ಮೈಸೂರಿನಲ್ಲಿ ನಡೆಯುತ್ತಿರುವ ಚುನಾವಣೆಯೊಂದಕ್ಕೆ ಇದೀಗ ಭಾರೀ  ಪ್ರತಿಷ್ಠೆಯಿಂದ ತಂತ್ರ ಪ್ರತಿತಂತ್ರಗಳನ್ನು ಮಾಡಲಾಗಿತ್ತಿದೆ. ಜೆಡಿಎಸ್‌ನೊಳಗೆ ಜಿದ್ದಾ ಜಿದ್ದಿ ಆರಂಭವಾಗಿದೆ. 

 ಮೈಸೂರು (ಮಾ.15): ನಾಳೆ (ಮಾ.16) ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಚುನಾವಣೆ ನಡೆಯುತ್ತಿದ್ದು, ಇದೀಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. 

ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ ಶತಾಯಗತಾಯ ತಮ್ಮ ಬಣ ಗೆಲ್ಲಿಸಲು ಪ್ರಮುಖ ನಾಯಕರ ಪ್ಲಾನ್ ಮಾಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಬಣ ಸೋಲಿಸಲು ದಳಪತಿಗಳ ತಂತ್ರ ನಡೆಸಿದ್ದಾರೆ. 

ಜೆಡಿಎಸ್‌‌ನ ಎಲ್ಲ ಚಟುವಟಿಕೆಗಳಿಂದ ದೂರವಿರುವ ಜಿಟಿಡಿ ಶಕ್ತಿ ಕುಗ್ಗಿಸಲು ಇತ್ತ ದಳಪರಿಗಳು ಕೂಡ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಅವಿಭಜಿತ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ ಜಿ.ಟಿ.ದೇವೇಗೌಡ ಗೆಲುವಿಗಾಗಿ ಸಾಕಷ್ಟು ಯತ್ನ ಮಾಡುತ್ತಿದ್ದಾರೆ. 

‌ ಚುನಾವಣೆ ಪ್ರತಿಷ್ಠೆ : ಮತ್ತೊಮ್ಮೆ ಮೈತ್ರಿಯತ್ತ ಮುಖ ಮಾಡುತ್ತಿದ್ದಾರೆ ಎಚ್‌ಡಿಕೆ ...

ಇದೇ ಸಂದರ್ಭದಲ್ಲಿ ಮೈಮುಲ್‌ ಚುನಾವಣೆಯ ಅಖಾಡ ಪ್ರವೇಶಿಸಿ ಸಭೆ, ಪ್ರಚಾರ ಮಾಡಿರುವ ಎಚ್‌.ಡಿ.ಕುಮಾರಸ್ವಾಮಿಯೂ ಕೂಡ ತಮ್ಮ ಪಡೆಯ ಗೆಲುವಿಗಾಗಿ ನಿರಂತರ ಯತ್ನದಲ್ಲಿ ತೊಡಗಿದ್ದಾರೆ. 

ಇತ್ತ ನಿರ್ದೇಶಕ ಸ್ಥಾನಕ್ಕೆ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಪುತ್ರ ಸ್ಪರ್ಧೆ ಮಾಡಿದ್ದು, ಸಾ.ರಾ.ಮಹೇಶ್‌ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ವೆಂಕಟೇಶ್‌ ಜತೆ ಕೈ ಜೋಡಿಸಿದ್ದಾರೆ ಸೇರಿ ತಂತ್ರ ರೂಪಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.