ಹಾಸನ [ಅ.01]  ರಾಜ್ಯದಲ್ಲಿ  ಅತಿವೃಷ್ಟಿ ಹಾನಿಯಾಗಿದ್ದು  ಈವರೆಗೂ ಕೇಂದ್ರದಿಂದ ಬಿಡಿಗಾಸು ಬಂದಿಲ್ಲ. ಹಾಸನ ಜಿಲ್ಲೆಯಲ್ಲಿ 375 ಕೋಟಿ ರೂ.ನಷ್ಟವಾಗಿದ್ದು  ಕೇವಲ 15 ಕೋಟಿ ಕೊಟ್ಟಿದ್ದಾರೆ. ಕೇಂದ್ರದಿಂದ ಇವರಿಗೆ ಹಣ ತರಲು ಏಕೆ ಆಗುತ್ತಿಲ್ಲವೋ ಗೊತ್ತಿಲ್ಲ ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ‌.ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಪರಿಹಾರ ಕೊಡದೇ ಇದ್ದಮೇಲೆ ಇವರಿಗೆ ಅಧಿಕಾರ ನಡೆಸಲು ನೈತಿಕತೆ ಎಲ್ಲಿದೆ? ಕೇಂದ್ರದ ಬಳಿ ನಿಯೋಗ ತೆಗೆದುಕೊಂಡು ಹೋಗಲು ಇವರಿಗೆ ಹೆದರಿಕೆ ಏಕೆ? ವಿಪಕ್ಷಗಳ ವಿಶ್ವಾಸಕ್ಕೆ ಪಡೆದು ಕೇಂದ್ರಕ್ಕೆ ಮನವರಿಕೆ ಮಾಡಿ. ಸಿಎಂಗೆ ತಂತಿ ಮೇಲೆ ನಡೆಯೋ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ರಾಜ್ಯದ ನೋವಿಗೆ ಮನ ಮಿಡಿಯದ ಮೋದಿ, ಅಂಗಡಿಯ ಉಡಾಫೆ ನೋಡಿ

ಈ ಪರಿಸ್ಥಿತಿಯಲ್ಲಿ ನಾವಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದೆವು. ಸಿಎಂ ಅವರ ಸುಪುತ್ರ ವಿಜಯೇಂದ್ರರನ್ನು ಮುಂದೆ ಬಿಟ್ಟಿದ್ದಾರೆ. ಬಿಜಿಎಸ್ ಸ್ವಾಮೀಜಿ ಫೋನ್ ಟ್ಯಾಪಿಂಗ್ ಮಾಡೋ ಅಗತ್ಯವಿಲ್ಲ. ಅದನ್ನು ವಿಚಾರಣೆ ಮಾಡಲು ನಮ್ಮ ಸಮಾಜದ ಜನ ಇದ್ದಾರೆ. ವಿಜಯೇಂದ್ರ ಯಾರು ಎಂದು ಸವಾಲು ಹಾಕಿದರು.

ಪರಿಸ್ಥಿತಿ ಹೀಗೆ ಮುಂದುವರಿದರೆ ಬಿಜೆಪಿ ಊಟ ಮಾಡೋ ಕಾಲ ಬರಲಿದೆ. 2 ತಿಂಗಳಿಂದ ಏನು ನಡೆಯುತ್ತಿದೆ ಎಂದು ರಾಜ್ಯದ ಜನ ನೋಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಮುಗಿಸಲು ರಾಷ್ಟ್ರೀಯ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ನೆರೆ ಪರಿಹಾರ ಲೋಪ ಮುಚ್ಚಿ ಹಾಕಲು ಫೋನ್ ಟ್ಯಾಪಿಂಗ್ ಸೇರಿ ಬೇರೆ ಬೇರೆ ವಿವಾದ ಎತ್ತುತ್ತಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿಲ್ಲ. ನಮ್ಮನ್ನು ಮಟ್ಟಹಾಕುತ್ತೇವೆ ಎಂದ್ರೆ  ಅದು ಅವರಿಗೇ ರಿವರ್ಸ್ ಆಗಲಿದೆ. ಈ  ಬಗ್ಗೆ ತಿಳಿವಳಿಕೆ ಪಡೆದುಕೊಂಡು ಹೆಜ್ಜೆ ಇಡಬೇಕು ಎಂದು ಎಚ್ಚರಿಕೆ ನೀಡಿದರು.