ಮಂಡ್ಯ [ಸೆ.04]: ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಅರೆಸ್ಟ್ ಆದ  ಡಿ.ಕೆ.ಶಿವಕುಮಾರ್ ಪರ ಕೆ.ಆರ್ ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ಬ್ಯಾಟ್ ಬೀಸಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿರುವ ಜೆಡಿಎಸ್ ಅನರ್ಹ ಶಾಸಕರಾದ ನಾರಾಯಣ ಗೌಡ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ರಾಜ್ಯ ಮಟ್ಟಕ್ಕೆ ಬೆಳೆದ ನಾಯಕ. ಅವರೊಬ್ಬಗಣ್ಯ ವ್ಯಕ್ತಿ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದ ಶಿವಕುಮಾರ್ ನನಗೂ ಆತ್ಮೀಯರು. ಯಾವುದೋ ಕಾರಣಕ್ಕೆ ಅವರನ್ನು ಬಮಧಿಸಲಾಗಿದೆ. ಆದರೆ ಇದೆಲ್ಲದರಿಂದ ಅವರು ಪಾರಾಗುತ್ತಾರೆ ಎಂದು ನಾರಾಯಣ ಗೌಡ ಹೇಳಿದರು. 

ಸದ್ಯ ಡಿಕೆಶಿ ಮೇಲೆ ಎದುರಾದ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಅವರು ಹೊರ ಬರುತ್ತಾರೆ. ಅವರಿಗೆ ಶುಭವಾಗಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.