ಕಾಂಗ್ರೆಸ್‌ ಸೋಲಿಗೆ ಕಾರಣ ಬಿಚ್ಚಿಟ್ಟ ಕೆ.ಎನ್. ರಾಜಣ್ಣ

ಪಂಚ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದಲ್ಲಿರುವ ಗುಂಪುಗಾರಿಕೆ ಕಾರಣ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.

K.N. revealed the reason for the defeat of Congress. Rajanna  snr

 ತುಮಕೂರು :  ಪಂಚ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದಲ್ಲಿರುವ ಗುಂಪುಗಾರಿಕೆ ಕಾರಣ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.

ಪಂಚರಾಜ್ಯ ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿ ಒಗ್ಗಟ್ಟಾದರೂ ಬಿರುಕು ಮುಚ್ಚುವ ಕೆಲಸ ಆಗಲಿಲ್ಲ. ಆ ದೃಷ್ಟಿಯಿಂದ ಆ ಒಂದು ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಸೋಲಲಿಕ್ಕೆ ಕಾರಣ ಆಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಮಧ್ಯಪ್ರದೇಶ, ರಾಜಸ್ತಾನ, ಛತ್ತಿಸ್‌ಘಡದಲ್ಲಿ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದು, ಈ ಫಲಿತಾಂಶ ಸ್ಥಳೀಯ ಪಕ್ಷಗಳಿಗೆ ಭವಿಷ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದರು.

ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ಒಂದು ಕಾಲದಲ್ಲಿ 15, 20 ಸೀಟು ಬರುತ್ತಿತ್ತು. ಸೀಮಾಂದ್ರದಲ್ಲಿ ಒಂದು ಸೀಟು ಬರುತ್ತಿರಲಿಲ್ಲ. ಸಿಮಾಂದ್ರಾ ತೆಲಂಗಾಣ ಎಲ್ಲಾ ಒಟ್ಟಾಗಿದ್ದ ರಾಜ್ಯಗಳು. ಚಂದ್ರಶೇಖರ್ ರಾವ್ ಅವರು ತೆಲಂಗಾಣ ರಾಜ್ಯದ ಸೃಷ್ಟಿಕರ್ತರು. ಅವರಿಗೆ ಜನ 2 ಬಾರಿ ಅವಕಾಶ ನೀಡಿದರು, ಅವರು ಕುಟುಂಬಕ್ಕೆ ಸೀಮಿತವಾಗಿ ಕುಟುಂಬ ರಾಜಕಾರಣ ಮಾಡಿದರು. ಆದರೆ ಕುಟುಂಬ ರಾಜಕಾರಣವನ್ನು ಜನರು ಸಹಿಸಿಲ್ಲ. ಹೀಗಾಗಿ ಈ ತೀರ್ಮಾನ ಮಾಡಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಯಿಂದಾಗಿ ತೆಲಂಗಾಣದಲ್ಲಿ ಗೆದ್ದಿದ್ದೇವೆ ಅಂತ ಭಾವಿಸುವ ಹಾಗಿಲ್ಲ. ಮೊದಲನೇಯದಾಗಿ ಕುಟುಂಬ ರಾಜಕಾರಣಕ್ಕೆ ಬೇಸತ್ತು ಜನ ವೋಟ್ ಹಾಕಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಯಿಂದ 10% ಬದಲಾವಣೆ ಆಗಿರಬಹುದು, ಅದೇ ಗ್ಯಾರಂಟಿಗಳು ರಾಜಸ್ಥಾನದಲ್ಲಿ ಹೇಳಿದ್ವಿ ಯಾಕೆ ವರ್ಕೌಟ್ ಆಗಲಿಲ್ಲ ಎಂದು ಪ್ರಶ್ನಿಸಿದ ಅವರು ಗ್ಯಾರಂಟಿ ಒಂದರಿಂದಲೇ ನಾವು ಗೆದ್ದಿದ್ದೇವೆ ಅಂತ ಒಪ್ಪಿಕೊಳ್ಳಲು ಆಗುವುದಿಲ್ಲ ಎಂದರು.

ತೆಲಂಗಾಣದ ರಿಸಲ್ಟ್ ನಲ್ಲಿ ಅಲ್ಪಸಂಖ್ಯಾತರು ಒಟ್ಟಾಗಿ ಕಾಂಗ್ರೆಸ್ ಕಡೆ ಬಂದಿದ್ದಾರೆ. ಹೈದರಾಬಾದ್ ಹೊರತುಪಡಿಸಿ ಬೇರೆ ಎಲ್ಲಾ ಕಡೆ ಅಲ್ಪಸಂಖ್ಯಾತರ ಕಾಂಗ್ರೆಸ್ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಷ್ಟ್ರಾದ್ಯಂತ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಬರಬಹುದು. ಯು ಪಿ ಮತ್ತು ಬಿಹಾರದ ಕೆಲವು ಕ್ಷೇತ್ರಗಳಲ್ಲಿ 30-40 % ಅಲ್ಪಸಂಖ್ಯಾತರಿದ್ದಾರೆ ಎಂದರು.

ಅವು ಸ್ಥಳೀಯ ಪಕ್ಷಗಳಿಗೆ ಹಂಚು ಹೋಗುವುದರಿಂದ ಏನು ಆಗಲ್ಲ. ಹೀಗಾಗಿ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಹೇಳಿ ಚಿಂತನೆ ಮಾಡಿದ್ದಾರೆ ಎಂದರು. ಬಡವರು ಕೂಡ ಕಾಂಗ್ರೆಸ್ ಪರ ಒಲವು ತೋರಿಸಿರುವಂತಹ ದಿಕ್ಸೂಚಿನ ಈ ಚುನಾವಣೆಯನ್ನು ಕಾಣಬಹುದಾಗಿದೆ. ಮಧ್ಯಪ್ರದೇಶ ರಾಜಸ್ಥಾನದಲ್ಲಿ ಮೋದಿಯಿಂದ ಗೆದ್ದವರು ಈ ಭಾಗದಲ್ಲಿ ಯಾಕೆ ಗೆಲ್ಲಲಿಲ್ಲ ಎಂದರು.

ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಾಗಿ ಹೇಳಿದ್ದೇನೆ. ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಬಂದರೆ ನಾನು ನಿಲ್ಲುತ್ತೇನೆ ಎಂದರು.

ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗುವುದು ಅದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆರನೇ ತಾರೀಕು ಬಳಿಕ ನಿರ್ಧಾರ ಮಾಡುತ್ತೀನಿ ಅಂತ ಹೇಳಿದ್ದಾರೆ, 6ನೇ ತಾರೀಖು ನಡೆಯುವುದು ರಾಜಕೀಯೇತರ ಕಾರ್ಯಕ್ರಮ ಎಂದರು.

Latest Videos
Follow Us:
Download App:
  • android
  • ios