣಿಟ್ಟ ಪೊಲೀಸರು..!
ಭೀಮಾತೀರದ ಅಂದಾಕ್ಷಣ ಎಲ್ಲರಿಗೂ ನೆನಪಾಗೋದೆ ಇಲ್ಲಿನ ಹತ್ಯಾಕಾಂಡಗಳು, ಗ್ಯಾಂಗ್ ವಾರ್ ಗಳು. ಅದ್ರಲ್ಲೂ ಚುನಾವಣಾ ಸಮಯದಲ್ಲಿ ಗಲಾಟೆಗಳು, ಗ್ಯಾಂಗ್ ವಾರ್ ಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದ್ದಾರೆ. ಭೀಮಾತೀರದಲ್ಲಿ ಆಕ್ಟಿವ್ ಇರುವ 4 ಗ್ಯಾಂಗ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಚಡಚಣ ಭಾಗದಲ್ಲಿ ಆಕ್ಟಿವ್ ಇರೋ ಚಡಚಣ ಗ್ಯಾಂಗ್, ಬೈರಗೊಂಡ, ಆಲಮೇಲ-ಅಪ್ಜಲಪುರ, ಆಳಂದ ಭಾಗದಲ್ಲಿ ಆಕ್ಟಿವ್ ಆಗಿರೋ ಬಾಗಪ್ಪ ಹರಿಜನ್ ಗ್ಯಾಂಗ್- ಇನ್ನು ಸಿಂದಗಿ ಆಲಮೇಲ ಭಾಗದಲ್ಲಿ ಆಕ್ಟಿವ್ ಇರುವ ಶಿರವಾಳ ಗ್ಯಾಂಗ್ ಸದಸ್ಯರ ಮೇಲು ಚಡಚಣ-ಆಲಮೇಲ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರತಿಯೊಬ್ಬರಿಂದಲು 25 ಲಕ್ಷದ ಬಾಂಡ್ ಓವರ್ ಮಾಡಿಕೊಂಡಿದ್ದಾರೆ.
ಧಮ್ಕಿ ಹಾಕಿ ಓಟು ಹಾಕಿಸ್ತಿದ್ದವರ ಮೇಲೆ ಸೆಕ್ಯೂರಿಟಿ ಕೇಸ್..!
ಚುನಾವಣೆಗಳಲ್ಲಿ ರೌಡಿಗಳು ಮತದಾರರಿಗೆ ಧಮ್ಕಿ ಹಾಕಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತಹಾಕಿಸೋ ಅನಿಷ್ಟ ಪರಂಪರೆ ಇದೆ. ಅದ್ರಲ್ಲು ಕ್ರೈಂ ಚಟುವಟಿಗಳು ಹೆಚ್ಚಾಗಿ ನಡೆಯುವ ವಿಜಯಪುರ ಜಿಲ್ಲೆಯಲ್ಲಿ ಇಂಥ 17 ಜನ ಕ್ರಿಮಿನಲ್ಸ್ ಗಳ ಮೇಲೆ ಪೊಲೀಸ್ ವಿಶೇಷವಾಗಿ ನಿಗಾ ಇಟ್ಟಿದ್ದಾರೆ. 17 ಜನರನ್ನು ಆಯಾ ಠಾಣೆಗಳಿಗೆ ಕರೆಯಿಸಿ ಪೊಲೀಸ್ ಅಧಿಕಾರಿಗಳು ಕಿಮ್ ಎನದಂತೆ ತಾಕೀತು ಮಾಡಿದ್ದಾರೆ. ಎಲ್ಲರ ಮೇಲು ಸೆಕ್ಯೂರಿಟಿ ಕೇಸ್ ಹಾಕಲಾಗಿದೆ. ಕೊಂಚ ಬಾಲ ಬಿಚ್ಚಿದ್ರು ಆ ಬಾಲವನ್ನ ಕಟ್ ಮಾಡಲು ಪೊಲೀಸ್ ಇಲಾಖೆ ಸಜ್ಜಾಗಿದೆ.
16 ಡೆಂಜರಸ್ ಕ್ರಿಮಿನಲ್ಸ್ ಜಿಲ್ಲೆಯಿಂದ ಗಡಿಪಾರು..!
ಇನ್ನು ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯಸ್ಥೆಗೆ ಧಕ್ಕೆ ತರಬಲ್ಲ ಮೋಸ್ಟ್ ನಟೋರಿಯಸ್ ಗಳಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ಜಿಲ್ಲೆಯಿಂದ ಗೇಟ್ ಪಾಸ್ ನೀಡಿದ್ದಾರೆ. 16 ಜನ ನಟೋರಿಸ್‌ಗಳಿಗೆ ಗಡಿಪಾರು ಆದೇಶ ನೀಡಿದ್ದು, ಚುನಾವಣೆ ಮುಗಿಯುವ ವರೆಗು ಜಿಲ್ಲೆಗೆ ಎಂಟ್ರಿ ಕೊಡದಂತೆ ತಾಕೀತು ಮಾಡಿದ್ದಾರೆ. ಈ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಶಾಂತಿಯುತವಾಗಿ ಚುನಾವಣೆ ನಡೆಸಲು ರೌಡಿಗಳು, ಕ್ರಿಮಿನಲ್ ಗಳು, ಹಂತಕ ಪಡೆಯ ಸದಸ್ಯರ ಮೇಲೆ ಕ್ರಮ ಜರುಗಿಸಿದೆ..
ಮೂಡುಬಿದಿರೆ ಚುನಾವಣಾ ಅಖಾಡಕ್ಕೆ ಲಾರಿ ಡ್ರೈವರ್!
ಈ ಭಾರಿ ಕರ್ನಾಟಕ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 10ರಂದು ಮತದಾನ , ಮೇ 13ಕ್ಕೆ ಮತ ಎಣಿಕೆ ಕಾರ್ಯ.. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.