Asianet Suvarna News Asianet Suvarna News

ಲಿಂಗಾಯತರಿಗೆ 2ಎ ಮೀಸಲು ಬೆಂಬಲಿಸುವ ಪಕ್ಷಕ್ಕೆ ಬೆಂಬಲ: ಕೂಡಲ ಶ್ರೀ

*   ಸಿಎಂ ಬೊಮ್ಮಾಯಿ ಈ  ಕೂಡಲೇ ನಮ್ಮ ಜನಾಂಗಕ್ಕೆ 2ಎ ಮೀಸಲಾತಿ ನೀಡಬೇಕು
*   ತಪ್ಪಿದ್ದಲ್ಲಿ ಮುಂದೆ ನಡೆಯುವ ಘಟನೆಗಳಿಗೆ ಸರ್ಕಾರವೇ ಹೊಣೆ
*   ಬಿಎಸ್‌ವೈ ಕೊಟ್ಟಿರುವ ಮಾತನ್ನು ಸಿಎಂ ಬೊಮ್ಮಾಯಿ ಕಾರ್ಯಗತಗೊಳಿಸಬೇಕು 

Jayamrutunjaya Swamji Talks Over 2A Reservation to Lingayat grg
Author
Bengaluru, First Published Aug 27, 2021, 7:36 AM IST
  • Facebook
  • Twitter
  • Whatsapp

ಚಾಮರಾಜನಗರ(ಆ.27): ಗೌಡ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಹಾಗೂ ದೀಕ್ಷ ಲಿಂಗಾಯತ ಮತ್ತು ಮಲೆಗೌಡ ಲಿಂಗಾಯತರಿಗೆ 2ಎ ಮೀಸಲಾತಿಗೆ ಯಾವ ವ್ಯಕ್ತಿ ಮತ್ತು ಯಾವ ಪಕ್ಷ ಬೆಂಬಲ ನೀಡುತ್ತದೆಯೋ ಅಂತಹ ವ್ಯಕ್ತಿ ಮತ್ತು ಪಕ್ಷಕ್ಕೆ ನಮ್ಮ ಬೆಂಬಲವಿರುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಸೆ.15ರೊಳಗೆ 2ಎ ಮೀಸಲಾತಿ ನೀಡುವುದಾಗಿ ಹೇಳಿದರು. ಈಗ ಗಡುವು ಮುಗಿಯುತ್ತಾ ಬರುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ನಮ್ಮ ಜನಾಂಗಕ್ಕೆ 2ಎ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿದರು.

ಸರ್ಕಾರವೇ ಹೊಣೆ: ಯತ್ನಾಳ್‌ ಎಚ್ಚರಿಕೆ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಪಂಚಮಸಾಲಿ, ಗೌಡ ಲಿಂಗಾಯತರಿಗೆ ಕೂಡಲೇ ಮೀಸಲಾತಿಗೆ ಸೇರಿಸಬೇಕು. ತಪ್ಪಿದ್ದಲ್ಲಿ ಮುಂದೆ ನಡೆಯುವ ಘಟನೆಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಂಚಮಸಾಲಿಗಳಿಂದ ಮತ್ತೆ ಶುರುವಾಯ್ತು ಹೋರಾಟ : ಮೀಸಲಾತಿಗೆ ಪಟ್ಟು

ಕೇವಲ ಒಂದು ವರ್ಷ ಹತ್ತು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ನಮ್ಮ ಓಟು ಬೇಕಿದ್ದಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕೆಂದು. ನಮಗೆ ಅಧಿಕಾರ ಶಾಶ್ವತವಲ್ಲ ನಮ್ಮ ಜನಾಂಗಕ್ಕೆ ಶಾಶ್ವತ ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಅಧಿಕಾರಕ್ಕಾಗಿ ಅಂಟಿಕೊಂಡು ನಮ್ಮ ಜನರಿಗೆ ದ್ರೋಹ ಬಗೆಯುವುದಕ್ಕೆ ನಾನು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಬೊಮ್ಮಾಯಿ ಕಾರ್ಯಗತಗೊಳಿಸಲಿ

ಅಖಿಲ ಭಾರತ ಪಂಚಮಸಾಲಿ ಸಂಘದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಯಡಿಯೂರಪ್ಪನವರು ಕೊಟ್ಟಿರುವ ಮಾತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾರ್ಯಗತಗೊಳಿಸಬೇಕು. ತಪ್ಪಿದ್ದಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
 

Follow Us:
Download App:
  • android
  • ios