ಬೆಂಗಳೂರು (ಫೆ.15):  ರಾಜ್ಯದಲ್ಲಿ ಮೀಸಲಾತಿ ಸಂಬಂಧ ಹೋರಾಟಗಳು ನಡೆಯುತ್ತಿದ್ದು, ಇನ್ನೆಷ್ಟುಮೀಸಲಾತಿ ಹೋರಾಟಗಳು ಪ್ರಾರಂಭವಾಗುತ್ತವೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

 ಪಕ್ಷದ ಬಲವರ್ಧನೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಂಡಿದ್ದ ‘ವಿಚಾರ, ವಿಕಾಸ, ವಿಕೇಂದ್ರೀಕರಣ’ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಾಗಲೇ ಕೆಲ ಸಮುದಾಯಗಳು ಮೀಸಲಾತಿ ಹೋರಾಟಗಳು ನಡೆಸುತ್ತಿವೆ. ಮುಂದಿನ ದಿನದಲ್ಲಿ ಸವಿತಾ ಸಮಾಜದವರು, ಉಪ್ಪಾರ ಸಮಾಜದವರು ಸೇರಿದಂತೆ ಇತರೆ ಸಮುದಾಯದವರು ಸಹ ಹೋರಾಟ ಪ್ರಾರಂಭಿಸಲಿದ್ದಾರೆ. ಮೀಸಲಾತಿ ವಿಚಾರವಾಗಿ ಇನ್ನೆಷ್ಟುಹೋರಾಟಗಳು ಶುರುವಾಗುತ್ತವೋ ಗೊತ್ತಿಲ್ಲ. ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು, ವೀರಶೈವರಿಗೆ ಶೇ.5ರಷ್ಟುಮೀಸಲಾತಿ ಇದೆ, ಎಸ್‌ಸಿ/ಎಸ್‌ಟಿಗೆ ಶೇ.18ರಷ್ಟುಇದೆ. ಸುಪ್ರೀಂಕೋರ್ಟ್‌ ಮೀಸಲಾತಿ ಪ್ರಮಾಣ ಶೇ.50ರಷ್ಟುಮೀರಬಾರದು ಎಂದು ಹೇಳಿದೆ. ರಾಜ್ಯದಲ್ಲಿ ಈಗಾಗಲೇ ಶೇ.50ರಷ್ಟುಮೀಸಲಾತಿ ಇದೆ. ಯಾವ ಹೋರಾಟಗಳು ಎಲ್ಲೆಲ್ಲಿಗೆ ಹೋಗಿ ತಲುಪುತ್ತವೆಯೋ ನೋಡುತ್ತಿದ್ದೇವೆ. ಹಾಗಂತ ಹೋರಾಟದ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದರು.

ಉಪಚುನಾವಣೆ: ದೇವೇಗೌಡ್ರು ನೋ ಅಂದ್ರು..ಎಚ್‌ಡಿಕೆ ಯೆಸ್‌.... ದಳಪತಿಗಳ ಗೇಮ್ ಚೇಂಜ್ ...

ಸಂವಿಧಾನದಲ್ಲಿ ಡಾ.ಬಿ.ಎಸ್‌.ಅಂಬೇಡ್ಕರ್‌ ಅವರು ಬಡವರಿಗಾಗಿ ಮೀಸಲಾತಿ ಕೊಟ್ಟರು. ಆದರೆ, ಉಳ್ಳವರಿಗೆ ಮೀಸಲಾತಿ ಕೊಟ್ಟರೆ ಬಡವರಿಗೆ ಯಾರು ಕೊಡುತ್ತಾರೆ? ಐದೈದು ಸಲ ಮೀಸಲಾತಿಯಡಿ ಗೆದ್ದು ಬರುತ್ತಾರಲ್ಲ, ಯುವಕರು ಎಲ್ಲಿ ಹೋಗಬೇಕು? ಪ್ರತಿ ಕುಟುಂಬಕ್ಕೆ ಮೀಸಲಾತಿ ಕೊಡುವುದು ಅಂಬೇಡ್ಕರ್‌ ಅವರಿಗೆ ಮಾಡುವ ಅಗೌರವ ಎಂದು ಕುಮಾರಸ್ವಾಮಿ ತೀಕ್ಷ$್ಣವಾಗಿ ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ : ಬಿಜೆಪಿ ಸರ್ಕಾರ ನಿಗಮ-ಮಂಡಳಿ ಸ್ಥಾನಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯದ ಸಂಪತ್ತು ಲೂಟಿ ಮಾಡಲು ಅವಕಾಶ ಕೊಟ್ಟಿದೆ. ಬಿಜೆಪಿಯಲ್ಲಿ ಸಚಿವರಾಗಿ ಒಂದೂವರೆ ವರ್ಷ ಕಾಲ ಮಾತ್ರ ಆಗಿದ್ದರೂ ಹೇಗೆ ಬದುಕುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಬಿಡಿಎ ತೋಳ, ಕುರಿ ಮೇಯಿಸುವ ಕೆಲಸ ಮಾಡುತ್ತಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೂ, ನನಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆದರೆ, ಈ ಹಿಂದೆ ಆಡಳಿತ ನಡೆಸಿದ ಸರ್ಕಾರದಲ್ಲಿ ಲೂಟಿ ನಡೆದಿತ್ತು. ಬಿಜೆಪಿಯ ಭ್ರಷ್ಟಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್‌. ಎರಡು ಸೂಟ್‌ಕೇಸ್‌ನಲ್ಲಿ ದಾಖಲೆಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲಾಗಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ನಾನು ದನಿ ಎತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್‌ ನಾಡಗೌಡ ಇತರರು ಉಪಸ್ಥಿತರಿದ್ದರು.

ಪಕ್ಷದ ಬಲವರ್ಧನೆ ಮತ್ತು ಗ್ರಾಮಪಂಚಾಯಿತಿ ಸದಸ್ಯರನ್ನು ಅಭಿನಂದಿಸುವ ಉದ್ದೇಶದಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಭಾನುವಾರ ಜೆಡಿಎಸ್‌ ವಿಚಾರ, ವಿಕಾಸ, ವಿಕೇಂದ್ರೀಕರಣ ಸಮಾವೇಶ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್‌ ನಾಡಗೌಡ ಇತರರು ಉಪಸ್ಥಿತರಿದ್ದರು.