2023ರ ಚುನಾವಣೆಗೆ ಸಂಬಂ​ಸಿದಂತೆ ಮೇ.10ರಂದು ನಡೆದ ಮತದಾನ ಹಿನ್ನೆಲೆಯಲ್ಲಿ 8ರ ಮದ್ಯರಾತ್ರಿಯಿಂದ 11ರ ಬೆಳಗಿನ ತನಕ ಮದ್ಯಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು.ಎರಡು ದಿನಗಳ ಕಾಲ ನಿರಾಸೆಗೊಳಗಾಗಿದ್ದ ಮದ್ಯಪ್ರಿಯರು ಗುರುವಾರ ಬೆಳಗಿನಿಂದಲೇ ವೈನ್‌ ಸ್ಟೋರ್‌ ಮತ್ತು ಬಾರ್‌ಗಳ ಮುಂದೆ ಸಾಲುಗಟ್ಟಿನಿಂತು ಖರೀದಿಗೆ ಮುಂದಾದ ಕಾರಣ ಭರ್ಜರಿ ವ್ಯಾಪಾರ ನಡೆಯಿತು.

ಚಿಕ್ಕಬಳ್ಳಾಪುರ (ಮೇ.12) : 2023ರ ಚುನಾವಣೆಗೆ ಸಂಬಂ​ಸಿದಂತೆ ಮೇ.10ರಂದು ನಡೆದ ಮತದಾನ ಹಿನ್ನೆಲೆಯಲ್ಲಿ 8ರ ಮದ್ಯರಾತ್ರಿಯಿಂದ 11ರ ಬೆಳಗಿನ ತನಕ ಮದ್ಯಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು.ಎರಡು ದಿನಗಳ ಕಾಲ ನಿರಾಸೆಗೊಳಗಾಗಿದ್ದ ಮದ್ಯಪ್ರಿಯರು ಗುರುವಾರ ಬೆಳಗಿನಿಂದಲೇ ವೈನ್‌ ಸ್ಟೋರ್‌ ಮತ್ತು ಬಾರ್‌ಗಳ ಮುಂದೆ ಸಾಲುಗಟ್ಟಿನಿಂತು ಖರೀದಿಗೆ ಮುಂದಾದ ಕಾರಣ ಭರ್ಜರಿ ವ್ಯಾಪಾರ ನಡೆಯಿತು.

ನಾಳೆ ಶನಿವಾರ13ರಂದು ಮತ ಎಣಿಕೆ ಪ್ರಯುಕ್ತ ಇಂದು ಶುಕ್ರವಾರ ರಾತ್ರಿ 10 ಗಂಟೆಯಿಂದ 14ರ ಬಾನುವಾರ ಬೆಳಗ್ಗೆಯವರೆಗೂ ಮತ್ತೆ ಮದ್ಯ ಮಾರಟಕ್ಕೆ ನಿಷೇಧ ಹೇರಿರುವ ಹಿನ್ನೆಲೆ ಶುಕ್ರವಾರವೂ ಸಹಾ ವೈನ್‌ ಸ್ಟೋರ್‌ ಮತ್ತು ಬಾರ್‌ಗಳಿಗೆ ಭರ್ಜರಿ ವ್ಯಾಪಾರ ನಡೆದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಚಂಡ ಬಹುಮತದಿಂದ ಗೆಲ್ಲಲಿದೆ: ವೀರಪ್ಪ ಮೊಯ್ಲಿ

ಮದ್ಯ ಸಮಾರಾಧನೆ

ಚುನಾವಣೆ ಬಂದರೆ ಸಾಕು ಮದ್ಯಪ್ರಿಯರಿಗೆ ಒಂದೆಡೆ ಸಂತೋಷ ಮತ್ತೊಂದೆಡೆ ದುಃಖ ಒತ್ತರಿಸಿ ಬರುತ್ತದೆ. ಚುನಾವಣೆ ಘೋಷಣೆ ಆದಾಗಿನಿಂದ ಮತದಾನ ನಡೆಯುವ ದಿನದವರೆಗೆ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗುವ ಮೂಲಕ ಅಕಾಲಿಕ ಆದಾಯ ಗಳಿಸುತ್ತಾ, ಕಂಠಪೂರ್ತಿ ಕುಡಿಯುತ್ತಾ ಸಂತೋಷಪಡುತ್ತಾರೆ. ಮತದಾನದ ದಿನ ಸಮೀಪಿಸಿದಂತೆ ಗರಬಡಿದವರ ಹಾಗೆ ಪೆಚ್ಚುಮೋರೆ ಹಾಕಿಕೊಳ್ಳುತ್ತಾರೆ.ಏಕೆಂದರೆ ಮತದಾನ ದಿನದ ಹಿಂದಿನ ದಿನದಿಂದ ಮತದಾನ ಎರಡು ದಿನಗಳ ಕಾಲ ಮತ್ತು ಮತೆಣಿಕೆ ದಿನ ಬಾರ್‌ ವೈನ್‌ ಶಾಪ್‌ಗಳನ್ನು ಬಂದ್‌ ಮಾಡುತ್ತಾರೆ.

ಶಾಂತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಮದ್ಯ ಮಾರಾಟದ ವಿಚಾರದಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಂಡ ಕಾರಣ ಈ ಬಾರಿ ಬ್ಲಾಕ್‌ ಮಾರಾಟಕ್ಕೆ ಕಡಿವಾಣ ಬಿದ್ದಿದ್ದು ಕೂಡ ಗುರುವಾರ ಎಣ್ಣೆಗೆ ಮುಗಿಬೀಳಲು ಕಾರಣವಾಯಿತು. ನಗರದಲ್ಲಿ ಮಾಂಸಾಹಾರದ ಹೋಟೆಲ್‌ಗಳು ಭರ್ತಿಯಾದ್ದು ಎಲ್ಲೆಲ್ಲೂ ಶನಿವಾರದ ಫಲಿತಾಂಶದ ಬಗ್ಗೆಯೇ ಚರ್ಚೆ ಜೋರಾಗಿ ಸಾಗಿದ್ದವು. ಎಣ್ಣೆ ಕುಡಿದ ಕೆಲ ಮಂದಿ ಸುಧಾಕರ್‌ ಅಣ್ಣ ಗೆದ್ದೇ ಗೆಲ್ಲುತ್ತಾರೆ ಎಂದರೆ, ಮತ್ತೆ ಕೆಲವರು ಇಲ್ಲ ನಮ್ಮ ನಾಯಕ ಗೆಲ್ಲುತ್ತಾರೆ ಎನ್ನುತ್ತಿದ್ದರು.

Karnataka assembly election 2023: ನಿಗದಿಗಿಂತ ಹೆಚ್ಚು ಮದ್ಯ ಮಾರಾಟ; 200ಕ್ಕೂ ಹೆಚ್ಚು ಬಾರ್‌ಗಳಿಗೆ ಬೀಗ!

ಎರಡು ದಿನಗಳ ಕಾಲ ಮದ್ಯವಿಲ್ಲದೆ ಪರದಾಡಿದ್ದ ಮದ್ಯಪ್ರಿಯರು ಶುಕ್ರವಾರ ತೃಪ್ತಿಯಾಗುವಷ್ಟುಕುಡಿದರು. ಮತಣಿಕೆ ದಿನವಾದ ಶನಿವಾರ ಸಹಾ ಮದ್ಯದಂಗಡಿಗಳು ಬಂದ್‌ ಮಾಡುವ ಕಾರಣ ಶುಕ್ರವಾರವೇ ವೈನ್‌ಸ್ಟೋರ್‌ ಮತ್ತು ಬಾರ್‌ಗಳಿಗೆ ಭರ್ಜರಿ ವ್ಯಾಪಾರ ನಡೆದಿದೆ. ಆದರೆ ಮದ್ಯದ ಅಂಗಡಿ ಮತ್ತು ಬಾರ್‌ ಮಾಲಿಕರು ಹೇಳುವಂತೆ ಕಡಿಮೆ ದರದ ಮದ್ಯ ಚುನಾವಣಾ ಸಮಯದಲ್ಲಿ ಪೂರೈಕೆ ಕಡೆಮೆ. ಕಳೆದ ಒಂದು ವಾರದಿಂದ ಚೀಪ್‌ ಲಿಕ್ಕರ್‌ ಮಾರಾಟ ಮಾಡಿಲ್ಲ. ಹೆಚ್ಚಿನ ದÜರದ ಮದ್ಯಮಾತ್ರ ಮಾರಾಟವಾಗುತ್ತಿದೆ.