2ಬಿ ಮೀಸಲಾತಿ ರದ್ದು ಪ್ರಕರಣದಲ್ಲಿ ಮುಸ್ಲಿಂ ಸಮಾಜಕ್ಕೆ ನ್ಯಾಯ ಕೊಡಿಸುವೆ: ಶಾಸಕ ವಿಜಯಾನಂದ ಕಾಶಪ್ಪನವರ
ಸಾಮಾಜಿಕ ನ್ಯಾಯ ನೀಡುವುದು ಸರ್ಕಾರದ ಕೆಲಸ. ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜಕ್ಕೆ ೨ಬಿ ಮೀಸಲಾತಿ ಕೆಟಗೇರಿ ರದ್ದು ಪ್ರಕರಣದಲ್ಲಿ ಅನ್ಯಾಯವಾಗಿದೆ. ಈ ಸಮುದಾಯದವರಿಗೆ ನಾನು ನ್ಯಾಯ ಕೊಡಿಸುವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಳಕಲ್ಲ (ಡಿ.03): ಸಾಮಾಜಿಕ ನ್ಯಾಯ ನೀಡುವುದು ಸರ್ಕಾರದ ಕೆಲಸ. ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜಕ್ಕೆ 2ಬಿ ಮೀಸಲಾತಿ ಕೆಟಗೇರಿ ರದ್ದು ಪ್ರಕರಣದಲ್ಲಿ ಅನ್ಯಾಯವಾಗಿದೆ. ಈ ಸಮುದಾಯದವರಿಗೆ ನಾನು ನ್ಯಾಯ ಕೊಡಿಸುವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಕರ್ನಾಟಕ ಮುಸ್ಲಿಂ ಯುನಿಟಿ ಇಳಕಲ್ಲ ಘಟಕದ ವತಿಯಿಂದ ಸಲ್ಲಿಸಲಾದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಮುಸ್ಲಿಂ ಜನಾಂಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದೆ ಇದೆ. ಅವರು ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಸರ್ಕಾರದ್ದು. ನಾನು ಒಬ್ಬ ಶಾಸಕನಾಗಿ ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವೆ ಎಂದರು.
ಬಾಗಲಕೋಟೆ ಜಿಲ್ಲಾ ಕರ್ನಾಟಕ ಮುಸ್ಲಿಂ ಯುನಿಟಿ ಅಧ್ಯಕ್ಷ ಅಬ್ದುಲ್ ರಜಾಕ ತಟಗಾರ ಮಾತನಾಡಿ, ಮುಸ್ಲಿಂ ಸಮುದಾಯದ ೨ಬಿ ಮಿಸಲಾತಿ ಬಿಜೆಪಿ ಸರ್ಕಾರ ರದ್ದುಪಡಿಸಿದ್ದು ಸಂವಿಧಾನ ಬಾಹಿರ ಎಂಬುದು ಎಲ್ಲರಿಗೂ ಗೊತ್ತು. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಕ್ರಮವನ್ನು ಸಂಪುಟ ಸಭೆಯಲ್ಲಿ ಚರ್ಚಿಸಬೇಕಾಗಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ಇಲ್ಲಿಯವರೆಗೆ ತೆಗೆದುಕೊಂಡಿಲ್ಲ. ನಮ್ಮ ಸಂಘದ ಬೇಡಿಕೆಯಂತೆ ಅಂದಿನ ಬಿಜೆಪಿ ಸರ್ಕಾರದ ನಿರ್ಣಯವನ್ನು ಸಚಿವ ಸಂಪುಟ ಸಭೆಯಲ್ಲಿ ಹಿಂದಕ್ಕೆ ಪಡೆದು, ನೂತನ ನಿರ್ಣಯದ ಪ್ರತಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಡಿ.4ರಂದು ಸುವರ್ಣಸೌಧಕ್ಕೆ ರೈತರಿಂದ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್
ಮುಸ್ಲಿಂ ಸಮಾಜದ ೨ಬಿ ಮೀಸಲಾತಿ ಧರ್ಮಾಧಾರಿತವಾಗಿರದೆ, ಇತರ ಹಿಂದುಳಿದ ಜಾತಿ ಎಂದು ಪರಿಗಣಿಸಿ ನೀಡಿರುವುದಾಗಿದೆ. ಶೇ. ೪% ಮೀಸಲಾತಿ ಮುಂದುವರೆಸುವುದರ ಜೊತೆಗೆ ಎಚ್. ಕಾಂತರಾಜ ವರದಿ ಜಾರಿಗೆ ತಂದು, ಜಾತಿ ಆಧಾರಿತ ಮೀಸಲಾತಿಯಂತೆ ಅತಿ ಹೆಚ್ಚು ಜನಸಂಖ್ಯೆ ಇರುವ ಸಮಾಜವನ್ನು ಶೇ. ೮%ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು..
ಮುಖಂಡ ಹಾಗೂ ಕೆಎಂಯು ರಾಜ್ಯಾಧ್ಯಕ್ಷ ಜಬ್ಬಾರ ಕಲಬುರ್ಗಿ ಮಾತನಾಡಿ ರಾಜ್ಯದಲ್ಲಿ ಮುಸ್ಲಿಂ ಸಮಾಜದ 9 ಶಾಸಕರು ಇದ್ದಾರೆ. ಆದರೆ, ೭ ತಿಂಗಳ ಅವಧಿಯಲ್ಲಿ ಒಮ್ಮೆಯೂ ಮೀಸಲಾತಿ ಪರ ಧ್ವನಿ ಎತ್ತದಿರುವುದು ಅತ್ಯಂತ ನೋವಿನ ಸಂಗತಿ. ಶಾಸಕ ವಿಜಯಾನಂದ ಕಾಶಪ್ಪನವರು ೨ಬಿ ಮೀಸಲಾತಿ ರದ್ದು ಪಡಿಸಿದ್ದ ವೇಳೆ ಬಹಿರಂಗವಾಗಿ ವಿರೋಧ ವ್ಯಕ್ತ ಪಡಿಸಿದರು. ಸಮಾಜ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ೨ಬಿ ಮಿಸಲಾತಿ ವಿಷಯ, ಕಾಂತರಾಜ ವರದಿ ಸ್ವೀಕಾರ ಮತ್ತು ಅನುಷ್ಠಾನ ಮಾಡುವ ಕೆಲಸ ಹಾಗೂ ಮುಸ್ಲಿಂ ಸಮಾಜದ ಅಮಾಯಕ ಯುವಕರ ಮತ್ತು ಮುಖಂಡರ ಮೇಲೆ ಹಾಕಿರುವ ಸ್ವಯಂ ಪ್ರೇರಿತ ಪ್ರಕರಣದ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಅಪರಾಧ ಗುರುತಿಸುವಲ್ಲಿ ವಿಧಿ ವಿಜ್ಞಾನ ತಜ್ಞರು ಮುಖ್ಯ: ಪ್ರಲ್ಹಾದ್ ಜೋಶಿ
ಶಾಸಕರ ನಿವಾಸದಿಂದ ನೇರವಾಗಿ ಇಳಕಲ್ಲ ತಹಸೀಲ್ದಾರ್ ಈಶ್ವರ ಗಡ್ಡಿಗೆ, ಹುನಗುಂದ ತಹಸೀಲ್ದಾರ್ ಸಂದಿಗವಾಡರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ಮುಖಂಡ ಅಲ್ತಾಪ ಕಲಬುರ್ಗಿ, ಇಮಾಮ ಲಟಗೇರಿ, ಮುನ್ನಾ ಖಾಜಿ, ಮೈನುದ್ದೀನ ಧನ್ನೂರ, ರಾಜು ಗುಳೇದಗುಡ್ಡ, ಗುಡೂರ ಗ್ರಾಮದ ಬಶೀರ ಕರ್ನೂಲ, ಖಾಜೇಸಾಬ ಬಾಗವಾನ, ಮರ್ದಾನಸಾಬ ತುಪ್ಪದ, ಮಹಬೂಬ ಆರಿ, ಬಶೀರ ಮಲ್ಲಾಪುರ, ಮೌಲಾಸಾಬ ಮುಲ್ಲಾ, ಮುರ್ತುಜಸಾಬ ಆನೇಹೊಸುರ, ಮಹಬೂಬ ಕೊಪ್ಪದ, ಸಲೀಂಸಾಬ, ರಜಾಕ ರೇಶ್ಮಿ, ರಫಿಕ ವಾಲಿಕಾರ, ಇಮಾಮ ಕರಡಿ, ಯಾಶೀನ ಗಡೇದ, ಶಬ್ಬೀರ ಮೌಲ್ವಿ, ಶಮ್ಮು ಸರಕಾವಸ, ಅಬ್ದುಲ್‌ಸಾಬ ಮ್ಯಾಗೇರಿ, ಅಜೀಜ ಕಲಬುರ್ಗಿ, ಮಸ್ತಾನ ಮಕಾನದಾರ, ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.