ಕೋಲಾರ [ಸೆ.06]: ‘ಆಪರೇಷನ್‌ ಕಮಲ’ ಹೆಸರಿನಲ್ಲಿ ಕೋಲಾರದ ಜೆಡಿಎಸ್‌ ಶಾಸಕ ಶ್ರೀನಿವಾಸ್‌ ಗೌಡ ಅವರಿಗೆ ಬಿಜೆಪಿ ಒಡ್ಡಿತ್ತು ಎನ್ನಲಾದ ಹಣದ ಆಮಿಷದ ಬಗ್ಗೆ ಜಾರಿ ನಿರ್ದೇಶನಾಲಯ(ಇ.ಡಿ)ಕ್ಕೆ ದೂರು ಸಲ್ಲಿಕೆಯಾಗುವ ಸಂಭವ ಇದೆ ಎನ್ನ​ಲಾ​ಗಿ​ದೆ. 

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಮತ್ತು ಶಾಸಕ ಕೆ.ಶ್ರೀನಿವಾಸಗೌಡ ಸೇರಿ ಐದಾರು ಮಂದಿ ಶುಕ್ರವಾರ ದೆಹಲಿಗೆ ತೆರಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿ ಭೇಟಿ ನಂತರ ಇಡಿ ಕಚೇರಿಗೆ ತೆರಳಿ ಆಪ​ರೇಷನ್‌ ಕಮ​ಲದ ಕುರಿತು ದೂರು ನೀಡಲಿದ್ದಾರೆ ಎನ್ನ​ಲಾ​ಗು​ತ್ತಿ​ದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಶಾಸಕ ಕೆ.ಶ್ರೀನಿವಾಸಗೌಡ, ಶುಕ್ರವಾರ ಹೊಸ ರಾಜಕೀಯ ಬೆಳವಣಿಗೆ ನಡೆ​ಯ​ಲಿದೆ ಎಂದು ಈ ಕುರಿತು ಪರೋಕ್ಷ ಸುಳಿವನ್ನೂ ನೀಡಿದರು.