ಮೈಸೂರು(ಏ.11): ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ ಮೈಸೂರು ಜಿಲ್ಲೆ ನಂಜನಗೂಡಿನ ಜ್ಯುಬಿಲಿಯಿಂಟ್‌ ಮೊದಲ ವ್ಯಕ್ತಿ (ಪಿ52) ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಈವರೆಗೂ ಇಬ್ಬರು ಗುಣಮುಖರಾಗಿದ್ದು, ಸೋಂಕಿತರ ಸಂಖ್ಯೆ 40ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗಯಷ್ಟೇ ಹೊಸದಾಗಿ 5 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಇದರಿಂದ ಸೋಂಕಿತರ ಸಂಖ್ಯೆ 41ಕ್ಕೆ ಹೆಚ್ಚಾಗಿತ್ತು. ಸಂಜೆ ಹೊತ್ತಿಗೆ ಪಿ52 ಗುಣಮುಖರಾಗಿರುವುದರಿಂದ ಸೋಂಕಿತರ ಸಂಖ್ಯೆ 40ಕ್ಕೆ ಇಳಿದಿದೆ.

ಸೀಲ್‌ ಡೌನ್‌ಗೆ ಸಿದ್ಧರಾಗಿ: ಜನರಿಗೆ ಕರೆ ನೀಡಿದ ಶಾಸಕ

ಪಿ52 35 ವರ್ಷದ ವ್ಯಕ್ತಿಯಿಂದಲೇ ಜ್ಯುಬಿಲಿಯಿಂಟ್‌ ಕಾರ್ಖಾನೆಯ ಹಲವರಿಗೆ ಸೋಂಕು ಹರಡಿದ್ದು, ಕಾರ್ಖಾನೆಯ ಎಲ್ಲಾ ನೌಕರರು ಮತ್ತು ಕುಟುಂಬದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆದರೆ, ಇವರಿಗೆ ಯಾರಿಂದ? ಹೇಗೆ? ಎಲ್ಲಿ? ಕೊರೋನಾ ವೈರಸ್‌ ತಗುಲಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

ಪಿ52 ಜ್ಯುಬಿಲಿಯಿಂಟ್‌ ಕಾರ್ಖಾನೆಯಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದ್ದ ಮೊದಲ ವ್ಯಕ್ತಿಯಾಗಿದ್ದು, ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವ 2ನೇ ವ್ಯಕ್ತಿಯಾಗಿದ್ದಾರೆ. ಇವರು ಗುಣಮುಖರಾಗಲು ಶ್ರಮಿಸಿದ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಧನ್ಯವಾದ ಸಲ್ಲಿಸಿದ್ದಾರೆ.

ಎಲ್ಲರಿಗೂ ಧನ್ಯವಾದ

ನನಗೆ 10 ದಿನಗಳಿಂದ ಜ್ವರ ಇತ್ತು, ನಾನು ಬೇರೆ ಕ್ಲಿನಿಕ್‌ಗೆ ತೋರಿಸಿದೆ. ಮಾ.21 ರಂದು ಖಾಸಗಿ ಆಸ್ಪತ್ರೆಗೆ ಸೇರಿದ್ದೆ. ನಂತರ ಮಾ.25 ರಂದು ಕೆ.ಆರ್‌. ಆಸ್ಪತ್ರೆಗೆ ಕರೆದುಕೊಂಡು ಹೋದರು. ಮಾ.26 ರಂದು ನನಗೆ ಎಲ್ಲ ರೀತಿಯ ಲಸಿಕೆ ಮತ್ತು ಮಾತ್ರೆಗಳನ್ನು ನೀಡಿದರು. ಮಾ.30 ರಂದು ಕೋವಿಡ್‌ ಆಸ್ಪತ್ರೆಗೆ ಕಳುಹಿಸಿದರು. ಸತತ 14 ದಿನಗಳ ಕಾಲ ನನಗೆ ಎಲ್ಲ ರೀತಿಯ ಲಸಿಕೆ ಮತ್ತು ಮಾತ್ರೆಗಳನ್ನು ನೀಡಿ, ನನ್ನನ್ನು ಸಂಪೂರ್ಣವಾಗಿ ಗುಣಮುಖರಾಗಿ ಮಾಡಿದ್ದಾರೆ. ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ.

ಸೀಲ್‌ಡೌನ್‌ಗೆ ರಾಜ್ಯ ಸಿದ್ಧ; ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆ

ಸರ್ಕಾರ ಹೇಳಿದ ರೀತಿ ಎಲ್ಲರೂ ಕೇಳಿ ಮತ್ತು ಆರೋಗ್ಯ ಅಧಿಕಾರಿಗಳು ನಿಮಗೆ ನೀಡುವಂತಹ ಸಲಹೆಗಳನ್ನು ಕೇಳಿ, ಆರೋಗ್ಯದಿಂದ ಇರಿ. ಸರ್ಕಾರವು ಕೊರೋನಾ ರೋಗಿಗಳಿಗೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯರಿಗೆ ನನ್ನ ಧನ್ಯವಾದಗಳು ಎಂದು ಜ್ಯುಬಿಲಿಯಿಂಟ್‌ ನೌಕರ ಪಿ52 ಹೇಳಿದ್ದಾರೆ.