ಕಾಡಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಕಳೆದ ಎರಡು ತಿಂಗಳ ಹಿಂದೆ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿದಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ
ತುಮಕೂರು (ಜು.29): ಕಳೆದ ಎರಡು ತಿಂಗಳ ಹಿಂದೆಯಷ್ಟೇ ತುಮಕೂರು ಜಿಲ್ಲೆ ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಿದ್ದಾಗ ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗಲಿ ಎಂದು ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದಾಗಿ ಕಾಡಸಿದ್ದೇಶ್ವರ ಮಟದ ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಬುಧವರಾ ಉತ್ತರಿಸಿದರು.
ಬೊಮ್ಮಾಯಿ ಅಲ್ಲದೆ ರಾಮುಲು ಕೂಡ ಮಠಕ್ಕೆ ಆಗಮಿಸಿ ಕಾಡಸಿದ್ದೇಶ್ವರ ಗದ್ದುಗೆಗೆ ಸಂಕಲ್ಪ ಮಾಡಿ ಅಶೀರ್ವಾದ ಪಡೆದಿದ್ದರು ಎಂದರು.
ಸಿಎಂ ಆಗುವ ಬಗ್ಗೆ ಬೊಮ್ಮಾಯಿಗೆ ಸಿಹಿ ಸುದ್ದಿ ನೀಡಿದ್ದು ಇವರು..!
ಯಡಿಯೂರಪ್ಪನವರ ಬಲಗೈ ಬಂಟನಾಗಿ ಆತ್ಮವಿಶ್ವಾಸ ಬೆಳೆಸಿಕೊಂಡು ಬಂದಿರುವ ಬೊಮ್ಮಾಯಿಯವರು ಮುಂದಿನ ದಿನಗಳಲ್ಲಿ ರೈತ ಬಾಂದವರ ಬಡವ ಬಲ್ಲಿದರ ಪ್ರೀತಿ ವಿಶ್ವಾಸ ಗಳಿಸಿ ದಕ್ಷತೆಯಿಂದ ಅಧಿಕಾರ ಪೂರ್ಣಗೊಳಿಸುತ್ತಾರೆ ಎಂದರು.
ಶ್ರೀರಾಮುಲು ಕೂಡ ಮಠಕ್ಕೆ ಭೇಟಿ ನೀಡಿದ್ದರು. ಇಲ್ಲೇ ಎರಡು ದಿನ ಇದ್ದು ಇಷ್ಟಲಿಂಗ ಪೂಜೆ ನೆರವೇರಿದ್ದರು. ಅವರಿಗೂ ಅಧಿಕಾರ ಸಿಕ್ಕಿದೆ. ಅವರಿಗೂ ಆರೋಗ್ಉ ಭಾಗ್ಯ ಲಭಿಸಲಿ ಎಂದರು.
