ದೇಶವನ್ನು ಬಲಗೊಳಿಸುತ್ತಿರುವುದೇ ಸಂವಿಧಾನ
ಭಾರತ ಮತ್ತು ಡಾ.ಅಂಬೇಡ್ಕರ್ ಒಂದೇ ನಾಣ್ಯದ ಎರಡು ಮುಖಗಳು. ಭಾರತವನ್ನು ಬಲಗೊಳಿಸುತ್ತಿರುವುದೇ ಸಂವಿಧಾನ. ನಾವು ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿದ್ದು, ವಿಶ್ವದಲ್ಲಿ ಸಂಕಷ್ಟದೇಶಗಳಿಗೆ ನೆರವು ನೀಡುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಕೋಲಾರ : ಭಾರತ ಮತ್ತು ಡಾ.ಅಂಬೇಡ್ಕರ್ ಒಂದೇ ನಾಣ್ಯದ ಎರಡು ಮುಖಗಳು. ಭಾರತವನ್ನು ಬಲಗೊಳಿಸುತ್ತಿರುವುದೇ ಸಂವಿಧಾನ. ನಾವು ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿದ್ದು, ವಿಶ್ವದಲ್ಲಿ ಸಂಕಷ್ಟದೇಶಗಳಿಗೆ ನೆರವು ನೀಡುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ನಗರದ ರಂಗಮಂದಿರದ ಅಂಬೇಡ್ಕರ್ ಚಿಂತನ ಮಂಥನ ವೇದಿಕೆಯಲ್ಲಿ ಅಂತ್ಯೋದಯದಿಂದ ಸರ್ವೋದಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಪಕ್ಷವು ಸರ್ವೇಜನೋ ಸುಖಿನೂ ಭವತೋಃ ಸಮಸ್ತ ಲೋಕೋ ಸರ್ವೆನೋಭವತೋಃ ಎಂಬ ತತ್ವ ಅಳವಡಿಸಿಕೊಂಡಿದೆ ಎಂದರು.
ಪ್ರಜಾಪ್ರಭುತ್ವಕ್ಕೆ ವಂಶಾಡಳಿತ ಮಾರಕ
ಕಾಂಗ್ರೆಸ್, ಜೆಡಿಎಸ್ ಪಕ್ಷದ ವಂಶಾಡಳಿತ ರಾಜಕಾರಣವು ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತದೆ. ಆದರೆ ಬಿಜೆಪಿ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ. ಚಹ ಮಾರುತ್ತಿದ್ದ ಮೋದಿ ಅವರಿಗೆ ದೇಶದ ಆಡಳಿತದ ಚುಕ್ಕಣಿ ನೀಡಲಾಗಿದೆ. ರೈತನ ಮಗ ಯಡಿಯೂರಪ್ಪರಿಗೆ ರಾಜ್ಯದ ಆಡಳಿತ ಚುಕ್ಕಣಿ ನೀಡಲಾಗಿತ್ತು. ಇದಕ್ಕೆಲ್ಲ ಕಾರಣ ಅಂಬೇಡ್ಕರ್ ರಚಿಸಿರುವ ಸಂವಿಧಾನ ಕಾರಣ ಎಂದು ಪ್ರತಿಪಾದಿಸಿದರು.
ಸಿದ್ದರಾಮಯ್ಯ ಕೋಲಾರಕ್ಕೆ ಜಾತಿ ಸಮೀಕ್ಷೆ, ಸರ್ವೇ ಮಾಡಿಸಿಕೊಂಡು ಬರುತ್ತಿರುವುದು ಜಾತಿಯತೆ ಮೇಲೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಅಹಿಂದ ವರ್ಗಗಳನ್ನು ಮುಂದು ಮಾಡಿಕೊಂಡು ಬರುತ್ತಿದ್ದಾರೆಯೇ ಹೊರತು ಅವರಿಗೆ ರಾಷ್ಟ್ರದ ಬಗ್ಗೆ ಬರುತ್ತಿಲ್ಲ. ವಾಸ್ತಾವಿಕವೇ ಬೇರೆ ಪ್ರಜಾಪ್ರಭುತ್ವ ಬೇರೆಯಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ವ್ಯಂಗವಾಡಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ದಲಿತ ಸಂಘಟನೆಗಳ ಹೋರಾಟದ ತವರು, ರಾಷ್ಟ್ರದಲ್ಲಿ ಅತಿಹೆಚ್ಚು ದಲಿತ ಸಮುದಾಯದವರು ಇರುವಂತ ಎರಡನೇ ಜಿಲ್ಲೆಯಾಗಿದೆ. ದಲಿತರಿಗೆ ಸಾಮಾಜಿಕ ನ್ಯಾಯಾದ ಕೋಲಾರದ ಕೂಗು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿಧ್ವನಿಸಿರುವುದು ಇತಿಹಾಸ. ಅಂಬೇಡ್ಕರ್ ನಮ್ಮ ಮನೆಯ ದೇವರಾಗಿದ್ದಾರೆ. ಅವರು ನೀಡಿದ ಮೀಸಲಾತಿಯಿಂದ ನಾನು ಇಂದು ಸಂಸದನಾಗಲು ಅವಕಾಶ ಸಿಕ್ಕಿದೆ, ನನ್ನ ಮುಖ ನೋಡದವರು ಸೇರಿದಂತೆ 2 ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆ ಮಾಡುವ ಮೂಲಕ ಜವಾಬ್ದಾರಿಯು ಸ್ಥಾನ ನೀಡಿದ್ದೀರಿ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದರು.
ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗಳಿಗೂ ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಬೇಕಾಗಿದೆ. ಸೌಲಭ್ಯಗಳು ಬಾಯಿ ಮಾತಿಗೆ ಆಗುತ್ತಿದ್ದು, ದಲಿತರನ್ನು ಓಟ್ ಬ್ಯಾಂಕ್‌ಗಳಾಗಿ ಪರಿವರ್ತಿಸಿ ಕೊಂಡು ದಾರಿ ತಪ್ಪಿಸುವಲ್ಲಿ ಇತರೆ ಸಮುದಾಯಗಳ ಪಾತ್ರವು ಮಂಚೂಣಿಯಲ್ಲಿರುವುದು ಗಮನೀಯ ಅಂಶವಾಗಿದೆ ಎಂದರು.
ಬಿಜೆಪಿ ಪಕ್ಷವನ್ನು ದಲಿತರ ವಿರೋಧಿ, ಸಂವಿಧಾನ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಕಾಶ್ಮೀರದಲ್ಲಿ ಸಂವಿಧಾನ ಅನುಷ್ಠನಕ್ಕೆ ತರಲಾಗಿದೆ. ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ ಸ್ಥಾನ ಮಾನ ನೀಡಲಾಗುತ್ತಿದೆ. ಸರ್ವರಿಗೂ ಸಮಾಬಾಳು ಎಂಬ ಸಿದ್ದಾಂತ ಪಾಲಿಸಿಕೊಂಡು ಪಾರದರ್ಶಕ ಆಡಳಿತ ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಆರ್‌ಪಿಐ ವೆಂಕಟಸ್ವಾಮಿ, ಶಂಕರ್, ರಾಜೇಶ್, ಮುನಿರಾಜು, ಡಾ.ಚಂದ್ರಶೇಖರ್, ಹನುಂತಪ್ಪ, ಮಹೇಂದ್ರ ಕೌತಾಳ್ ಇದ್ದರು.
ಅಸಮಾನತೆ ಹೋಗಲಾಗಿಸಲು ಅಂಬೇಡ್ಕರ್ ಕಾರ್ಯ
ಮೈಸೂರು :ದೇಶದಲ್ಲಿ ತುಂಬಿ ತುಳುಕುತ್ತಿದ್ದ ಅಸಮಾನತೆಯನ್ನು ಹೋಗಲಾಡಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಅದ್ಬುತ ಕೆಲಸ ಮಾಡಿದರು ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಬಣ್ಣಿಸಿದರು.
ಅಶೋಕಪುರಂ ಅಭಿಮಾನಿಗಳ ಬಳಗವು ಅಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಂವಿಧಾನೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತಿತ್ತು ಎಂದರು.
ಅಂಬೇಡ್ಕರ್ ಅವರು ಸ್ವಾಭಿಮಾನಿ, ಹಟ, ಛಲದಿಂದ ಬೆಳೆದವರು. ಅವರಷ್ಟುದೊಡ್ಡ ವಿದ್ವಾಂಸ ದೇಶದಲ್ಲಿ ಇಲ್ಲ. ಅಮೆರಿಕಾದ ಕೋಲಂಬಿಯ ವಿವಿಯ ಪ್ರಕಾರವೂ ಇಡೀ ವಿಶ್ವದಲ್ಲಿ ಅಂಬೇಡ್ಕರ್ ಅವರು ಜ್ಞಾನದಲ್ಲಿ ಮೊದಲ ಸ್ಥಾನದಲ್ಲಿ ಬರುತ್ತಾರೆ. ಜಾತಿ ಕಾರಣಕ್ಕೆ ಇವತ್ತಿಗೂ ಕೂಡ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಪ್ರತಿಯೊಬ್ಬರೂ ಬಾಬಾ ಸಾಹೇಬರ ಬಗ್ಗೆ ಅರಿತುಕೊಳ್ಳಬೇಕು. ಧರ್ಮ, ಅಧರ್ಮದ ವ್ಯತ್ಯಾಸ ತಿಳಿಯಬೇಕು. ಮುಂಬರುವ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕು. ಆ ಮೂಲಕ ಸಂವಿಧಾನ ರಕ್ಷಿಸಬೇಕು ಎಂದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಭಾಷಾವಾರು ಪ್ರಾಂತ್ಯಗಳು ರಚನೆಯಾದ ನ.1 ರಂದು ಗಣರಾಜ್ಯೋತ್ಸವ ದಿನ, ನ.26 ರಂದು ಸಂವಿಧಾನ ಸಮರ್ಪಣಾ ದಿನ, ಜ.26 ರಂದು ಸಂವಿಧಾನ ದಿನ ಆಚರಿಸಿದರೆ ಅರ್ಥಬರುತ್ತದೆ ಎಂದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎರಡೂ ಉಳಿಯಬೇಕು ಎಂದರು.
ಇತಿಹಾಸ ತಜ್ಞ ಪ್ರೊಪಿ.ವಿ.ನಂಜರಾಜ ಅರಸ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಾದರೂ ಇತ್ತೀಚಿನ ದಿನಗಳಲ್ಲಿ ಕರಡು ರಚನಾ ಸಮಿತಿಯಲ್ಲಿದ್ದ ಬಿ.ಎನ್. ರಾವ್ ಅವರ ಹೆಸರನ್ನು ಬಿಜೆಪಿ- ಆರ್‌ಎಸ್‌ಎಸ್ ಕಾರ್ಯಸೂಚಿಯಂತೆ ಮುನ್ನಲೆಗೆ ತರಲಾಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಹೊಸ ಸಂವಿಧಾನ ರಚಿಸಿ, ಅಂಬೇಡ್ಕರ್ ಅವರ ಹೆಸರನ್ನು ಅಳಿಸಿಹಾಕುತ್ತಾರೆ ಎಂದರು.