Asianet Suvarna News Asianet Suvarna News

ಜೆಡಿಎಸ್‌ ತೊರೆದು ಶಾಸಕರ ನೇತೃತ್ವದಲ್ಲಿ 'ಕೈ' ಹಿಡಿದ ಮುಖಂಡರು

ಹಲವು ಮುಖಂಡರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಾಸಕರ ನೇತೃತ್ವದಲ್ಲಿ ತಮ್ಮ ಪಕ್ಷಕ್ಕೆ ಗುಡ್ ಬೈ ಹೇಳಿ ಕೈ ಹಿಡಿದಿದ್ದಾರೆ.

JDS Leaders Joins Congress In Tumakuru
Author
Bengaluru, First Published Aug 30, 2020, 1:19 PM IST

ಪಾವಗಡ (ಆ.30): ಶಾಸಕ ವೆಂಕಟರಮಣಪ್ಪ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹಾಗೂ ನಗರಾಧ್ಯಕ್ಷ ಸುದೇಶ್‌ಬಾಬು, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಆರ್‌.ತಿಪ್ಪೇಸ್ವಾಮಿ ಹಾಗೂ ಯುವ ಮುಖಂಡ ಚಂದ್ರಮೌಳಿ ನೇತೃತ್ವದಲ್ಲಿ ಶುಕ್ರವಾರ ತಾಲೂಕಿನ ಬೊಮ್ಮತನಹಳ್ಳಿಯ ಹಲವಾರು ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಪಟ್ಟಣದ ತಾಲೂಕು ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದ ಮುಖಂಡರಾದ ಎಚ್‌.ನಾಗರಾಜು,ಕೆಇಬಿ ಗುತ್ತಿಗೆದಾರ ಪರಮೇಶ್‌ (ಪಾಪಣ್ಣ)ಅಬ್ದಲ್‌ಸಾಬ್‌, ವೆಂಕಟೇಶಪ್ಪ, ಬಸಯ್ಯ, ಮೆಕಾನಿಕ್‌ ಮಂಜುನಾಥ್‌ ಸೇರಿದಂತೆ ಇತರೆ ಹಲವಾರು ಮಂದಿ ಕಾರ್ಯಕರ್ತರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು ಶಾಸಕರ ಸಾಮಾಜಿಕ ನ್ಯಾಯ ಹಾಗೂ ಪುತ್ರ ಜಿಪಂ ಸದಸ್ಯ ಎಚ್‌.ವಿ.ವೆಂಕಟೇಶ್‌ ಅವರ ಸರಳತೆ ಮತ್ತು ನುಡಿದಂತೆ ನಡೆಯುವ ಪ್ರಾಮಾಣಿಕ ಸೇವೆ ಹಿನ್ನಲೆಯಲ್ಲಿ ಸೇರ್ಪಡೆಯಾಗಿದ್ದು ಇನ್ನೂ ಮುಂದೆ ಕಾಂಗ್ರೆಸ್‌ ಪಕ್ಷದಲ್ಲಿಯೇ ಮುಂದುವರಿಯುವುದಾಗಿ ನೂತತವಾಗಿ ಸೇರ್ಪಡೆಗೊಂಡ ಹಲವು ಮುಖಂಡರು ತಿಳಿಸಿದ್ದಾರೆ.

ಮದ್ದೂರಲ್ಲಿ ಕಮಲ ಅರಳಿಸಲು ಸಜ್ಜಾದ ಬಿಜೆಪಿ : ಫಿಕ್ಸ್ ಆಗ್ತಾರ ಇವರೇ ಅಭ್ಯರ್ಥಿ?..

ಬಳಿಕ ಮಾತನಾಡಿದ ಎಚ್‌.ವಿ.ವೆಂಕಟೇಶ್‌, ತಾಲೂಕಿನಲ್ಲಿ ಕಾಂಗ್ರೆಸ್‌ ಅಲೆ ವ್ಯಾಪಕವಾಗಿದ್ದು ಹೊಸಬರಿಗೆ ಸದಾ ಸ್ವಾಗತವಿದೆ. ಪಕ್ಷ ನಂಬಿ ಬಂದವರಿಗೆ ಪಕ್ಷ ಎಂದು ಕೈಬಿಡುವುದಿಲ್ಲವೆಂದು ಭರವಸೆ ನೀಡಿದರು.

ಪಕ್ಷ ಸೇರಿದ ನಾಲ್ಕೇ ದಿನದಲ್ಲಿ ಅಣ್ಣಾಮಲೈಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್...!..

ಇದೇ ವೇಳೆ ಪುರಸಭೆ ಸದಸ್ಯರಾದ ಪ್ರಮೋದ್‌ ಕುಮಾರ್‌, ಪಿ.ಎಚ್‌.ರಾಜೇಶ್‌.ರವಿ,ಬಾಲಸುಬ್ರಣ್ಯಂ, ನಾಗಭೂಷಣರೆಡ್ಡಿ, ಕನಿಕಲಬಂಡೆ ಅನಿಲ್‌ಕುಮಾರ್‌,ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಕಿರಣ್‌ಕುಮಾರ್‌, ಮಾಜಿ ಗ್ರಾಪಂನ ಬಸಯ್ಯ, ರಾಜಶೇಖರಪ್ಪ ದುರುಗನ್ನ ಸಿನಿಮಾ ಗಂಗಾಧರ್‌ ಹಾಗೂ ಇತರೆ ಹಲವಾರು ಮಂದಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

Follow Us:
Download App:
  • android
  • ios