ಬಂಡೆದ್ದ ಶಾಸಕರನ್ನು ನಾಯಿಗೆ ಹೋಲಿಕೆ! ಜೆಡಿಎಸ್ ನಾಯಕನ ಫೇಸ್ಬುಕ್ ಪೋಸ್ಟ್!

ಬಂಡೆದ್ದ ಶಾಸಕರನ್ನು ನಾಯಿಗೆ ಹೋಲಿಕೆ!| ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಫೇಸ್ಬುಕ್ ಪೋಸ್ಟ್ ಹುಟ್ಟುಹಾಕಿತು ಚರ್ಚೆ

JDS youth leader compares party MLAs who resigned with dogs

ಯಾದಗಿರಿ[ಜು.08]: ಅತೃಪ್ತ ಶಾಸಕರ ರಾಜೀನಾ ಮೆಯಿಂದಾಗಿ ರಾಜ್ಯ ಮೈತ್ರಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಕೆಲವು ತಿಂಗಳ ಹಿಂದ ಷ್ಟೇ ಇಂತಹ ಸ್ಥಿತಿ ಎದುರಾಗಿದ್ದ ವೇಳೆ ಬಿಎಸ್‌ವೈ ಆಡಿಯೋ ಟೇಪ್ ಮೂಲಕ ಸಿಎಂ ಕುಮಾರಸ್ವಾಮಿ ಕುರ್ಚಿ ಬಚಾವ್ ಮಾಡಿದ್ದ ಜೆಡಿಎಸ್ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಅವರ ಹೆಸರಿನ ಫೇಸ್ಬುಕ್ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ

ಶರಣಗೌಡ ಕಂದಕೂರು ಹೆಸರಿನ ಫೇಸ್ಬುಕ್‌ನಲ್ಲಿ ರಾಜ ಹಾಗೂ ನಾಯಿಗಳ ಕುರಿತ ಪೋಸ್ಟ್ ಸದ್ಯದ ರಾಜಕೀಯವನ್ನು ವ್ಯಂಗ್ಯವಾಗಿ ವ್ಯಾಖ್ಯಾನಿಸಿದಂತಿದೆ. ಎಚ್ .ಡಿ. ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಕಂದಕೂರು ಅತ್ಯಂತ ನಿಷ್ಠಾವಂತರು. ದಶಕಗಂದ ಜೆಡಿಎಸ್ ನಲ್ಲಿಯೇ ಗುರುತಿಸಿಕೊಂಡ ನಾಗನಗೌಡ ಕಂದಕೂರು ಅವರ ಮಾತುಗಳನ್ನು ಗೌಡರ ಕುಟುಂಬ ತಳ್ಳಿ ಹಾಕುವುದೇ ಇಲ್ಲ ಎನ್ನಲಾ ಗಿದೆ. ಈಚಿನ ಬೆಳವಣಿಗೆಗಳಿಂದ ಶರಣಗೌಡ ಆಕ್ರೋಶಗೊಂಡು, ಪರೋಕ್ಷವಾಗಿ ಇಂತಹ ಬರಹದ ಮೂಲಕ ರಾಜೀನಾಮೆ ನೀಡಿದ್ದ ಶಾಸಕರನ್ನು ಪರೋಕ್ಷವಾಗಿ ತಿವಿದಿದ್ದಾರೆಂದು ರಾಜಕೀಯ ವಲಯಗಳಲ್ಲಿ ಮಾತುಗಳು ಮೂಡಿಬಂದಿವೆ.

ಬಿಎಸ್‌ವೈ ಕಥೆ: ಶರಣಗೌಡ ಕಂದಕೂರು ಅವರ ಫೇಸ್ಬುಕ್ ಪೇಜ್‌ನಲ್ಲಿ ರಾಜ-ನಾಯಿಗಳ ಕತೆ ಚರ್ಚೆಗೆ ಗ್ರಾಸವಾಗಿದೆ. ‘ಒಂದೂರಲ್ಲಿ ಒಬ್ಬ ರಾಜ ಇದ್ದ, ಎಲ್ಲ ಬಗೆಯ ನಾಯಿಗಳನ್ನು ಸಾಕುತ್ತಿದ್ದ. ಕೆಲವೊಮ್ಮೆ ಬೀದಿಗಳಲ್ಲಿ ಅನಾ ಥವಾಗಿ ಬಿದ್ದಿದ್ದ, ಹಿಟ್ಟಿಗೂ ಗತಿಯಿಲ್ಲದ ನಾಯಿಗಳನ್ನು ತಂದು ಸಾಕಿ, ಆರೈಕೆ ಮಾಡಿದ. ಬಾಡಿ ಹೋಗಿದ್ದ ಬಡಕಲು ಬೀದಿ ನಾಯಿಗಳು ದಷ್ಟಪುಷ್ಟವಾಗಿ ಬೆಳೆದವು, ಬೀದಿಯಲ್ಲಿ ಕಲ್ಲಿನಲ್ಲಿ ಹೊಡೆಸಿಕೊಳ್ಳುತ್ತಿದ್ದ ನಾಯಿಗಳಿಗೆ ಆಶ್ರಯ ಸಿಕ್ಕಿ, ಸ್ವಂತ ಬಲ ಬಂದ ಮೇಲೆ ರಾಜನ ಮೇಲೆಯೇ ಮುಗಿಬಿದ್ದವು.

ಅಲ್ಲದೇ, ಉತ್ತಮ, ತಳಿಯ ನಾಯಿಗಳಿಗೂ ತಮ್ಮ ಬುದ್ಧಿ ಕಲಿಸ ತೊಡಗಿದವು. ಕೊನೆಗೆ ರಾಜ ನಮಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ಬೇಕಾದ ನಾಯಿಗಳಿಗೆ ಮಾತ್ರ ಉತ್ತಮ ಆರೈಕೆ ಮಾಡುತ್ತಾನೆಂದು ದಂಗೆಯೆದ್ದವು. ಇನ್ನು, ಸಾಕಿ ಸಲುಹಿದ್ದ ನಾಯಿಗಳು ರಾಜನ ಬಿಟ್ಟು ದೂರವಾದವು, ನೀಯತ್ತಿಲ್ಲದ ನಾಯಿಗಳು..’ ಎಂಬುದಾಗಿ ಬರೆದ ಪೋಸ್ಟ್ ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಮೀಷಕ್ಕೆ ಬಗ್ಗೋದಿಲ್ಲ:

ಈ ಹಿಂದೆ, ದೇವದುರ್ಗಕ್ಕೆ ಬಂದಿದ್ದಾಗ, ಆಪರೇಶನ್ ಕಮಲಕ್ಕೆ ಕೈಹಾಕಿ ಸುಟ್ಟುಕೊಂಡಿದ್ದ ಬಿಎಸ್‌ವೈ ವಿರುದ್ಧ ಲಂಚದ ಆರೋಪ ಕೇಳಿ ಬಂದಿತ್ತು. ಮೈತ್ರಿ ಸರ್ಕಾರ ಇನ್ನೇನು ಬಿತ್ತು ಅನ್ನೋವ ಷ್ಟರಲ್ಲಿ, ಬಿಜೆಪಿಗೆ ಬಂದರೆ ಕೋಟ್ಯಂತರ ರು. ಗಳ ಕೊಡೋದಾಗಿ ತಮಗೆ ಮಾಜಿ ಸಿಎಂ ಬಿಎಸ್‌ವೈ ಆಮಿಷ ತೋರಿಸಿದ್ದು, ಈ ಬಗ್ಗೆ ಮಾತುಕತೆಗಳ ಆಡಿಯೋ ಪ್ರದರ್ಶಿಸಿದ ಶರಣಗೌಡ, ಮೈತ್ರಿ ಸರ್ಕಾರದ ಕುರ್ಚಿ ಯನ್ನು ಭದ್ರವಾಗಿಸುವಲ್ಲಿ ಸಫಲರಾಗಿದ್ದರು. ಆಗಿನಿಂದ ಮತ್ತಷ್ಟೂ ಗೌಡರ ಕುಟುಂಬದ ನಂಬಿಕೆಗೆ ಪಾತ್ರರಾದವರು. ರಾಜ್ಯ ಜೆಡಿಎಸ್ ಯುವ ಘಟಕಕ್ಕೆ ಶರಣಗೌಡ ಕಂದಕೂರಗೆ ಮಹಾ ಪ್ರಧಾನ ಕಾರ್ಯದರ್ಶಿ ಪಟ್ಟ ನೀಡ ಲಾಗಿದೆಯೆಲ್ಲದೇ, ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಒಪ್ಪಲು ಶರಣಗೌಡರ ಒತ್ತಾಯ ಕಾರಣ ಎಂದು ಖುದ್ದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದನ್ನು ಗಮನಿಸಬಹುದು.

Latest Videos
Follow Us:
Download App:
  • android
  • ios