Asianet Suvarna News Asianet Suvarna News

Mysuru : ಕನ್ನಡ ಭಾಷೆ ಕೇವಲ ಸಂವಹನ ಸಾಧನವಲ್ಲ, ಭಾವನಾತ್ಮಕ ಬಂಧು

ಕನ್ನಡ ಭಾಷೆ ಕೇವಲ ಸಂವಹನ ಸಾಧನವಲ್ಲ, ಭಾವನಾತ್ಮಕ ಬಂಧು ಆಗಿದೆ, ಇದು ನಮ್ಮ ಪೂರ್ವಜರ ಬದುಕಿನ ಅಂಗವಾಗಿ ಸಂವಹನ ಸಾಧ್ಯತೆಯಾಗಿತ್ತು ಎಂದು ಹಾಸನದ ಹೇಮಗಂಗೋತ್ರಿಯ ಸ್ನಾತಕೋತ್ತರ ಕೇಂದ್ರ ಪ್ರಾಧ್ಯಾಪಕ ಪ್ರೊ.ಎಂ. ಶಂಕರ ಅಭಿಪ್ರಾಯಪಟ್ಟರು.

Kannada language is not just a communication tool  it is an emotional bond snr
Author
First Published Nov 2, 2022, 4:56 AM IST

  ಮೈಸೂರು (ನ.02): ಕನ್ನಡ ಭಾಷೆ ಕೇವಲ ಸಂವಹನ ಸಾಧನವಲ್ಲ, ಭಾವನಾತ್ಮಕ ಬಂಧು ಆಗಿದೆ, ಇದು ನಮ್ಮ ಪೂರ್ವಜರ ಬದುಕಿನ ಅಂಗವಾಗಿ ಸಂವಹನ ಸಾಧ್ಯತೆಯಾಗಿತ್ತು ಎಂದು ಹಾಸನದ ಹೇಮಗಂಗೋತ್ರಿಯ ಸ್ನಾತಕೋತ್ತರ ಕೇಂದ್ರ ಪ್ರಾಧ್ಯಾಪಕ ಪ್ರೊ.ಎಂ. ಶಂಕರ ಅಭಿಪ್ರಾಯಪಟ್ಟರು.

ನಗರದ ಬಿ.ಎನ್‌. ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿನ ಕಾಲೇಜಿನಲ್ಲಿ (College)  ನಡೆದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ  (Kannada)  ಪರಂಪರೆಯನ್ನು ಬಿಂಬಿಸುವ ಶಕ್ತಿ. ತಲೆತಲೆಮಾರುಗಳಿಂದ ಉಳಿದು ಬಂದ ಸಂಸ್ಕೃತಿಯನ್ನು ನಮಗೆ ಪರಿಚಯಿಸಿದ್ದು ನಮ್ಮ ಕನ್ನಡ ಮಾತೃಭಾ,ಎ. ನಮ್ಮ ನಾಡು ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗದ ಶಾಂತಿಯ ತೋಟ. ಇಂದು ನಾವೆಲ್ಲರೂ ನಮ್ಮ ದಿನನಿತ್ಯದ ವ್ಯವಹಾರವನ್ನು ಆಲೋಚನೆಗಳನ್ನು ಕನ್ನಡದಲ್ಲಿ ಮುಂದುವರೆಸುವುದರ ಅಗತ್ಯವಿದೆ ಎಂದು ಅವರು ತಿಳಿಸಿದರು.

ನಾವೆಲ್ಲರು ಕನ್ಕನಡದಲ್ಲಿ ಪರಿಭಾವಿಸುವುದನ್ನು ರೂಢಿಸಿಕೊಳ್ಳಬೇಕು. ಕನ್ನಡ ಬೆಳವಣಿಗೆಯ ಆರಂಭದಿಂದಲೂ ಕನ್ನಡದಲ್ಲಿ ಪರಿಭಾವಿಸಿ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಇಂದಿನ ಆಧುನಿಕ ಬದುಕಿನಲ್ಲಿಯೂ ಕನ್ನಡದಲ್ಲಿ ಪರಿಭಾವಿಸಿ ಜ್ಞಾನವನ್ನು ಸಂಪಾದಿಸುವ ನಿಟ್ಟಿನಲ್ಲಿ ನಾವು ನಡೆಯಬೇಕು ಎಂದರು.

ಕಾಲೇಜು ಸಮುಚ್ಛಯದ ಸಿಇಒ ಪ್ರೊ.ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನೆಲವು ಭಾಷೆಯ ವಿಚಾರದಲ್ಲಿ ಭಾರತದ ಇತರೇ ಭಾಷೆಗಳಿಗಿಂತ ಘನ ಇತಿಹಾಸವನ್ನು ಹೊಂದಿದೆ. ಕನ್ನಡ ಮೊದಲ ಅಕ್ಷರಸ್ಥನೆಲವೆಂದು ಗುರುತಿಸಲ್ಪಟ್ಟಿದೆ. ಆ ಕಾರಣದಿದಲೇ ಅಶೋಕನಿಗೆ ಸಂಬಂಧಿಸಿದ ಹೆಚ್ಚು ಶಾಸನಗಳು ನಮಗೆ ಇಲ್ಲಿ ದೊರೆಯುತ್ತವೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ. ವಿಜಯೇಂದ್ರ ಕುಮಾರ್‌ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಎಸ್‌.ಎಂ. ದಾಸ್ತಿಕೊಪ್ಪ ವಂದಿಸಿದರು. ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್‌. ಸುದೀಪ್‌ ನಿರೂಪಿಸಿದರು. ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ನಾಡಗೀತೆ ತ್ತು ರೈತಗೀತೆಗಳನ್ನು ಪ್ರಸ್ತುತಪಡಿಸಿದರು. ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಇದ್ದರು.

ಕನ್ನಡಭಾಷೆ ನೆಲದ ಸಂಸ್ಕೃತಿಯ ತಿರುಳು

ರಬಕವಿ-ಬನಹಟ್ಟಿ: ಕನ್ನಡ ಜಗತ್ತಿನ ಶ್ರೀಮಂತ ಭಾಷೆಗಳಲ್ಲೊಂದು. ಈ ಭಾಷೆಯೊಡನೆ ನಾಡಿನ ಎಲ್ಲರ ಬದುಕು ಸಂಕಲನಗೊಂಡಿದೆ. ಕನ್ನಡಭಾಷೆ ಈ ನೆಲದ ಸಂಸ್ಕೃತಿಯ ತಿರುಳಾಗಿದೆ ಎಂದು ಶಿಶುಕವಿ ಜಯವಂತ ಕಾಡದೇವರ ನುಡಿದರು.

ನಗರದ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಜರುಗಿದ 67ನೇ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಭಾಷೆಯ ಸೊಗಡು, ಲಾಲಿತ್ಯ ಮತ್ತು ಭಾವನಾತ್ಮಕ ಅಂಶಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕಿದೆ. ಭಾಷೆ ನಿಂತ ನೀರಾಗಬಾರದು ಅದು ನಿರಂತರ ಪ್ರವಹಿಸುವ ನೀರಾಗಬೇಕು. ಬದುಕಿನ ಉಸಿರಾಗಬೇಕು ಆಗ ಮಾತ್ರ ಕನ್ನಡದ ಉಳಿವು ಸಾಧ್ಯವಾಗುತ್ತದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನ ಸಿಗಲು ಬೇಕಾದ ಎಲ್ಲ ಅರ್ಹತೆಗಳಿದ್ದರೂ ಇದೂವರೆಗೆ ದೊರೆತಿಲ್ಲ. ಪರಭಾಷಾ ಮೋಹದಿಂದ ಕನ್ನಡ ಅಸಡ್ಡೆಯಾಗಬಾರದು ಆ ರೀತಿ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸರ್ಕಾರ ನಿಭಾಯಿಸಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೌಕರಿ ನೀಡಿಕೆಯಲ್ಲಿ ಸರ್ಕಾರ ಆದ್ಯತೆ ನೀಡುವ ಕಾನೂನು ಜಾರಿಗೊಳಿಸಿದಲ್ಲಿ ಕನ್ನಡಕ್ಕೆ ಪ್ರಾಧಾನ್ಯ ಸಿಗುತ್ತದೆ ಎಂದರು. ಸಂಸ್ಥೆಯ ಅಧ್ಯಕ್ಷೆ ಪದ್ಮಾವತಿ ಆಮ್ಮ ಹಜಾರೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾ​ಧಿಕಾರಿ ಭಾರತಿ ತಾಳಿಕೋಟಿ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಶೈಲ ಕುಂಬಾರ ಹಾಗೂ ಶಾಲೆಯ ಪ್ರಾಚಾರ್ಯ ಬಸವರಾಜ ಕಲಾದಗಿಯವರು ವೇದಿಕೆಯಲ್ಲಿ ಇದ್ದರು.

ನಾಡಗೀತೆಯೊಂದಿಗೆ ಚಾಲನೆಗೊಂಡÜ ಸಮಾರಂಭದಲ್ಲಿ ಹಲವು ಮನರಂಜನಾತ್ಮಕ ಚಟುವಟಿಕೆಗಳು ಜರುಗಿದವು. ಹಲವು ವಿದ್ಯಾರ್ಥಿಗಳು ಕನ್ನಡ ನುಡಿಗೀತೆಗಳನ್ನು ಹಾಡಿ ಸರ್ವರನ್ನು ರಂಜಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ನೃತ್ಯ, ನಾಟಕ ಪ್ರದರ್ಶನ ಮೂಲಕ ವಿದ್ಯಾರ್ಥಿಗಳ ಮನಸನ್ನು ಆಕರ್ಷಿಸಲಾಯಿತು. ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಕನ್ನಡ ಸಾಧಕರ ವೇಷಭೂಷಣಗಳನ್ನು ಧರಿಸಿ, ತಮ್ಮ ಸಂಭಾಷಣೆಗಳ ಮೂಲಕ ರಂಜಿಸಿದರು.

ಕಾರ್ಯಕ್ರಮವನ್ನು 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ನಿರೂಪಿಸಿದರು. ಭವಾನಿ ಕುಂಬಾರ ಸ್ವಾಗತಿಸಿದರು. ಸಿದ್ದಮ್ಮ ನಿಂಬರಗಿ ವಂದಿಸಿದರು.

Follow Us:
Download App:
  • android
  • ios