ಶ್ರೀರಂಗಪಟ್ಟಣ (ಏ.06): ದೊಡ್ಡ ನಾಯಕರ ಬಗ್ಗೆ ಮಾತನಾಡುವಾಗ ಯೋಗ್ಯತೆಗೆ ತಕ್ಕಂತೆ ಮಾತನಾಡಬೇಕು ಎಂದು ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು. 

ಪಟ್ಟಣದ ತಾಲೂಕು ಪಂಚಾಯ್ತಿ ತಮ್ಮ ಕಚೇರಿಯಲ್ಲಿ  ಮಾತನಾಡಿದ ಅವರು ಮಾತೃ ಹೃದಯಿ ಮಾಜಿ ಮುಖ್ಯಮಂತ್ರಿ ಎಚ್.ಡಿ  ಕುಮಾರಸ್ವಾಮಿಯವರ ಬಣ್ಣದ ಬಗ್ಗೆ ಶಾಸಕ ಜಮೀರ್ ಅಹಮದ್ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು. 

ಈ ಹಿಂದೆ ಜೆಡಿಎಸ್ನಲ್ಲೆ ಇದ್ದು ನಮ್ಮ ನಾಯಕ ಎಚ್ ಡಿಕೆ ಅವರನ್ನು ಬಳಸಿಕೊಂಡು ಶಾಸಕರಾಗಿ ಆಯ್ಕೆಯಾಗಿ ಇಂದು  ರೈತ ನಾಯಕ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತನಾಡುತ್ತಿರುವುದನ್ನು ಇಡೀ ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು. 

ಜಮೀರ್‌ ಅಹಮದ್ ವಿರುದ್ಧ ದಾಖಲಾಯ್ತು ದೂರು ...

ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವ ರಾಜಕೀಯದಲ್ಲಿ ಗಂಭೀರತೆ ಇಲ್ಲದ ನವು  ರಾಜ್ಯ ನಾಯಕನ ಬಗ್ಗೆ ಮಾತನಾಡಬೇಕಾದರೆ ಅರಿವಿರಬೇಕು ಎಂದು ಶಾಸಕ ಜಮೀರ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಮುಂದಿನ ದಿನಗಳಲ್ಲಿ ಆತ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಲು ನಾಲಾಯಕ್.  ನಾನು ಬಹಳ ವರ್ಷಗಳಿಂದ  ಕಾಂಗ್ರೆಸ್‌ ಪಕ್ಷದಲ್ಲಿ ಇದ್ದೆ. ಇಂತಹ ನಡವಳಿಕೆಯನ್ನು ಆ ಪಕ್ಷವು ಕೂಡ ಒಪ್ಪಿವಿದೊಲ್ಲ. ಈ ಅವಿವೇಕಿತನವನ್ನು ಇಲ್ಲಿಗೆ ನಿಲ್ಲಿಸಬೇಕು. ತಮ್ಮ ಯೋಗ್ಯತೆಗೆ ತಕ್ಕಂತೆ ಮಾತನಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಒಮ್ಮೆ ಚುನಾವಣೆಯಲ್ಲಿ ಗೆದ್ದು ಬರೀ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವ ವ್ಯಕ್ತಿ ರಾಜ್ಯ ನಾಯಕನ ವಿರುದ್ದ ಮಾತನಾಡುವುದು ಸರಿಯಲ್ಲ.  ಜನ ಪ್ರತಿನಿಧಿಗಳು ಸಮಾಜವನ್ನು ಸುಧಾರಣೆ ಕಡೆ ತೆಗೆದುಕೊಂಡು ಹೋಗಬೇಕು. ಈಗಾಗಲೇ ನಿಮ್ಮಿಂದ ರಾಜ್ಯದಲ್ಲಿ ಅನೇಕ ಅವಘಡಗಳು ನಡೆದಿವೆ. ಕೂಡಲೇ ಕ್ಷಮೆ ಕೇಳಬೇಕು ಎಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.