ಅಣ್ಣ, ತಮ್ಮ ಹೊಡೆದಾಡ್ತಾರೆಂದು ಕಾಂಗ್ರೆಸ್‌ನಿಂದ ತಿರುಕನ ಕನಸು: ಎಚ್.ಡಿ.ರೇವಣ್ಣ
ನಾವು ಅಣ್ಣ ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ. ದೇವೇಗೌಡರು ಬದುಕಿರುವವರೆಗೂ ನಾನಾಗಲಿ, ಕುಮಾರಣ್ಣ ಆಗಲಿ, ಅವರ ಮಕ್ಕಳಾಗಲಿ ಹೊಡೆದಾಡುತ್ತೇವೆ ಅಂತ ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.
ಹೊಳೆನರಸೀಪುರ (ಏ.17): ನಾವು ಅಣ್ಣ ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ. ದೇವೇಗೌಡರು (HD Devegowda) ಬದುಕಿರುವವರೆಗೂ ನಾನಾಗಲಿ, ಕುಮಾರಣ್ಣ (HD Kumaraswamy) ಆಗಲಿ, ಅವರ ಮಕ್ಕಳಾಗಲಿ ಹೊಡೆದಾಡುತ್ತೇವೆ ಅಂತ ಕಾಂಗ್ರೆಸ್‌ನವರು (Congress) ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ (HD Revanna) ಲೇವಡಿ ಮಾಡಿದರು. ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ಜನತಾ ಜಲಧಾರೆ (Janat Jaladhare) ರಥಯಾತ್ರೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಾಲಮನ್ನಾ ಮಾಡೋದು ಬೇಡ, ಸರ್ಕಾರಿ ಶಾಲೆಗಳ ಕಡೆ ಹೋಗೋಣ, ಹಳ್ಳಿ ಹಳ್ಳಿಗಳಲ್ಲಿ ಇಂಗ್ಲೀಷ್ ಶಾಲೆ ತೆರೆದು ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಯಲ್ಲಿ ಖಾಸಗಿ ಶಾಲೆ ಮುಚ್ಚಿಸೋಣವೆಂದಿದ್ದೆ. ಆದರೆ ಸಾಲಮನ್ನಾ ಮಾಡಿದ್ದರು. ಮಕ್ಕಳ ಬದಲು ರೈತರಿಗೆ ಒಳ್ಳೆಯದಾಯಿತು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದಾರೆ. ಈಗ ಬಿಜೆಪಿಯವರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ.
Hassan: ಹುಟ್ಟೂರು ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿನಲ್ಲಿ ಮ್ಯೂಸಿಯಂ
ತಲೆ ಹೊಡೆದವರಿಗೂ 307 ಕೇಸ್ ಮತ್ತು ತಲೆ ಹೊಡೆಸಿಕೊಂಡವರಿಗೂ 307 ಕೇಸು ದಾಖಲಿಸುತ್ತಿದ್ದಾರೆ ಎಂದು ಟೀಕಿಸಿದರು. ಶಾಸಕ ಬಾಲಕೃಷ್ಣ ಮಾತನಾಡಿದರು. ಶಾಸಕರಾದ ಎ.ಟಿ.ರಾಮಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಮಾಜಿ ಸಚಿವ ನಾಗರಾಜಯ್ಯ, ಮಾಜಿ ಶಾಸಕರಾದ ಕೃಷ್ಣಪ್ಪ ಹಾಗೂ ಮೂರ್ತಿ, ಪುರಸಭಾಧ್ಯಕ್ಷೆ ಜಿ.ಕೆ.ಸುಧಾ ನಳಿನಿ, ಮುಖಂಡರಾದ ನಾಗರಾಜು, ರಮೇಶಗೌಡ, ಮುತ್ತಿಗೆ ರಾಜೇಗೌಡ, ಜಿಲ್ಲೆಯ ವಿವಿಧ ತಾಲೂಕು ಘಟಕದ ಜೆಡಿಎಸ್ ಅಧ್ಯಕ್ಷರುಗಳು, ಪುರಸಭೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಇತರರು ಇದ್ದರು.
ಸಿದ್ದರಾಮಯ್ಯ ಜೊತೆ ಇರೋರು ಮಿಠಾಯಿ ತಿಂದವ್ರೆ!: ಈಶ್ವರಪ್ಪ ಅವರು ಚರಮುರಿ, ಕಡ್ಲೆಕಾಯಿ ತಿಂದಿದ್ದಾರೆ. ಆದರೆ ಸಿದ್ದರಾಮಯ್ಯನವರ ಜತೆಯಲ್ಲಿ ಇರೋರು ಮಿಠಾಯಿ ತಿಂದವ್ರೆ. ಮಿಠಾಯಿ ತಿಂದು ಕೈ ಒರೆಸಿಕೊಂಡಿದ್ದಾರೆ. ಅದು ಹೊರಗೆ ಬರಲಿಲ್ಲ. ಈಗ ನೆಗೆದಾಡ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾಂಗ್ರೆಸಿವರು ಈಗ ಸಾಬ್ರನಾ ತಬ್ಬಿಕೊಳ್ಳಲು ಹೋಗಿದ್ದಾರೆ. ಜೆಡಿಎಸ್ ತೆಗೆಯಲು ಹೋಗಿ 80 ಸ್ಥಾನಕ್ಕೆ ಇಳಿದು ಬಿಜೆಪಿನ 104ಕ್ಕೆ ತಂದರು ಎಂದು ರೇವಣ್ಣ ಮೂದಲಿಸಿದರು. ದೇವೇಗೌಡರು, ಕುಮಾರಣ್ಣ ಕುಟುಂಬ ರಾಜಕೀಯ ಅಂತಾರೆ. ಆದರೆ ಯಾವ ಪಕ್ಷದಲ್ಲಿ ಕುಟುಂಬ ರಾಜಕೀಯವಿಲ್ಲ ಎಂದು ಪ್ರಶ್ನಿಸಿದರು. ನನ್ನ ಜೀವನ ಇರೋವರೆಗೂ ಈ ಜಿಲ್ಲೆಯ ಜನತೆಯ ಋುಣ ತೀರಿಸುತ್ತೇನೆ ಎಂದು ಶಾಸಕ ರೇವಣ್ಣ ಹೇಳಿದರು.
ಶ್ರೀರಾಮದೇವರಕಟ್ಟೆ ನೀರನ್ನು 2ರಿಂದ 1ಬೆಳೆಗೆ ಸೀಮಿತ ಮಾಡಿದರು: ಮೈಸೂರು ಮಹಾರಾಜರ ಕಾಲದಿಂದಲೂ ಶ್ರೀರಾಮದೇವರಕಟ್ಟೆಯಿಂದ 2 ಬೆಳೆಗೆ ನೀರನ್ನು ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಒಂದು ಬೆಳೆಗೆ ಸೀಮಿತ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಕಾವೇರಿ ನೀರಾವರಿ ಯೋಜನೆಯ 2500 ಕೋಟಿ ರು. ಅಭಿವೃದ್ಧಿ ಕಾಮಗಾರಿಗೆ ತಡೆ ನೀಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವನ್ನು ಕಟುವಾಗಿ ಟೀಕಿಸಿದರು. ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 16ರ ಶನಿವಾರ ತಾಲೂಕಿನ ಶ್ರೀರಾಮದೇವರಕಟ್ಟೆಯಿಂದ ಜಾತ್ಯತೀತ ಜನತಾದಳದ ನಾಯಕರ ನೇತೃತ್ವದಲ್ಲಿ ‘ಜನತಾ ಜಲಧಾರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಕೆಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 1962 ರಿಂದ 1983ರ ತನಕ 230 ಕೋಟಿ ರು. ಖರ್ಚು ಮಾಡಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಪತ್ನಿಗೆ ಐಟಿ ನೋಟಿಸ್: ಎಚ್ ಡಿ ರೇವಣ್ಣ ಗರಂ
ದೇವೇಗೌಡರು ಸಚಿವರಾದ ನಂತರ 6 ವರ್ಷದಲ್ಲಿ 800 ಕೋಟಿ ಮತ್ತು ಪ್ರಧಾನ ಮಂತ್ರಿಯಾದ ನಂತರ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ರು. ಹಣ ನೀಡಿದ್ದಾರೆ. ಹೇಮಾವತಿ ಅಚ್ಚುಕಟ್ಟು ಪ್ರದೇಶದಲ್ಲಿ 5 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಹಾಗೂ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ದೇವೇಗೌಡರು ಕೊಡುಗೆಯನ್ನು ಕಾಣಬಹುದಾಗಿದೆ. ಅಂದು ಕೈಗೊಂಡ ಕಲವಾರು ಯೋಜನೆಗಳಲ್ಲಿ ಒಂದಾದ ವಿತರಣಾ ನಾಲೆಗಳಲ್ಲಿ ಹೂಳು ತುಂಬಿಕೊಂಡು ನೀರು ನಿಗದಿತ ಸ್ಥಳಕ್ಕೆ ತಲುಪದೇ ರೈತರಿಗೆ ಅನ್ಯಾಯವಾಗುತ್ತಿದೆ. ಹಲವಾರು ಏತನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಅಗತ್ಯ ಅನುದಾನದ ಕೊರತೆಯಿಂದ ಕಾಮಗಾರಿ ನಿಂತಿದೆ ಮತ್ತು ಇದರಿಂದ ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಆದ್ದರಿಂದ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುವ ಸಲುವಾಗಿ ಈ ಜಲಯಾತ್ರೆ ಕೈಗೊಳ್ಳಲಾಗಿದೆ ಎಂದರು.