ಮೈಸೂರು, (ಆ.14):  ಮೈಸೂರು-ಚಾಮರಾಜನಗರ ಹಾಲು ಒಕ್ಕೂಟ ಸಂಘದ (ಮೈಮೂಲ್)  ನೂತನ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು (ಬುಧವಾರ) ನಡೆದ ಮೈಸೂರು ಹಾಲು ಒಕ್ಕೂಟ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಆಪ್ತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಿಎಂ BSY ಭೇಟಿ : ಬಿಜೆಪಿಯತ್ತ ಜೆಡಿಎಸ್‌ ಶಾಸಕ?

ಬಿಎಸ್‌ವೈ-ಜಿಟಿಡಿ ಮಾತುಕತೆ ಯಶಸ್ವಿ
ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ  ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತರಾದ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಸಿಎಂ ಬಿಎಸ್‌ ಯಡಿಯೂರಪ್ಪ ತಂಗಿ ಮಗ ಎಸ್‌.ಸಿ.ಅಶೋಕ್  ನಾಮಪತ್ರ ಸಲ್ಲಿಸಿದ್ದರು.

ಈ ಮೊದಲೇ ಮಾಜಿ ಸಚಿವ ಜಿ.ಟಿ.ದೇವೇಗೌಡ ಸಿಎಂ ಬಿಎಸ್‌ವೈ ಜೊತೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ವೈ ತಂಗಿ ಮಗ ಎಸ್.ಸಿ.ಅಶೋಕ್‌  ನಾಮಪತ್ರ ವಾಪಸ್ ಪಡೆದರು. 

ಜೆಡಿಎಸ್ ವಿರುದ್ಧ ಬೇಸರ ವ್ಯಕ್ತಪಡಿಸಿ ರಾಜಕೀಯಕ್ಕೆ ಗುಡ್ ಬೈ ಹೇಳಿದ ಜಿಟಿಡಿ

ನಾಮಪತ್ರ ವಾಪಸ್ ಹಿನ್ನೆಲೆ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ಸಂಘದ ನೂತನ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾದರು. ಮೈಮುಲ್ ನಲ್ಲಿ ನಾಮನಿರ್ದೇಶಿತರು ಸೇರಿ 14 ಮಂದಿ ಸದಸ್ಯರಿದ್ದರು.

BSYಗೆ ಥ್ಯಾಂಕ್ಸ್ ಹೇಳಿದ GTD
ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ಸಂಘದ ಚುನಾವಣೆ ವಿಚಾರಕ್ಕೆ  ಯಡಿಯೂರಪ್ಪಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಧನ್ಯವಾದ ಹೇಳಿದ್ದಾರೆ.  

ಮೈಸೂರಿನ ತಮ್ಮ ನಿವಾಸದಲ್ಲಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ  ಜಿಟಿಡಿ. ಈ ಮೊದಲೆ ಸಿದ್ದೇಗೌಡರನ್ನ ಅಧ್ಯಕ್ಷರಾಗಿ ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿತ್ತು. ಆದ್ರೆ ವಾರದ ಹಿಂದೆ ನಾಮನಿರ್ದೇಶನವಾದ ಬಿಎಸ್‌ವೈ ತಂಗಿ ಮಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.

ಈ ವಿಚಾರ ಮಾತನಾಡಲು ನಾನು ಬಿಎಸ್‌ವೈ ಅವರ ಮನೆಗೆ ಹೋಗಿದ್ದೆ. ಅವರು ನನ್ನ ಪ್ರೀತಿಯಿಂದ ಮಾತನಾಡಿಸಿ ನನ್ನ ಮನವಿ ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಅವರು ವಿಜಯೇಂದ್ರಗೆ ತಿಳಿಸಿ ಅಶೋಕ್‌ ನಾಮಪತ್ರ ವಾಪಸ್ ಪಡೆದಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿದ ಸಿಎಂಗೆ ಧನ್ಯವಾದಗಳು ಎಂದು ಹೇಳಿದರು.