* ಜೆಡಿಎಸ್‌ ಮುಖಂಡ, ವೀರ​ಶೈವ ಮಹಾ​ಸ​ಭಾದ ಜಿಲ್ಲಾ​ಧ್ಯಕ್ಷ ಹುಣ​ಸೀ​ಮ​ರ​ದ ಆಕ್ಷೇಪ* ಉತ್ತಮ ನಾಯಕನಿಗೆ ಅನ್ಯಾಯ ಮಾಡಬಾರದು * ಮುಖ್ಯಮಂತ್ರಿ ಬದಲಾವಣೆಗೆ ಮುಂದಾಗಿರುವ ಕೇಂದ್ರದ ಬಿಜೆಪಿ ನಾಯಕರು 

ಧಾರವಾಡ(ಜು.22): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ವೀರಶೈವ ಲಿಂಗಾಯತ ಸಮುದಾಯಕ್ಕೆ ಮಾಡುವ ಅವಮಾನ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ, ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಚಿಂತ​ನೆ ಮಾಡ​ಬಾ​ರ​ದಿತ್ತು. ಒಂದು ವೇಳೆ ಬದ​ಲಾವಣೆ ಮಾಡಿ​ದರೆ ಬರುವ ದಿನ​ಗ​ಳಲ್ಲಿ ಸಮಾ​ಜ​ದಿಂದ ಬಿಜೆ​ಪಿಗೆ ಬೆಂಬಲ ಸಿಗದೇ ಇರ​ಬ​ಹದು. ಬಿಜೆಪಿ ಬರುವ ದಿನ​ಗ​ಳಲ್ಲಿ ಕೆಟ್ಟ ಪರಿ​ಣಾಮ ಎದು​ರಿ​ಸ​ಬೇ​ಕಾ​ಗು​ತ್ತದೆ. ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ವೀರಶೈವ ಲಿಂಗಾಯತ ಸಮಾಜ ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಅವರ ಅವ​ಧಿ ಪೂರ್ಣಗೊಳ್ಳುವವೆರೆಗೂ ಅವರಿಗೆ ತೊಂದರೆ ಮಾಡದೆ ಮುಂದುವರೆಸಬೇಕು ಎಂದು ಆಗ್ರ​ಹಿ​ಸಿ​ದ್ದಾರೆ. 

ಸಿಎಂ ಸ್ಥಾನಕ್ಕೆ ರಾಜೀನಾಮೆ ಫಿಕ್ಸ್? ಮಹತ್ವದ ಸುಳಿವು ಕೊಟ್ಟ ಯಡಿಯೂರಪ್ಪ

ವೀರ​ಶೈ​ವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಪದಾ​ಧಿ​ಕಾರಿಗಳು ಹಾಗೂ ಮಠಾ​ಧೀಶರು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಕೇಂದ್ರದ ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆಗೆ ಮುಂದಾಗಿದ್ದಾರೆ. ರಾಜ್ಯ​ದಲ್ಲಿ ಸಮಾಜ ಒಡೆ​ಯುವ ಕೆಲಸ ನಡೆ​ಯು​ತ್ತಿದ್ದು ಸಮಾ​ಜದ ನಾಯ​ಕರು ಷಡ್ಯಂತ್ರಕ್ಕೆ ಬಲಿ​ಯಾ​ಗ​ಬಾ​ರದು ಎಂದರು.

ಒಂದು ವೇಳೆ ಕೇಂದ್ರದಲ್ಲಿ ಕುಳಿತು ಇಲ್ಲಿಯ ನಾಯಕನನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ನಷ್ಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಹೆಸರಿಲ್ಲದಂತೆ ಹೋಗುತ್ತದೆ. ಉತ್ತಮ ನಾಯಕನಿಗೆ ಅನ್ಯಾಯ ಮಾಡಬಾರದು ಎಂದು ಹೇಳಿದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಮಹಾ​ಸಭಾ ಪದಾ​ಧಿ​ಕಾ​ರಿ​ಗ​ಳಾದ ಶಿವಶರಣ ಕಲಬಶೆಟ್ಟರ್‌, ಎಂ.ಎಂ. ಹಿರೇಮಠ, ಮೈಲಾರ ಉಪ್ಪಿನ, ಎಸ್‌.ಎಚ್‌. ಪಾಟೀಲ, ರಾಜೇಂದ್ರ ಕಪಲಿ, ಬಿ.ಎಸ್‌. ಗೋಲ​ಪ್ಪ​ನ​ವರ, ಎನ್‌.​ಎಸ್‌. ಬಿರಾ​ದಾರ, ಜಯಶ್ರೀ ಪಾಟೀಲ ಇದ್ದರು.