Asianet Suvarna News Asianet Suvarna News

'ಕೊರೋನಾದಿಂದ ಬೀದಿಗೆ ಬಂದ ಬಡವರು: ಬಿಪಿಎಲ್‌ ಕಾರ್ಡ್‌ದಾರರಿಗೆ 50000 ರೂ. ನೀಡಿ'

ಕೋವಿಡ್‌- 19 ವೈರಸ್‌ ನಿಯಂತ್ರಿಸಲು ಗುಡಿಯಲ್ಲಿರುವ ಶಕ್ತಿ ದೇವತೆಗಳು ಹಾಗೂ ಮಠ ಮಾನ್ಯರು ಮಾಡಿದ ಹೋಮ ಹವನಾದಿಗಳು ವಿಫಲ| ಕೊರೋನಾ ವೈರಸ್‌ಗೆ ಔಷಧಿವಿಲ್ಲದೆ ಜನ ತೊಂದರೆ ಅನುಭವಿಸುತ್ತಿದಾರೆ| ಕೇಂದ್ರ ಸರ್ಕಾರ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಗುಡಿಯಲ್ಲಿ ಹಾಗೂ ಮಠಗಳಲಿರುವ ಹಣ, ಚಿನ್ನ, ಚಿರಾಸ್ಥಿ ಸರಕಾರದ ಸಂಪತ್ತು ಎಂದು ಘೋಷಣೆ ಮಾಡಬೇಕು|
 

K R Kadechur says Government Should give 50000 Rs to BPL Card Holders due to Lockdown
Author
Bengaluru, First Published May 28, 2020, 1:38 PM IST

ವಿಜಯಪುರ(ಮೇ.28): ದೇಶದಲ್ಲಿ ಕೋವಿಡ್‌-19 ವೈರಸ್‌ನಿಂದ ಸುಮಾರು ಶೇ.75 ರಷ್ಟು ಬಡವರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಗೆ ಮಾಡಿಕೊಳ್ಳಲು ಹಣವಿಲ್ಲದೇ ಸಂಕಷ್ಟದಲ್ಲಿ ಇದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಬಿಪಿಎಲ್‌ ಕಾರ್ಡ್‌ದಾರರಿಗೆ 50000 ಪರಿಹಾರ ನೀಡಬೇಕು ಎಂದು ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆಯ ಅಧ್ಯಕ್ಷ ಕೆ.ಆರ್‌. ಕಡೇಚೂರ ಒತ್ತಾಯಿಸಿದ್ದಾರೆ. 

ಕೋವಿಡ್‌- 19 ವೈರಸ್‌ ನಿಯಂತ್ರಿಸಲು ಗುಡಿಯಲ್ಲಿರುವ ಶಕ್ತಿ ದೇವತೆಗಳು ಹಾಗೂ ಮಠ ಮಾನ್ಯರು ಮಾಡಿದ ಹೋಮ ಹವನಾದಿಗಳು ವಿಫಲವಾಗಿವೆ. ಕೊರೋನಾ ವೈರಸ್‌ಗೆ ಔಷಧಿವಿಲ್ಲದೆ ಜನ ತೊಂದರೆ ಅನುಭವಿಸುತ್ತಿದಾರೆ. ಕೇಂದ್ರ ಸರ್ಕಾರ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಗುಡಿಯಲ್ಲಿ ಹಾಗೂ ಮಠಗಳಲಿರುವ ಹಣ, ಚಿನ್ನ, ಚಿರಾಸ್ಥಿ ಸರಕಾರದ ಸಂಪತ್ತು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ವಿಜಯಪುರ: ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಲೋಪವಾಗದಿರಲಿ, ಸಚಿವೆ ಜೊಲ್ಲೆ

ಗುಡಿ ಮತ್ತು ಮಠಗಳು ಇವೆಲ್ಲ ಭಕ್ತರಿಂದ ಪಡೆದ ಕಾಣಿಕೆಗಳಾಗಿವೆ. ಆದ್ದರಿಂದ ಕೋವಿಡ್‌- 19 ವೈರಸ್‌ ಕಾರಣದಿಂದ ಬಡ ಜನರು ಮತ್ತು ಕೂಲಿಕಾರರು ಸಂಕಷ್ಟ ಸ್ಥಿತಿಯಲ್ಲಿ ಇದ್ದಾಗಲೂ ಗುಡಿ ಮತ್ತು ಮಠದ ಆಡಳಿತಗಳು ಜನರ ನೆರವಿಗೆ ಬಾರದೆ ಇರುವುದರಿಂದ ಇವರು ಸಂಗ್ರಹಿಸಿ ಇಟ್ಟ ಸಂಪತನ್ನು ಸರ್ಕಾರದ ಸಂಪತ್ತು ಎಂದು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios