* ಕನ್ನಡ ವಿರೋಧಿ KFC ವಿರುದ್ದ ಪ್ರತಿಭಟನೆ*ಕನ್ನಡ ಭಾಷೆಯನ್ನು ಅವಮಾನ ಮಾಡಿದ ಹಿನ್ನಲೆ *ಕೆಎಫ್ ಸಿ‌ ಮುಂದೆ ಪ್ರತಿಭಟಿಸುತ್ತಿರುವ ಕರವೇ ಪ್ರವೀಣ್ ಶೆಟ್ಟಿ ಬಣ

ಬೆಂಗಳೂರು, (ಅ. 26): ನಗರದ ಕೆಎಫ್‌ಸಿ (KFC) ಮಳಿಗೆಯಲ್ಲಿ ಕನ್ನಡ ಹಾಡು ಹಾಕದ ವಿಚಾರದಲ್ಲಿ ಮಹಿಳೆ ಹಾಗೂ ಕೆಎಫ್‌ಸಿ ಸಿಬ್ಬಂದಿಗಳ ನಡುವೆ ಮಾತುಕತೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ಬಾರೀ ವೈರಲ್‌ ಆಗಿದೆ. ಈ ಬೆನ್ನಲ್ಲೇ ಕೆಎಫ್‌ಸಿ ವಿರುದ್ಧ ಕನ್ನಡ ಪರ ಸಂಘಟನೆಗಳು (Kannada Organisation) ಗರಂ ಆಗಿವೆ.

ಕನ್ನಡದ ಹಾಡು (Kannada Song) ಹಾಕೋದಿಲ್ಲ, ಯಾರೂ ಏನೂ ಮಾಡಿಕೊಳ್ಳೋದಿಕ್ಕೆ ಆಗೋದಿಲ್ಲ ಎಂದು ದುರಹಂಕಾರ ತೋರಿದ್ದ ಕೆಎಫ್ ಸಿ ಸಂಸ್ಥೆ ಈಗ ಕನ್ನಡಿಗರ ಆಕ್ರೋಶವನ್ನು ಎದುರಿಸುತ್ತಿದ್ದು, ಕರವೇ ಪ್ರವೀಣ್ ಶೆಟ್ಟಿ ಬಣ ಇಂದು (ಅ.26) ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆ ಕೆಎಫ್ ಸಿ ಮುಂದೆ ಪ್ರತಿಭಟನೆ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

ಕೆಎಫ್‌ಸಿ ಚಿಕನ್ (KFC Chicken) ಕೈಯಲ್ಲಿ ಹಿಡಿದು ಕರವೇ ಪ್ರವೀಣ್ ಶೆಟ್ಟಿ ಬಣ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಎಫ್ ಸಿ ಚಿಕನ್ ಹಾಗೂ ಕೆಎಫ್ ಸಿ ಪ್ರಾಡಕ್ಟ್‌ಗೆ ಬಹಿಷ್ಕಾರ ಹಾಕುವಂತೆ ಆಗ್ರಹಿಸಿದರು.

View post on Instagram

ಬೆಂಗಳೂರಿನ ಕೆಎಫ್‌ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್‌ಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಟ್ವಿಟ್ಟರ್‌ನಲ್ಲಿ #RejectKFC #KFCಕನ್ನಡಬೇಕು ಎಂಬ ಹ್ಯಾಷ್‌ಟ್ಯಾಗ್‌ಗಳು ಭಾರೀ ಟ್ರೆಂಡ್‌ ಆಗಿತ್ತು.

ಮಹಿಳೆಯೊಬ್ಬರು ಬೆಂಗಳೂರಿನ ಕೆಎಫ್‌ಸಿಯಲ್ಲಿ ಕನ್ನಡ ಹಾಡು ಹಾಕದ ಕಾರಣದಿಂದಾಗಿ ಇದನ್ನು ಸಿಬ್ಬಂದಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದು ನೆಟ್ಟಿಗರು ಕೆಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ ಕರವೇ ಕಾರ್ಯಕರ್ತರು ಈ ವಿಚಾರದಲ್ಲಿ ಪ್ರತಿಭಟನೆಯನ್ನು ಕೂಡಾ ನಡೆಸಿದ್ದರು.

ಕೆಎಫ್‌ಸಿ ವಕ್ತಾರರ ಸ್ಪಷ್ಟನೆ 
"ಇದು ಹಳೆಯ ವಿಡಿಯೋ ಮತ್ತು ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಕೆಎಫ್‌ಸಿ ಇಂಡಿಯಾ ಎಲ್ಲಾ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳ ಕುರಿತು ಅತ್ಯುನ್ನತ ಗೌರವ ಹೊಂದಿದೆ. ನಾವು ದೇಶಾದ್ಯಂತ ಬ್ರ್ಯಾಂಡ್ ಹೊಂದಿರುವುದರಿಂದ, ಗ್ರಾಹಕರು ದೇಶದ ಯಾವುದೇ ರೆಸ್ಟೊರೆಂಟ್‌ಗೆ ಆಗಮಿಸಿದರೂ, ಒಂದೇ ರೀತಿಯ ಕೆಎಫ್‌ಸಿ ಅನುಭವ ಪಡೆಯಬೇಕು ಎಂಬುದು ನಮ್ಮ ಗುರಿ. ಈ ಉದ್ದೇಶದಿಂದಲೇ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಕೇಂದ್ರ ಕಚೇರಿಯಿಂದ ಪರವಾನಗಿ ದೊರೆತ ಹಾಗೂ ಖರೀದಿಸಿ ಗೀತೆಗಳ ಸಂಗ್ರಹ ಇರಿಸಲಾಗಿದೆ. ಮತ್ತು ದೇಶಾದ್ಯಂತ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಅವುಗಳನ್ನೇ ಪ್ರಸಾರ ಮಾಡಲಾಗುತ್ತದೆ.” ಕೆಎಫ್‌ಸಿ ವಕ್ತಾರರು ಸ್ಪಷ್ಟನೆ ಕೊಟ್ಟಿದ್ದಾರೆ.