Asianet Suvarna News Asianet Suvarna News

ಕಾಂಗ್ರೆಸ್‌ ಸೇರ್ಪಡೆಗೆ ಇನ್ನೂ ನಿರ್ಧರಿಸಿಲ್ಲ : ಶೀಘ್ರ ಅಂತಿಮ ತೀರ್ಮಾನ

  •  ರಾಜ್ಯದಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶ
  • ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಚುರುಕು
  • ಕಾಂಗ್ರೆಸ್‌ ಸೇರುವ ಕುರಿತು ಮಾತನಾಡಿದ ಜೆಡಿಎಸ್ ಮುಖಂಡ
JDS leader Konareddy likely to join congress snr
Author
Bengaluru, First Published Sep 21, 2021, 12:38 PM IST
  • Facebook
  • Twitter
  • Whatsapp

 ಮುಂಡರಗಿ  (ಸೆ.21) : ರಾಜ್ಯದಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶದಿಂದ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಚುರುಕುಗೊಳಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ಮುಂಡರಗಿಯಲ್ಲಿ ಸೋಮವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ರಾಜಕಾರಣದಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್‌ ಸೇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆಯೇ ಮತ್ತೋರ್ವ ಮಾಜಿ ಸಚಿವ ?

ಕಾಂಗ್ರೆಸ್‌ ಸೇರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಜೆಡಿಎಸ್‌ ವರಿಷ್ಠರು ತಮ್ಮನ್ನು ಬೆಂಗಳೂರಿಗೆ ಬರುವಂತೆ ಕರೆ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ತಾವು ಬೆಂಗಳೂರಿಗೆ ತೆರಳಿ ಚರ್ಚಿಸುವುದಾಗಿ ಹೇಳಿದರು.

ಸೆ. 26-27ರಂದು ಬೆಂಗಳೂರು ಸಮೀಪದ ರಾಮನಗರದ ಹತ್ತಿರವಿರುವ ಬಿಡದಿಯಲ್ಲಿ ಜೆಡಿಎಸ್‌ ಸಭೆ ಜರುಗಲಿದ್ದು, ಈ ಸಭೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸುವ ಸುಮಾರು 110 ಜನರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜೊತೆಗೆ 2 ದಿನಗಳ ಕಾಲ ಪಕ್ಷ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ ಎಂದರು.

Follow Us:
Download App:
  • android
  • ios