Asianet Suvarna News Asianet Suvarna News

ಶಿರಾದಲ್ಲಿ ಬಿಗ್ ಶಾಕ್ : ಜೆಡಿಎಸ್ ಮುಖಂಡರು ಕೈ ಸೇರ್ಪಡೆ

ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ಪಕ್ಷಾಂತರ ಪರ್ವವೂ ಜೋರಾಗಿದೆ. 

JDS Leader Joins Congress in Shira snr
Author
Bengaluru, First Published Oct 13, 2020, 9:39 AM IST
  • Facebook
  • Twitter
  • Whatsapp

 ಶಿರಾ (ಅ.13):  ಶಿರಾ ಉಪ ಚುನಾವಣೆಯಲ್ಲಿ ಮತದಾರರಿಗೆ ಬಿಜೆಪಿಯ ಪೊಳ್ಳು ಭರವಸೆಯೊಂದಿಗೆ ಹಣ ಹಂಚಿ ಮತದಾರರನ್ನು ಮರಳು ಮಾಡಲು ಯತ್ನಿಸುತ್ತಿದೆ. ಇಂತಹ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಗೆ ಮತ ನೀಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮನವಿ ಮಾಡಿದರು.

ಶಿರಾ ತಾಲೂಕಿನ ಗಡಿ ಗ್ರಾಮ ಲಕ್ಕನಹಳ್ಳಿ ಗ್ರಾಮದ ಜಿಪಂ ಮಾಜಿ ಉಪಾಧ್ಯಕ್ಷ ಗಡಾರಿ ಹನುಮಂತಪ್ಪ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊರೋನಾ ಹೆಚ್ಚಳ ಹಿನ್ನೆಲೆ : ಗ್ರಾಮ ಪಂಚಾಯತ್ ಚುನಾವಣೆ ಮುಂದೂಡುತ್ತಾ? ...

ನಾನು ಶಾಸಕನಾಗಿದ್ದ ಅವಧಿ​ಯಲ್ಲಿ ಶಿರಾ ಕ್ಷೇತ್ರಕ್ಕೆ 2.5 ಸಾವಿರ ಕೋಟಿ ರು. ಅನುದಾನ ತಂದಿದ್ದೇನೆ. ಮಿನಿ ವಿಧಾನಸೌಧ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಾಲಿಟೆಕ್ನಿಕ್‌ ಕಾಲೇಜ್‌ಗಳ ಕಟ್ಟಡಗಳು ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್‌ ಕಟ್ಟಡಗಳು ಮುಂದೆ ಶಿರಾ ಜಿಲ್ಲಾ ಕೇಂದ್ರವಾಗಿಸಲು ಮುನ್ನುಡಿ ಬರೆಯಲಿವೆ ಎಂದರು.

ತ್ರಿವೇಣಿ ಸಂಗಮವಾಗಿ ಶಿರಾ:

ಅಪ್ಪರ ಭಧ್ರ, ಹೇಮಾವತಿ, ಏತ್ತಿನಹೊಳೆಗಳ ನೀರಾವರಿ ಯೋಜನೆಗಳ ಸಂಗಮದಿಂದ ಶಿರಾ ತಾಲೂಕಿಗೆ 3.6 ಟಿಎಂಸಿ ನೀರು ಲಭ್ಯವಾಗಲಿದ್ದು ಶಿರಾ ಮಲೆನಾಡು ರೀತಿ ಸಂಮೃದ್ಧಿಯಾಗಿ ಕಾಣುವ ದಿನಗಳು ದೂರವಿಲ್ಲ. ಶಿರಾ ಆಭಿವೃದ್ಧಿ ಮುಂದುವರೆಸಲು ಕಾಂಗ್ರೆಸ್‌ಗೆ ಮತ ನೀಡಿ. ಕಾರ್ಯಕರ್ತರ ಸಾಧನೆಗಳನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿ ಕಾಂಗ್ರೆಸ್‌ ಅಭ್ಯರ್ಥಿಯ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಡಕಲೂರು, ತಿಮ್ಮನಹಳ್ಳಿ, ಬೆಜ್ಜಿಹಳ್ಳಿ, ಕರಿದಾಸರಹಳ್ಳಿ ಗ್ರಾಮಗಳ ಜೆಡಿಎಸ್‌ ಕಾರ್ಯಕರ್ತ ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೊಂಡು. ಜಿಪಂ ಮಾಜಿ ಉಪಾಧ್ಯಕ್ಷ ಗಡಾರಿ ಹನುಮಂತಪ್ಪ, ಲಕ್ಕನಹಳ್ಳಿ ಕುಮಾರ್‌, ಸಿ.ರಾಮಕೃಷ್ಣಪ್ಪ, ಗೋವಿಂದೇಗೌಡ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಮಂಜುನಾಥ್‌, ಬರಗೂರು ಲತೀಫ್‌, ಗದ್ಗೆರ್‌ ಕುಮಾರ್‌, ನರಸಿಂಹಯ್ಯ, ವಿಶ್ವ, ರಾಜೇಶ್‌, ತಾಪಂ ಸದಸ್ಯ ಮಂಜುನಾಥ್‌, ಎಂ.ಎನ್‌.ಗೌಡ, ಭಾರತಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Follow Us:
Download App:
  • android
  • ios