ತುಮಕೂರು[ಜ.29]  ತುಮಕೂರು ಮಹಾನಗರ ಪಾಲಿಕೆ ಗದ್ದುಗೆ ಯಾರಿಗೆ ಎಂಬ ಕುತೂಹಲ ಮೂಡಿದೆ.  ಬುಧವಾರ ಮೇಯರ್, ಉಪಮೇರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಬಹುತೇಕ ಖಚಿತವಾಗಿದೆ. ಆದರೆ ಜೆಡಿಎಸ್ ನಲ್ಲಿ ಎರಡು ಬಣಗಳಿದ್ದು,ಎರಡು ಬಣಗಳ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶಾಸಕ ಗೌರಿಶಂಕರ್ ಹಾಗೂ ಗುಬ್ಬಿ ಶಾಸಕ ಎಸ್. ಆರ್ .ಶ್ರೀನಿವಾಸ್ ಬಣಗಳ ನಡುವೆ ತೀವ್ರ ಪೈಪೋಟಿ ಇದೆ.

ಸಿದ್ಧಗಂಗಾ ಶ್ರೀಗಳಿಗೆ ಏಕಿಲ್ಲ ಭಾರತ ರತ್ನ

ಶಾಸಕ ಗೌರಿಶಂಕರ್ ನಗರದ 29ನೇ ವಾರ್ಡ್ ನ ನಾಜೀಮಾ ಬಿ ಅವರನ್ನು  ಮೇಯರ್ ಆಗಿಸಬಕು ಎಂದು ಪಣ ತೊಟ್ಟಿದ್ದರೆ ಮತ್ತೊಂದು ಕಡೆ ಸಚಿವ ಶ್ರೀನಿವಾಸ್ ತಮಗೆ  ರಾಜಕೀಯವಾಗಿ ಆಪ್ತರಾದ 21ನೇ ವಾರ್ಡ್‌ನ ಲಲಿತಾ ರವೀಶ್  ಅವರನ್ನು ಮೇಯರ್ ಮಾಡಲು ಕಸರತ್ತು ನಡೆಸಿದ್ದಾರೆ.

ಒಟ್ಟು 35 ವಾರ್ಡ್ಗೆ  ಚುನಾವಣೆ ನಡೆದಿತ್ತು. ಒಬ್ಬರು ನಿಧನವಾಗಿರುವುದರಿಂದ 34 ಸ್ಥಾನಗಳಿವೆ.  ಬಿಜಿಪಿ 13, ಕಾಂಗ್ರೆಸ್ 10 , ಜೆಡಿಎಸ್ 9 ಮತ್ತು ಇತರೆ ಮೂವರು ಜಯ ಗಳಿಸಿದ್ದರು.