ಮೈಸೂರು (ಮಾ.01):  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯ ಅವರೇ ನಿಮ್ಮ ಪಕ್ಷವೇ ವಚನ ಭ್ರಷ್ಟಪಕ್ಷವಾಗಿದೆ ಎಂದು ಜೆಡಿಎಸ್ ಮುಖಂಡ ರವಿಚಂದ್ರೇಗೌಡ ಆರೋಪಿಸಿದರು.

 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭದಲ್ಲಿ 5 ವರ್ಷ ಜೆಡಿಎಸ್‌ ಪಕ್ಷಕ್ಕೆ ಸರ್ಕಾರ ನಡೆಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿ, ನಂತರ ಸಿದ್ದರಾಮಯ್ಯ ಅವರೇ ಸರ್ಕಾರವನ್ನು ಕೆಡವಿದ್ದಾರೆ ಎಂದು ಜೆಡಿಎಸ್‌ ಪಕ್ಷದ ರಾಜ್ಯ ವಕ್ತಾರ ಎನ್‌.ಆರ್‌. ರವಿಚಂದ್ರೇಗೌಡ ಆರೋಪಿಸಿದ್ದಾರೆ. 

ಜೆಡಿಎಸ್‌ಗೆ ಪ್ರಭಾವಿ ಮುಖಂಡರ ಸಾಮೂಹಿಕ ರಾಜೀನಾಮೆ..? ದಳಪತಿಗಳಿಗೆ ಕಂಟಕ ...

ಮೈಸೂರು ಮೇಯರ್‌ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಸಾ.ರಾ. ಮಹೇಶ್‌ ಹಾಗೂ ತನ್ವೀರ್‌ ಸೇಠ್‌ ಅವರು ಸೇರಿ ನಿಮ್ಮ ಹುಲಿಯನನ್ನು (ಸಿದ್ದರಾಮಯ್ಯ) ಬೋನಿನಲ್ಲಿ ಇಟ್ಟಿದ್ದಾರೆ ಎಂಬುದು ಜ್ಞಾಪಕದಲ್ಲಿ ಇರಲಿ ಎಂದು ಅವರು ತಿಳಿಸಿದ್ದಾರೆ.