ದಿಟ್ಟ ತೀರ್ಮಾನ; ಇನ್ನೊಂದು ವಾರ ಲಾಕ್ ಡೌನ್ ವಿಸ್ತರಿಸಿ ಆದೇಶ

ಕಲಬುರಗಿಯಲ್ಲಿ ಮತ್ತೆ ಒಂದು ವಾರಗಳ‌ ಕಾಲ‌ ಲಾಕ್ ಡೌನ್/ ಜಿಲ್ಲಾಧಿಕಾರಿ ಆದೇಶ/ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಅನಿವಾರ್ಯ ಕ್ರಮ

Kalaburagi DC extends lockdown another one week till july 27

ಕಲಬುರಗಿ(ಜು. 19)  ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜು.14 ರಿಂದ 20 ವರೆಗೆ ಕಲಬುರಗಿ ನಗರ ಮತ್ತು ಜಿಲ್ಲೆಯ ನಗರ-ಸ್ಥಳೀಯ ಸಂಸ್ಥೆಗಳ ಪ್ರದೇಶದಲ್ಲಿ ವಿಧಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ಅವರು ರವಿವಾರ ಆದೇಶ ಹೊರಡಿಸಿದ್ದಾರೆ.

"

ಲಾಕ್ ಡೌನ್ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆದು ಮುಚ್ಚತಕ್ಕದು. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಈ ಸಮಯದ ನಿರ್ಬಂಧ ಅನ್ವಯವಾಗುವುದಿಲ್ಲ.

ಲಾಕ್ ಡೌನ್ ಇಲ್ಲದೇ ಕೊರೋನಾ ಕಂಟ್ರೋಲ್ ಹೇಗೆ ಸಾಧ್ಯ

ಅಲ್ಲದೆ ಭಾನುವಾರದ ಲಾಕ್ ಡೌನ್ ಗೂ ಈ ಆದೇಶ ಅನ್ವಯಿಸುವುದಿಲ್ಲ ಎಂದು ಡಿ.ಸಿ.ಶರತ್ ಬಿ. ಅವರು ಆದೇಶದಲ್ಲಿ‌ ಸ್ಪಷ್ಟಪಡಿಸಿದ್ದಾರೆ.

ಮಿರಿಮೀರಿದ ಕೊರೋನಾ ಕಾರಣಕ್ಕೆ ಬೆಂಗಳೂರಿನಲ್ಲಿಯೂ ಒಂದು ವಾರದ ಲಾಕ್ ಡೌನ್  ಜಾರಿಯಲ್ಲಿದೆ.  ಬೆಂಗಳೂರಿನಲ್ಲಿ ಇನ್ನೊಂದು ಸುತ್ತಿನ ಲಾಕ್ ಡೌನ್ ಇಲ್ಲವೇ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

Latest Videos
Follow Us:
Download App:
  • android
  • ios