Karnataka assembly election: ಚಿತ್ರದುರ್ಗ ಜಿಲ್ಲೆಯಾದ್ಯಂತ ಮತಗಟ್ಟೆಸ್ಥಳ, ಹೆಸರು ಬದಲಾವಣೆ
ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯ ಮೊಳಕಾಲ್ಮೂರು, ಚಿತ್ರದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆಲವು ಮತಗಟ್ಟೆಗಳ ಸ್ಥಳ ಹಾಗೂ ಹೆಸರುಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.
ಚಿತ್ರದುರ್ಗ (ಮಾ.10) : ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯ ಮೊಳಕಾಲ್ಮೂರು, ಚಿತ್ರದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆಲವು ಮತಗಟ್ಟೆಗಳ ಸ್ಥಳ ಹಾಗೂ ಹೆಸರುಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.
ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಮತಗಟ್ಟೆಹೆಸರು ಬದಲಾವಣೆ ಆಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ(Chitradurga assembly constituency) ವ್ಯಾಪ್ತಿಯಲ್ಲಿ 4 ಮತಗಟ್ಟೆಗಳು ಸ್ಥಳ ಬದಲಾವಣೆ ಹಾಗೂ 5 ಮತಗಟ್ಟೆಗಳು ಹೆಸರು ಬದಲಾಗಿವೆ. ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಮತಗಟ್ಟೆಗಳು ಹೆಸರು ಬದಲಾವಣೆಯಾಗಿವೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಮತಗಟ್ಟೆಗಳು ಸ್ಥಳ ಬದಲಾವಣೆಯಾಗಿವೆ.
ನಿರುದ್ಯೋಗಿ ಕಾಂಗ್ರೆಸ್ ನಾಯಕರಿಂದ ತೋರಿಕೆಗಾಗಿ ಬಂದ್: ಸಚಿವ ಬಿ.ಸಿ.ಪಾಟೀಲ್
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ:
ಮತಗಟ್ಟೆಸಂಖ್ಯೆ 45 ಚಿಕ್ಕಪುರ ಗೊಲ್ಲರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಚಿಕ್ಕಪುರ ಗೊಲ್ಲರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ) ಇಲ್ಲಿಗೆ ಸ್ಥಳ ಬದಲಾವಣೆ ಮಾಡಲಾಗಿದೆ. ಮತಗಟ್ಟೆಸಂಖ್ಯೆ 52 ಮಠದ ಕುರುಬರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂ-4ರ ಮತಗಟ್ಟೆಯನ್ನು ಮಠದ ಕುರುಬರಹಟ್ಟಿಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂ-1ಕ್ಕೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆಸಂಖ್ಯೆ 53 ಮಠದ ಕುರುಬರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-5ರ ಮತಗಟ್ಟೆಯನ್ನು ಮಠದ ಕುರುಬರಹಟ್ಟಿಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-2ಕ್ಕೆ ಸ್ಥಳ ಬದಲಾವಣೆ ಮಾಡಲಾಗಿದೆ. ಮತಗಟ್ಟೆಸಂಖ್ಯೆ 124 ಚಿತ್ರದುರ್ಗದ ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರಿನ ಓಂ ನರ್ಸರಿ ಶಾಲೆಯ ಮತಗಟ್ಟೆಯನ್ನು ಚಿತ್ರದುರ್ಗ ಬುರುಜನಹಟ್ಟಿಯ ಕೋಟೆ ಆಂಜನೇಯ ಸ್ವಾಮಿ ದೇಗುಲದ ಪಕ್ಕದಲ್ಲಿರುವ ಓಂ ನರ್ಸರಿ ಶಾಲೆಗೆ ಸ್ಥಳ ಬದಲಾವಣೆ ಮಾಡಲಾಗಿದೆ.
ಮತಗಟ್ಟೆಸಂಖ್ಯೆ 23 ಗೋನೂರು ಮಜರೆ ಸಾಸಲಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯು ಗೋನೂರು ಮಜರೆ ಸಾಸಲಹಟ್ಟಿಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂದು ಹೆಸರು ಬದಲಾಗಿದೆ. ಮತಗಟ್ಟೆಸಂಖ್ಯೆ 68 ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯ ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ಹೆಸರು ಬದಲಾಗಿದೆ. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ (ಹೊಸ ಕಟ್ಟಡ) ಕೊಠಡಿ ಸಂಖ್ಯೆ 2ರ ಮತಗಟ್ಟೆಯು ಚಿತ್ರದುರ್ಗ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ತರಳಬಾಳು ಜಗದ್ಗುರು ಶಿಶುವಿಹಾರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ 2 (ಹೊಸಕಟ್ಟಡ) ಎಂದು ಹೆಸರು ಬದಲಾಗಿದೆ. ಮತಗಟ್ಟೆಸಂಖ್ಯೆ 152 ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ (ಹೊಸ ಕಟ್ಟಡ) ಕೊಠಡಿ ಸಂಖ್ಯೆ.3ರ ಮತಗಟ್ಟೆಯು ಚಿತ್ರದುರ್ಗ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ, ತರಳಬಾಳು ಜಗದ್ಗುರು ಶಿಶುವಿಹಾರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ-3 (ಹೊಸಕಟ್ಟಡ) ಎಂದು ಹೆಸರು ಬದಲಾಗಿದೆ. ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ) ಮತಗಟ್ಟೆಯು ಚಿತ್ರದುರ್ಗ ನಗರದ ವಿ.ಪಿ.ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಹೊಸಕಟ್ಟಡ) ಎಂದು ಹೆಸರು ಬದಲಾಗಿದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ:
ಮತಗಟ್ಟೆಸಂಖ್ಯೆ 21 ಇಸಾಮುದ್ರ ಗೊಲ್ಲರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಿಂದ ಇಸಾಮುದ್ರ ಗೊಲ್ಲರಹಟ್ಟಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹೊಸಕಟ್ಟಡ)ಗೆ ಸ್ಥಳ ಬದಲಾವಣೆ ಮಾಡಲಾಗಿದೆ. ಕಾಳಘಟ್ಟವಡ್ಡರಹಟ್ಟಿಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಿಂದ ಕಾಳಘಟ್ಟವಡ್ಡರಹಟ್ಟಿಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ)ಗೆ ಸ್ಥಳ ಬದಲಾವಣೆ ಮಾಡಲಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರ:
ಮತಗಟ್ಟೆಸಂಖ್ಯೆ 6, 7, 8 ಮರಡಿಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ ಕ್ರಮವಾಗಿ 1, 2, 3 ಮತಗಟ್ಟೆಯನ್ನು ಮರಡಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ-1,2,3 ಎಂದು ಹೆಸರು ಬದಲಾಗಿದೆ. ಮತಗಟ್ಟೆಸಂಖ್ಯೆ 63 ಹರಿಯಬ್ಬೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಮತಗಟ್ಟೆಯು ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ-1 ಎಂದು ಹೆಸರು ಬದಲಿಸಲಾಗಿದೆ. ಮತಗಟ್ಟೆಸಂಖ್ಯೆ 64 ಹರಿಯಬ್ಬೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-2 ಮತಗಟ್ಟೆಯು ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆ ರೂಂ-2 ಎಂದು ಹೆಸರು ಬದಲಿಸಲಾಗಿದೆ.
ಚಿತ್ರದುರ್ಗದಲ್ಲಿ ತನ್ನ ಕೊನೆಯ ಕೆಡಿಪಿ ಸಭೆ ನಡೆಸಿದ ಸಚಿವ ಬಿ.ಸಿ ಪಾಟೀಲ್
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಸಂಖ್ಯೆ 175 ನಾಯಕನಹಟ್ಟಿಗ್ರಾಮ ಪಂಚಾಯಿತಿ ಕಾರ್ಯಾಲಯ ಮತಗಟ್ಟೆಯು ನಾಯಕನಹಟ್ಟಿಪಟ್ಟಣ ಪಂಚಾಯಿತಿ ಕಾರ್ಯಾಲಯ ಎಂದು ಹೆಸರು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.