*  ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಸಭೆ*  ಎರಡೂ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಬೇಕು *  ಹಾಲಪ್ಪ ಆಚಾರ ಅವರಾದರೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಿ 

ಯಲಬುರ್ಗಾ(ಸೆ.02): ತಾಲೂಕಿನಲ್ಲಿ ಕಾಂಗ್ರೆಸ್‌-ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ಹೇಳಿದ್ದಾರೆ. 

ಪಟ್ಟಣದ ಬುದ್ಧ ಬಸವ ಅಂಬೇಡ್ಕರ್‌ ಭವನದಲ್ಲಿ ನಡೆದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಬೇಕು ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ತಮ್ಮ ಅಧಿಕಾರವಧಿಯಲ್ಲಿ ನೀರಾವರಿ ಯೋಜನೆ ಜಾರಿಗೊಳಿಸದೆ ಎಂಜಿನಿಯರಿಂಗ್‌ ಕಾಲೇಜು, ಮೊರಾರ್ಜಿ, ಪ್ರವಾಸಿ ಮಂದಿರ ಸೇರಿದಂತೆ ಕೆಲ ಕಟ್ಟಡ ನಿರ್ಮಿಸಿದ್ದಾರೆ. ನೀರಾವರಿ ಯೋಜನೆ ಜಾರಿಗೊಳಿಸಿದ್ದರೆ ರೈತರು ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದರು. ಈಗಿನ ಸಚಿವರಾದ ಹಾಲಪ್ಪ ಆಚಾರ ಅವರಾದರೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಿ ಎಂದು ಒತ್ತಾಯಿಸಿದರು.

ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಸಿಲಿಂಡರ್‌ ಬೆಲೆ ಹೆಚ್ಚಳ: ಬಿಜೆಪಿ ಸಂಸದ ಕರಡಿ

ಜಿಲ್ಲಾ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಈಗಿನಿಂದಲೇ ಪಕ್ಷ ಸಂಘಟನೆ ಮುಂದಾಗಬೇಕು ಎಂದು ಕರೆ ನೀಡಿದರು.

ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಶರಣಪ್ಪ ರಾಂಪುರ, ರೈತರು ಬೆಳೆದ ಬೆಳೆಗೆ ಸಂಪೂರ್ಣ ಬೆಂಬಲ ಬೆಲೆಯಿಲ್ಲ. ರೈತರು ಬೆಳೆದ ಬೆಳೆ ತಾನೇ ಮಾರಾಟ ಮಾಡಿಕೊಳ್ಳುವಂತ ಅವಕಾಶ ಕಲ್ಪಿಸಲು ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮಾತ್ರ ಸಾಧ್ಯ ಎಂದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಬಸವರಾಜ ಗುಳಗುಳಿ, ಗವಿಹಳ್ಳಿ ತಾಲೂಕು ಉಪಾಧ್ಯಕ್ಷ ಕರಿಯಪ್ಪ ತಳವಾರ, ರೆಹಮಾನ್‌ಸಾಬ್‌, ರಾಜಪ್ಪ ಈಳಿಗೇರ, ಹುಸೇನಸಾಬ್‌ ಮೇಲ್ಗಡೆ, ಪ್ರಕಾಶ ಮೇಟಿ, ದಾವಲಸಾಬ್‌ ಮೇಲ್ಗಡೆ, ಅಮೀನ್‌ ಸಾಬ್‌ ಮುಧೋಳ, ಮಾಬುಸಾಬ್‌ ಕಿಡದೂರ, ಶಿವಶಾಂತಗೌಡ ಪೊಲೀಸ್‌ಪಾಟೀಲ್‌, ಮಲ್ಲೇಶ ಹಳ್ಳಿ ಇದ್ದರು.