ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಣೆ

ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್‌ ಗಳನ್ನು ಮನೆ-ಮನೆಗೆ ತಲುಪಿಸುವ ಅಭಿಯಾನಕ್ಕೆ ಶಾಸಕ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿ ಗ್ರಾಮದ ಹಲವು ಮನೆಗಳಿಗೆ ವಿತರಿಸಿದರು

Issuance of Congress Guarantee Card snr

  ಕೊರಟಗೆರೆ :  ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್‌ ಗಳನ್ನು ಮನೆ-ಮನೆಗೆ ತಲುಪಿಸುವ ಅಭಿಯಾನಕ್ಕೆ ಶಾಸಕ ಡಾ.ಜಿ.ಪರಮೇಶ್ವರ್‌ ಚಾಲನೆ ನೀಡಿ ಗ್ರಾಮದ ಹಲವು ಮನೆಗಳಿಗೆ ವಿತರಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ, ಚುನಾವಣೆಗೆ ಮುಂಚಿತವಾಗಿ ನಮ್ಮ ಪಕ್ಷವು ಹಲವು ಭರವಸೆಗಳನ್ನು ಜನತೆಗೆ ನೀಡಲಿದೆ. ಆದರೆ ಅದರಲ್ಲಿ 3 ಮುಖ್ಯ ಪ್ರಣಾಳಿಕೆಗಳಾದ ಪ್ರತಿ ಕುಂಟುಂಬದ ಮನೆಯನ್ನು ನಿಭಾಯಿಸುವ ಗೃಹಿಣಿಗೆ ತಿಂಗಳಿಗೆ 2 ಸಾವಿರ ರು.ಗಳನ್ನು ತಲುಪಿಸುವ ಭರವಸೆಯನ್ನು ನೀಡಿದ್ದೇವೆ, ಇದನ್ನು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಎಲ್ಲಾ ಬಡವರ್ಗದ ಕುಟುಂಬದವರೆಗೂ ನೀಡುತ್ತೇವೆ ಇದನ್ನು ಖಚಿತಗೊಳಿಸಲು ಪ್ರತಿ ಕುಟುಂಬದ ಒಡತಿಗೆ ಪಕ್ಷದಿಂದ ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಮತ್ತು ನಾಯಕರಾದ ಸಿದ್ದರಾಮಯ್ಯ ರವರ ಸಹಿಯೊಂದಿಗೆ ಗ್ಯಾರಂಟಿ ಕಾರ್ಡ್‌ ರೂಪದಲ್ಲಿ ನೀಡಿ ಖಚಿತಗೊಳಿಸುತ್ತಿದ್ದೇವೆ ಎಂದರು.

ಈ ಗ್ಯಾರಂಟಿ ಕಾರ್ಡ್‌ ವಿರತಣೆಯನ್ನು ರಾಜ್ಯಾದ್ಯಾಂತ ನಮ್ಮ ಪಕ್ಷದ ಎಲ್ಲಾ ನಾಯಕರು, ಶಾಸಕರು ಹಾಗೂ ಮುಖಂಡರು ಚಾಲನೆ ನೀಡಿದ್ದಾರೆ, ಅದೇ ರೀತಿಯಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಹೂಲಿಕುಂಟೆ ಗ್ರಾಮದಲ್ಲಿ ಮನೆಗಳಿಗೆ ಹಂಚುವ ಮೂಲಕ ಚಾಲನೆ ನೀಡಲಾಗಿದೆ, ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಆಗಿರುವ ನಾನು ರಾಜ್ಯದಲ್ಲಿ ಎಲ್ಲಾ ಪಕ್ಷದ ಎಲ್ಲಾ ನಾಯಕರು, ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ರೈತರಿಗೆ, ಕಾರ್ಮಿಕರಿಗೆ, ನಿರುದ್ಯೋಗಿ ಯುವಕ ಯುವತಿಯರಿಗೆ, ಮಹಿಳೆ ಯರಿಗೆ, ಬೀದಿ ವ್ಯಾಪಾರಿಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವ ಪ್ರಣಾಳಿಕೆ ಮಾಡಿ ಜಾರಿಗೆ ತರಲಾಗುವುದು ಎಂದರು.

ಈ ಸಂದರ್ಭಧಲ್ಲಿ ಕಸಬಾ ಹೋಬಳಿಯ ಮುಖಂಡ ಹೂಲಿಕುಂಟೆ ಪ್ರಸಾದ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ್‌, ಅರಕೆರೆ ಶಂಕರ್‌, ಮಹಿಳಾ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ.ಸದಸ್ಯರುಗಳಾದ ಮಲ್ಲಿಕಾರ್ಜುನಯ್ಯ, ಜಯಮ್ಮ, ಮುಖಂಡರುಗಳಾದ ಗಿರೀಶ್‌, ಹೆಚ್‌.ಬಿ.ಶಿವಾನಂದ್‌, ಜ್ಯೋತಿ ಪ್ರಕಾಶ್‌, ಮಹೇಶ್‌, ನಾಗರತ್ನಮ್ಮ, ನರಸೀಯಪ್ಪ, ಹೆಚ್‌.ಪಿ.ರಾಜಣ್ಣ, ತ್ರಿಯಂಭಕಾರಾದ್ಯ, ಸಲಾಮ್‌, ದಾದಾಪೀರ್‌, ಖಲೀಲ್‌, ಶಿವಕುಮಾರ್‌, ಮುತ್ತಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಾಂಗ್ರೆಸ್ ಕಾರ್ಡ್ ನಂಬಬೇಡಿ

ಜಮಖಂಡಿ (ಮಾ.16): ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ವಾರಂಟಿ ಮುಗಿದಿರುವ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಕಾರ್ಡ್‌ ಅನ್ನು ನಂಬಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಇಲ್ಲಿನ ತಾಲೂಕಾ ಕ್ರೀಡಾಗಂಣದಲ್ಲಿ ವಿಜಯ ಸಂಕಲ್ಪಯಾತ್ರೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಶಾದಿಭಾಗ್ಯ ಕೇವಲ ಒಂದು ಸಮುದಾಯದ ಯೋಜನೆ ಆಗಿದೆ. ಒಂದು ಕಣ್ಣಿಗೆ ಸುಣ್ಣ. ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಅದು ಮಾಡಿದೆ. ಅರ್ಕಾವತಿ ಹಗರಣದಲ್ಲಿ ಕೋಟ್ಯಂತರ ರುಪಾಯಿ ನುಂಗಿದ್ದು, ಕಾಂಗ್ರೆಸ್‌ನಲ್ಲಿದ್ದ ಮೂವರಲ್ಲಿ ಕದ್ದಿರೋರು ಯಾರು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಬಿಜೆಪಿ ಸಿದ್ಧಾಂತ ಹೊಂದಿರುವ ಪಕ್ಷವಾಗಿದ್ದು, ಹಿಂದುತ್ವವೇ ರಾಷ್ಟ್ರೀಯ ಸಿದ್ಧಾಂತವಾಗಿದೆ. ನೀತಿ, ನೇತಾ, ನಿಯತ್ತು ಇಟ್ಟುಕೊಂಡು ಹೋಗುವ ಪಕ್ಷವಾಗಿದೆ. ಪ್ರಧಾನಿ ಮೋದಿ ಕೇಂದ್ರದಲ್ಲಿ ಹಲವಾರು ಕೊಡುಗೆ ನೀಡಿದ್ದಾರೆ. ಯಾವ ಜಾತಿ ಆಧಾರದ ಮೇಲೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಮಾತನಾಡಿ, ಇದು ಕೇವಲ ವಿಜಯ ಸಂಕಲ್ಪ ಯಾತ್ರೆ ಅಲ್ಲ. ನಿಮ್ಮೆಲ್ಲರ ಸಂಕಲ್ಪ ಪೂರೈಸುವ ಯಾತ್ರೆ ಎನ್ನುತ್ತ, ದೇಶದಲ್ಲೆಡೆ ಕಾಂಗ್ರೆಸ್‌ ಮುಕ್ತ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು

Latest Videos
Follow Us:
Download App:
  • android
  • ios