ಬೀರೂರು (ಡಿ.10):  ಜೆಡಿಎಸ್‌ ಪಕ್ಷ ಸದೃಢವಾಗಲು ಕಾರ್ಯಕರ್ತರೇ ಮುಖ್ಯವಾಗಲಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಯುವ ಕಾರ್ಯಕರ್ತರನ್ನು ಗುರುತಿಸಿ, ಅವರನ್ನು ಗೆಲ್ಲಿಸಬೇಕು. ಆಗ ಮುಂಬರುವ ಚುನಾವಣೆಗಳಲ್ಲಿ ಯುವಕರ ಪಾತ್ರ ಮುಖ್ಯವಾಗಲಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಬುಧವಾರ ಕಡೂರು ವಿಧಾನಸಭಾ ಕ್ಷೇತ್ರದ 2020ರ ಗ್ರಾಮ ಪಂಚಾಯಿತಿ ಚುನಾವಣೆ ನಮ್ಮ ಗ್ರಾಮ ನಮ್ಮ ಅಧಿಕಾರ ಜನರ ಕೈಗೆ ಅಧಿಕಾರ ನಮ್ಮ ಸ್ಪಷ್ಟವಿಚಾರದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಾಸನಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಕಡೂರು ಕ್ಷೇತ್ರಕ್ಕೂ ನೀಡುವ ಮೂಲಕ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮತಗಳು ನಮ್ಮ ಪಕ್ಷಕ್ಕೆ ಹಿನ್ನಡೆ ನೀಡಿದವು. ಮುಂದೆಯೂ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿವೆ. ಜೆಡಿಎಸ್‌ ಸಂಘಟನೆಯಲ್ಲಿ ಸದೃಢವಾಗಿದ್ದು, ಕಾರ್ಯಕರ್ತರ ಬಲದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.

ಸದನಕ್ಕೆ ಚಕ್ಕರ್‌: ಪ್ರತಿಭಟನೆಗೆ ಕಾಂಗ್ರೆಸ್‌ ನಾಯಕರು ಹಾಜರ್‌ ..

ಗ್ರಾ.ಪಂ. ಚುನಾವಣೆ ನಂತರ ಮಾಚ್‌ರ್‍ ತಿಂಗಳಲ್ಲಿನಲ್ಲಿ ತಾ.ಪಂ., ಜಿ.ಪಂ. ಚುನಾವಣೆ ಬರಲಿದೆ. ಕೊರೋನಾ ಹಿನ್ನೆಲೆ ಕೇಂದ್ರ ಸರ್ಕಾರ ಯಾವುದೇ ಸಂಸದರಿಗೆ ಅನುದಾನ ನೀಡಿಲ್ಲ. ಅನುದಾನ ಬಂದ ನಂತರ .90 ಲಕ್ಷ ಅನುದಾನ ಕಡೂರಿಗೆ ನೀಡಲಾಗುವುದು. ಗ್ರಾಮಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ 30 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಗ್ರಾ.ಪಂ. ಚುನಾವಣೆಗಳು ಪಕ್ಷಾತೀತ ಚುನಾವಣೆಯಾಗಿದೆ. ಈಗಾಗಲೇ 25 ಗ್ರಾ.ಪಂ.ಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ. ಬೂತ್‌ ಮಟ್ಟದಿಂದ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಪಕ್ಷದಲ್ಲಿ ಪೈಪೋಟಿ ಹೆಚ್ಚಾಗಿ ಒಮ್ಮತದ ಅಭ್ಯರ್ಥಿಗಳು ಸ್ಪರ್ಧಿಸುವುದು ವಿರಳ ಎಂಬಂತಾಗಿದೆ. ಈ ಚುನಾವಣೆಯಲ್ಲಿ ಗೆದ್ದವರು ಸೋತವರು ನಮ್ಮವರೇ ಎಂಬ ಭಾವನೆ ಮೂಡಬೇಕಿದೆ ಎಂದರು.

ಚುನಾವಣೆಗಳು ವ್ಯಾಪಾರೀಕರಣವಾಗುತ್ತಿವೆ. ಪಕ್ಷನಿಷ್ಠೆ ಕಡಿಮೆಯಾಗುತ್ತಿದೆ. ನಮ್ಮಿಂದ ಗೆದ್ದು ಬೇರೆ ಪಕ್ಷದ ಕಡೆ ಮುಖ ಮಾಡದೇ ಪಕ್ಷಕ್ಕೆ ನಿಷ್ಠರಾಗಿರಬೇಕಿದೆ. ಪಕ್ಷ ಅಭ್ಯರ್ಥಿಗಳಿಗೆ ನೈತಿಕವಾಗಿ ಬೆಂಬಲ ನೀಡಲಿದೆ. ಈ ಚುನಾವಣೆಗೆ ಪಕ್ಷ ತಯಾರಿ ಮಾಡಿಕೊಂಡಿದೆ. ಗ್ರಾಮಸ್ವರಾಜ್‌ ಕಲ್ಪನೆ ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರದ್ದಾಗಿದೆ. ಜನರ ಕೈಗೆ ಅಧಿಕಾರ ನೀಡಿರುವುದು ಜನತಾ ಪರಿವಾರ ಎಂದು ಹೇಳಿದರು.