ಚಿತ್ರದುರ್ಗ: ಬಯಲುಸೀಮೆಯ ಊಟಿ ಜೋಗಿಮಟ್ಟಿಗೀಗ ಕಾಡ್ಗಿಚ್ಚಿನ ಆತಂಕ!
ರಾಜ್ಯದ ಮಿನಿ ಊಟಿ ಎಂದು ಹೆಸುವಾಸಿಯಾಗಿರುವ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಒಣಗಿದ ಗಿಡ ಮರಗಳು. ಹಚ್ಚ ಹಸಿರಿನಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಪ್ರದೇಶ ಈಗ ಕಪ್ಪು ವರ್ಣಕ್ಕೆ ತಿರುಗಿದ್ದು, ಒಂದು ಬೆಂಕಿ ಕಿಡಿ ತಾಕಿದ್ರೆ ಸಾಕು ಕಾಡ್ಗಿಚ್ಚು ಬೀಳುವ ಆಂತಕ ಎದುರಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.15): ರಾಜ್ಯದ ಮಿನಿ ಊಟಿ ಎಂದು ಹೆಸುವಾಸಿಯಾಗಿರುವ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಒಣಗಿದ ಗಿಡ ಮರಗಳು. ಹಚ್ಚ ಹಸಿರಿನಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಪ್ರದೇಶ ಈಗ ಕಪ್ಪು ವರ್ಣಕ್ಕೆ ತಿರುಗಿದ್ದು, ಒಂದು ಬೆಂಕಿ ಕಿಡಿ ತಾಕಿದ್ರೆ ಸಾಕು ಕಾಡ್ಗಿಚ್ಚು ಬೀಳುವ ಆಂತಕ ಎದುರಾಗಿದೆ.
ಕೋಟೆನಾಡಿನ ಜೋಗಿಮಟ್ಟಿ ಅಂದ್ರೆ ಸಾಕು ಮಿನಿ ಊಟಿ ಎಂದು ಭಾವಿಸಿ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸ್ತಾರೆ. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಬಿಸಿಲಿನ ತಾಪಮಾನಕ್ಕೆ ಬೆಂಡಾಗಿದ್ದು, ಬಹುತೇಕ ಜೋಗಿಮಟ್ಟಿ, ಆಡು ಮಲ್ಲೇಶ್ವರ ಅರಣ್ಯ ಪ್ರದೇಶ ಇಂದು ಹಸಿರು ಕಪ್ಪು ವರ್ಣಕ್ಕೆ ತಿರುಗಿದೆ. ಯಾರಾದ್ರು ಪ್ರವಾಸಿಗರು ತೆರಳಿದ ಸಂದರ್ಭದಲ್ಲಿ ಧೂಮಪಾನ, ಮತ್ತು ಇನ್ನಿತರ ಚಟುವಟಿಕೆ ಮಾಡುವ ಸಮಯದಲ್ಲಿ ಒಂದು ಕಡ್ಡಿ ಗೀರದರೆ ಸಾಕು ಒಣಗಿರೋ ಇಡೀ ಅರಣ್ಯ ಪ್ರದೇಶ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ.
ಚಿತ್ರದುರ್ಗ: ಬಿಸಿಲಿನ ತಾಪದಿಂದ ಹೂವಿನ ಬೆಳೆ ರಕ್ಷಿಸಲು ಸೀರೆಗಳ ಮೊರೆ ಹೋದ ರೈತ!
ಎತ್ತ ಕಡೆ ಕಣ್ಣಾಡಿಸಿದ್ರು ಅರಣ್ಯ ಪ್ರದೇಶ ಸಂಪೂರ್ಣ ಒಣಗಿದ್ದು, ಇದನ್ನು ಮನದಲ್ಲಿ ಇಟ್ಕೊಂಡು ಪ್ರವಾಸಕ್ಕೆ ತೆರಳುವ ಜನರು ಜೋಗಿಮಟ್ಟಿ, ಆಡುಮಲ್ಲೇಶ್ವರ ಉಳುವಿಗಾಗಿ ಅಭಿಯಾನ ಕೈಗೊಳ್ಳಬೇಕಿದೆ. ಅಲ್ಲದೇ ಯಾವುದೇ ರೀತಿಯ ಕಡ್ಡಿ ಗೀರಿ ಸಂಪೂರ್ಣ ಅರಣ್ಯ ನಾಶ ಮಾಡಲು ಜನರು ಮುಂದಾಗಬಾರದು. ಒಂದು ಬಾರಿ ಮಳೆ ಬಂದ್ರೆ ಸಾಕು ಹಚ್ಚ ಹಸಿರಿನಿಂದ ಕಂಗೊಳಿಸೋ ಆ ಸುಂದರ ಪರಿಸರವನ್ನು ನೋಡುವ ಸೊಬಗೇ ಬೇರೆ. ಆದ್ದರಿಂದ ಸದ್ಯ ಜೋಗಿಮಟ್ಟಿ ಅರಣ್ಯಕ್ಕೆ ಕಷ್ಟಕಾಲ ಒದಗಿ ಬಂದಿದ್ದು, ಪ್ರಾಣಿ ಪಕ್ಷಿಗಳ ಸ್ಥಿತಿ ಕೂಡ ಶೋಚನೀಯ ಪರಿಸ್ಥಿತಿಯಲ್ಲಿದ್ದು, ಪ್ರವಾಸಿಗರು ಕಾಡು ಉಳಿಸುವ ಸಲುವಾಗಿ ಜೋಗಿಮಟ್ಟಿ ಅರಣ್ಯ ಕಾಪಾಡುವ ಉದ್ದೇಶದಿಂದ ಯಾವುದೇ ಅಹಿತಕರ ಘಟನೆಗೆ ಸಾಕ್ಷಿಯಾಗಬೇಡಿ ಎಂದು ಪರಿಸರ ಪ್ತೇಮಿಗಳ ಪ್ರವಾಸಿಗರಲ್ಲಿ ಮನವಿ ಮಾಡಿಕೊಂಡರು.
ಇಡೀ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಅಂದ್ರೆ ಅದು ಕೋಟೆನಾಡು ಚಿತ್ರದುರ್ಗದಲ್ಲಿ ಇರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶ. ಪ್ರತೀ ವರ್ಷವೂ ಮಳೆಗಾಲ ಸಮಯದಲ್ಲಿ ಲಕ್ಷಾಂತರ ಪ್ರವಾಸಿಗರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಜೋಗಿಮಟ್ಟಿ ಸೌಂದರ್ಯವನ್ನು ಸವಿಯುತ್ತಾರೆ. ಆದ್ರೆ ಈಗ ಆ ಪ್ರದೇಶಕ್ಕೆ ಕಷ್ಟಕಾಲ ಎದುರಾಗಿದ್ದು, ಪ್ರಾಣಿ ಪಕ್ಷಿಗಳಿಗೂ ನೀರುವ ಅಭಾವ ಎದುರಾಗಿದೆ. ಸದ್ಯ ಜೋಗಿಮಟ್ಟಿ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಏರಿದ್ದು, ಇತ್ತ ಆಡು ಮಲ್ಲೇಶ್ವರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಪ್ರವಾಸಕ್ಕೆ ತೆರಳುವ ಪ್ರವಾಸಿಗರು, ಒಣಗಿರೋ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾಡ್ಗಿಚ್ಚಿಗೆ ಕಾರಣರಾಗದೇ ಪರಿಸರ ಉಳುವಿಗಾಗಿಣ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರು ಪೂರೈಸುವ ಕ್ರಮ ವಹಿಸಲಿ ಹಾಗೂ ಅರಣ್ಯ ಇಲಾಖೆ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿ ಕೆಲಸ ನಿರ್ವಹಸಿಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈ ಬೇಸಗೆಗೆ ಭಾರೀ ತಾಪಮಾನ ಹೆಚ್ಚಳ! ಐಎಂಡಿ ವಿಜ್ಞಾನಿ ಹೇಳಿದ್ದೇನು?
ಚೆನ್ನಾಗಿದ್ದಾಗ ಖುಷಿ ಪಡೋದಕ್ಕಿಂತ ಕಷ್ಟಕಾಲ ಬಂದಾಗ ಪ್ರವಾಸಿಗರು ಸಹಕರಿಸಿದ್ರೆ ಅದ್ರಿಂದ ಆಗುವ ಅನುಕೂಲಗಳೇ ಬೇರೆ, ಆದ್ದರಿಂದ ಮಿನಿ ಊಟಿ ಜೋಗಿಮಟ್ಟಿ ಪ್ರದೇಶಕ್ಕೆ ತೆರಳುವ ಪ್ರವಾಸಿಗರು ಹಸಿರನ್ನು ಉಳಿಸಲು ಮುಂದಾಗಲಿ, ಅರಣ್ಯ ಇಲಾಖೆ ಕೂಡ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಬಯಕೆ.