ಮೈಸೂರು [ಸೆ.16]: ದಿನೇ ದಿನೇ ಜೆಡಿಎಸ್ ವಿರುದ್ಧ ಸಿಡಿದು ಬೀಳುವ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಜಳೆ ಮೖಸೂರು ಭಾಗದಲ್ಲಿ ಮತ್ತೊಂದು ಆಘಾತ ಎದುರಾಗಿದೆ.

ಕಳೆದ ವಿಧಾನ ಸಭೆ ಚುನಾವಣೆ ವೇಳೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ನಾಯಕ ಪೊ.ಕೆ.ಎಸ್ ರಂಗಪ್ಪ  ಜೆಡಿಎಸ್ ನಿಂದ ಹೊರ ಹೋಗುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ರಂಗಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದು ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬೋಗಾದಿಯಲ್ಲಿರುವ ರಂಗಪ್ಪ ಮನೆಗೆ ಸಿದ್ದರಾಮಯ್ಯ ತೆರಳಿ ಭೇಟಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮೂಲಕ ಜಿಟಿಡಿ, ಶ್ರೀನಿವಾಸ ಅವರ ಸಾಲಿಗೆ ಇದೀಗ ಮತ್ತೋರ್ವ ಜೆಡಿಎಸ್ ನಾಯಕ ಸೇಲಿದ್ದಾರಾ ಎನ್ನುವ ಶಂಕೆ ವ್ಯಕ್ತವಾಗಿದೆ.