ಪುನೀತ್‌ ನೋಡಲು ರೆಸಾರ್ಟ್‌ ಬಾಗಿಲಿನಲ್ಲಿ ಕಾದು ನಿಂತ ಅಭಿಮಾನಿಗಳು| ಫ್ಯಾನ್ಸ್‌ಗಳನ್ನ ನಿಯಂತ್ರಿಸಲು ಹರಸಾಹಸ ಪಟ್ಟ ರೆಸಾರ್ಟ್‌ ಸಿಬ್ಬಂದಿ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆಯುತ್ತಿರುವ ಜೇಮ್ಸ್‌ ಚಿತ್ರದ ಶೂಟಿಂಗ್‌| 

ಹೊಸಪೇಟೆ(ಅ.16): ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನೋಡಲು ತಾಲೂಕಿನ ಕಮಲಾಪುರ ಬಳಿಯ ಆರೇಂಜ್‌ ಕೌಂಟಿ ರೆಸಾರ್ಟ್‌ ಮುಂದೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. 

ಪುನೀತ್‌ ಅವರನ್ನು ನೋಡಲು ಅಭಿಮಾನಿಗಳು ರೆಸಾರ್ಟ್‌ ಬಾಗಿಲಿನಲ್ಲಿ ಕಾದು ನಿಂತಿದ್ದರು. ಹೊರಗಿನಿಂದ ಕಾರು ರೆಸಾರ್ಟ್‌ ಒಳಗಡೆ ಹೋಗುವ ಸಂದರ್ಭದಲ್ಲಿ ಅದರ ಜತೆಯಲ್ಲಿಯೆ ಅಭಿಮಾನಿಗಳು ಒಳಗಡೆ ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಅವರನ್ನು ನಿಯಂತ್ರಿಸಲು ರೆಸಾರ್ಟ್‌ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಹೊಸಪೇಟೆ: ಜೇಮ್ಸ್‌ ಶೂಟಿಂಗ್‌ನಲ್ಲಿ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಭಾಗಿ

ನೋಡಲು ಬಾಗಿಲಿನಲ್ಲಿ ಕಾಯುತ್ತಿದ್ದೆವೆ. ಆದರೆ, ಪುನೀತ್‌ ಅವರನ್ನು ನೋಡುವ ಭಾಗ್ಯ ಲಭಿಸಿಲ್ಲ. ಜೇಮ್ಸ್‌ ಚಿತ್ರದ ನಿರ್ಮಾಪಕರು ಕಿಶೋರ್‌ ಪತ್ತಿಕೊಂಡ ಅವರು ಸ್ಥಳೀಯರಾಗಿದ್ದು, ಪುನೀತ್‌ ನೋಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.