ಚುನಾವಣೆ ಗೆಲುವಿಗೆ ಜೆಡಿಎಸ್ ಟಾರ್ಗೆಟ್ ನೀಡಿದೆ. ಗೆಲುವಿಗೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದು, ಈಗಾಗಲೇ ತಯಾರಿಯೂ ನಡೆಯುತ್ತಿದೆ.

ಶ್ರೀರಂಗಪಟ್ಟಣ (ಸೆ.08): ಪಟ್ಟಣದ ಟಿಎಪಿಸಿಎಂಎಸ್‌ ಚುನಾವಣೆಯನ್ನು ಕೋವಿಡ್‌ 19 ಇರುವ ಕಾರಣ ಮತದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಮತಯಾಚನೆ ಮಾಡಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ತಮ್ಮ ಖಾಸಗಿ ಕುಟೀರದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆಯ ಪೂರ್ವ ಭಾವಿ ಸಂಬಂಧ ಚರ್ಚೆ ನಡೆಸಿ ಮಾತನಾಡಿದ ಶಾಸಕರು, ಈ ತಿಂಗಳ ಅಂತ್ಯಕ್ಕೆ ಚುನಾವಣೆ ಘೋಷಣೆಯಾಗಿದೆ. ಜೆಡಿಎಸ್‌ ಪಕ್ಷದಿಂದ ಕಣಕ್ಕಿಳಿಯುವ ಕನಿಷ್ಠ 7 ಅಭ್ಯರ್ಥಿಗಳು ಗೆಲ್ಲಲ್ಲೇಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ. ಟಿಎಪಿಸಿಎಂಎಸ್‌ ಅಧಿಕಾರದ ಚುಕ್ಕಾಣೆಯನ್ನು ಹಿಡಿಯ ಬೇಕೆಂದು ಆಶಿಸಿದರು.

ಬಿಹಾರ ಜತೆ ರಾಜ್ಯದ ಎರಡು ಕ್ಷೇತ್ರಗಳಿಗೂ ಚುನಾವಣೆ ...

ಅನುದಾನ ತಡೆ ಹಿಡಿದ ಸರ್ಕಾರ: ಮಾಜಿ ಸಿಎಂ ಕುಮಾರಸ್ವಾಮಿ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದ 804 ಕೋಟಿ ಅನುದಾನವನ್ನು ಹಾಲಿ ಸಿಎಂ ಯಡಿಯೂರಪ್ಪ ತಡೆ ಹಿಡಿದಿದ್ದಾರೆ. ಪ್ರಸ್ತುತ ಕ್ಷೇತ್ರದಲ್ಲಿ 645 ಕೋಟಿರು.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ 600 ಕೋಟಿ ರು. ಗಳ ಕ್ರಿಯಾ ಯೋಜನೆ ಸಿದ್ದವಾಗಿ ಬಿಡುಗಡೆ ಆಗಬೇಕಿದ್ದ ಹಣವನ್ನು ಬಿಜೆಪಿ ಸರ್ಕಾರ ತಡೆಯಿಡಿದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ನಾನು ಕೋವಿಡ್‌-19 ವೇಳೆ ಕ್ಷೇತ್ರದಾದ್ಯಂತ ಸಂಚರಿಸಿ ಕಷ್ಟದಲ್ಲಿದ್ದವರಿಗೆ ವೈಯಕ್ತಿಕವಾಗಿ ಆಹಾರ ಕಿಚ್‌ ವಿತರಣೆ ಮಾಡಿದ ವೇಳೆ ನನ್ನ ವಿರುದ್ಧವೂ ಎರಡು ಪ್ರಕರಣ ದಾಖಲಾಗಿರುವುದು ಬೇಸರ ತರಿಸಿದೆ. ನಾನು ಬಡವರು, ನೊಂದವರಿಗೆ ನೆರವು ನೀಡಿದ್ದು ತಪ್ಪೇ ಎಂದು ಪ್ರಶ್ನೆ ಮಾಡಿದರು.

'ನಿಜವಾದ ಊಸರವಳ್ಳಿ ನೀವೇ : ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ವಾರ್ನಿಂಗ್ '

ಸಾವು, ಮದುವೆ, ತಿಥಿ ಮಾಡಿಕೊಂಡೆ ಕ್ಷೇತ್ರದ ಮತದಾರರನ್ನು ಮರಳು ಮಾಡಿ ಅಧಿಕಾರ ನಡೆಸಿ ಕ್ಷೇತ್ರದ ಅಭಿವೃದ್ಧಿ ಕುಂಠಿತ ಮಾಡಿದವರಿಗಿಂತ ಕಳೆದ 2 ವರ್ಷದಲ್ಲಿ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ನಮ್ಮ ಕಾರ್ಯಕರ್ತರು ಮತದಾರರ ಬಳಿ ಹೆಮ್ಮೆಯಿಂದ ಮುಂಬರುವ ಚುನಾವಣೆಗಳಲ್ಲಿ ಮತ ಕೇಳಬಹುದು ಎಂದು ಪರೋಕ್ಷವಾಗಿ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ವಿರುದ್ಧ ಶಾಸಕರು ಹರಿಹಾಯ್ದರು.

ಈ ವೇಳೆ ತಾಪಂ ಸದಸ್ಯ ದೇವೇಗೌಡ, ಎಪಿಎಂಸಿ ಅಧ್ಯಕ್ಷ ಸಚ್ಚಿನ್‌ ಚಂದ್ರಶೇಖರ್‌, ಮಾಜಿ ಅಧ್ಯಕ್ಷ ಬೆಳಗೋಳ ಸ್ವಾಮಿಗೌಡ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಹೋಸ ಆನಂದೂರು ಸ್ವಾಮಿಗೌಡ, ಪುರಸಭೆ ಸದಸ್ಯರಾದ ಕೃಷ್ಣಪ್ಪ, ಎಸ್‌.ಪ್ರಕಾಶ್‌, ಕೆಆರ್‌ಎಸ್‌ ಗ್ರಾಪಂ ಮಾಜಿ ಸದಸ್ಯ ವಿಜಯ್ ಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು.