Asianet Suvarna News Asianet Suvarna News

ಚಿತ್ರದುರ್ಗ ಕ್ಷೇತ್ರಕ್ಕೆ ಕನ್ನಮೇಡಿ ಕೃಷ್ಣಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧೆ

ಆನೇಕ ವರ್ಷಗಳಿಂದ ಸಮಾಜ ಹಾಗೂ ಜನಪರ ಸೇವೆಯಲ್ಲಿ ನಿರತರಾಗಿದ್ದು, ಬೆಂಬಲಿಗರ ಸಲಹೆ ಮೇರೆಗೆ ಮುಂಬರುವ ಈ ಭಾಗದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಲು ತೀರ್ಮಾನಿಸಿರುವುದಾಗಿ ರಾಜ್ಯ ಮಹಾ ಅದಿಗ ಹೋರಾಟ ಸಮಿತಿಯ ಅಧ್ಯಕ್ಷ ಪಾವಗಡ ತಾಲೂಕಿನ ಕನ್ನಮೇಡಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

Kannamedi Krishnamurthy emerged as a non-party candidate for Chitradurga constituency snr
Author
First Published Mar 1, 2024, 10:52 AM IST

ಪಾವಗಡ: ಆನೇಕ ವರ್ಷಗಳಿಂದ ಸಮಾಜ ಹಾಗೂ ಜನಪರ ಸೇವೆಯಲ್ಲಿ ನಿರತರಾಗಿದ್ದು, ಬೆಂಬಲಿಗರ ಸಲಹೆ ಮೇರೆಗೆ ಮುಂಬರುವ ಈ ಭಾಗದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಲು ತೀರ್ಮಾನಿಸಿರುವುದಾಗಿ ರಾಜ್ಯ ಮಹಾ ಅದಿಗ ಹೋರಾಟ ಸಮಿತಿಯ ಅಧ್ಯಕ್ಷ ಪಾವಗಡ ತಾಲೂಕಿನ ಕನ್ನಮೇಡಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಗುರುವಾರ ಪಟ್ಟಣದ ವಸತಿ ಗೃಹವೊಂದರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶೋಷಿತ ಹಾಗೂ ನೊಂದ ಬಡವರ ಪರ ಕೆಲಸ ಮಾಡಿದ್ದೇನೆ. ಸಾಮಾಜಿಕ ಶೋಷಣೆಗೆ ಒಳಗಾದ ವರ್ಗದ ಜನತೆಯ ಪರ ನ್ಯಾಯಕ್ಕಾಗಿ ಆನೇಕ ಹೋರಾಟ ನಡೆಸಿದ್ದೇನೆ.

ದಲಿತ ಪರ ಸಂಘಟನೆಗಳಲ್ಲಿ ಕೆಲಸ ಮಾಡಿದ್ದೇನೆ. ಹಲವಾರು ಸಮಾಜ ಮುಖಿ ಕೆಲಸಗಳಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದ್ದು ಕುಡಿವ ನೀರು ಮತ್ತು ನೀರಾವರಿ ಅನುಷ್ಠಾನದ ಹಿನ್ನೆಲೆಯಲ್ಲಿ ಪೂಜಾರಪ್ಪ ನೇತೃತ್ವದ ರೈತ ಸಂಘಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇನೆ.

ಅನೇಕ ವರ್ಷಗಳಿಂದ ತಾಲೂಕು ಪ್ರಾದೇಶಿಕ ಪಕ್ಷವೊಂದರಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಶ್ರಮಿಸಿದ್ದೇನೆ ಎಂದರು. ಈ ಹಿನ್ನೆಲೆಯಲ್ಲಿ ನನ್ನ ಆಪ್ತ ಬೆಂಬಲಿಗರು ಹಾಗೂ ಇತರೆ ಜನಸಾಮಾನ್ಯರ ಅಭಿಪ್ರಾಯದ ಮೇರೆಗೆ ತೀರ್ಮಾನಿಸಿದ್ದೇನೆ. ಚಿತ್ರದುರ್ಗ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಚುನಾವಣೆಯ ಕಣದಲ್ಲಿರುವುದು ಶತ ಸಿದ್ಧ. ಶೀಘ್ರ ತಮ್ಮ ಬೆಂಬಲಿಗ ಮುಖಂಡರ ಜತೆ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಪ್ರವಾಸ ನಡೆಸಿ, ಅವಕಾಶ ಕಲ್ಪಿಸಿ ಎಂದು ಮನವಿಯೊಂದಿಗೆ ಸಂಘಟನೆ ಕೈಗೊಳ್ಳುವುದಾಗಿ ಹೇಳಿದರು.

Follow Us:
Download App:
  • android
  • ios