ಇಂದಿರಾ ಶಿವಮೊಗ್ಗದವರಾ, ಸೋನಿಯಾ ಬಳ್ಳಾರಿಯವರಾ ?

ಇಂದಿರಾ ಗಾಂಧಿಯವರ ಸ್ವಂತ ಜಿಲ್ಲೆ ಶಿವಮೊಗ್ಗನಾ ? ಸೋನಿಯಾ ಗಾಂಧಿ ತವರೂರು ಬಳ್ಳಾರಿನಾ ? ರಾಹುಲ್ ಗಾಂಧಿ ಊರು ಯಾವುದು ಹೇಳಿ ? ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಎಲ್ಲಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೇ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Is Indira from Shimoga and Sonia from Bellary says Somanna snr

 ಕೊರಟಗೆರೆ : ಇಂದಿರಾ ಗಾಂಧಿಯವರ ಸ್ವಂತ ಜಿಲ್ಲೆ ಶಿವಮೊಗ್ಗನಾ ? ಸೋನಿಯಾ ಗಾಂಧಿ ತವರೂರು ಬಳ್ಳಾರಿನಾ ? ರಾಹುಲ್ ಗಾಂಧಿ ಊರು ಯಾವುದು ಹೇಳಿ ? ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಎಲ್ಲಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೇ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರಟಗೆರೆ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ೫೦ ವರ್ಷದಿಂದ ತುಮಕೂರು ಜಿಲ್ಲೆಯಲ್ಲೇ ಇದ್ದವನು. ಯಾರೋ ಏನೋ ಆರೋಪ ಮಾಡ್ತಾರೇ ಅಂತಾ ನಾನು ಸ್ಪಷ್ಟನೇ ನೀಡೋದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಲ್ಲಿ ಯಾವುದೇ ಬಿನ್ನಾಭಿಪ್ರಾಯ ಇಲ್ಲ. ಅದು ಕೇವಲ ವಿರೋಧ ಪಕ್ಷದವರ ಆರೋಪವಷ್ಟೆ. ಕರ್ನಾಟಕದ 28  ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ. ದೆಹಲಿ ಸಿಎಂ ಆದ್ರು ಅಷ್ಟೆ ಸಾಮಾನ್ಯ ಮನುಷ್ಯ ಆದ್ರು ಅಷ್ಟೇ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಆದರೇ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಅವರ ಪಕ್ಷದವ್ರಿಗೆ ತಿಳಿದಿಲ್ಲ. ಮೋದಿ ವಿಶ್ವನಾಯಕ ಆಗಲು ಇನ್ನೂ ಕೇವಲ ಮೂರೇ ಹೆಜ್ಜೆ ಬಾಕಿಯಿದೆ ಅಷ್ಟೇ. ಭಾರತ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿರುವುದು ಇಡೀ ವಿಶ್ವಕ್ಕೆ ತಿಳಿದಿರುವ ವಿಷಯ ಎಂದರು.

ಸಭೆಯಲ್ಲಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಮುಖಂಡ ಅನಿಲ್‌ಕುಮಾರ್, ಕೊರಟಗೆರೆ ಮಂಡಲ ಅಧ್ಯಕ್ಷ ದರ್ಶನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂರ್ತಿ, ಪಪಂ ಸದಸ್ಯ ಪ್ರದೀಪಕುಮಾರ್, ಮುಖಂಡರಾದ ಚೇತನ್, ಮಂಜುನಾಥ್, ರಘು, ಮಹೇಶ್, ಗೋವಿಂದರೆಡ್ಡಿ, ದಾಡಿ ವೆಂಕಟೇಶ್, ಮಹೇಶ್, ಕಾಫಿ ಅಪ್ಪಿ ಸೇರಿದಂತೆ ಇತರರು ಇದ್ದರು.

  ತಿಂಗಳಲ್ಲೇ ರೈಲ್ವೆ ಮತ್ತೇ ಟೇಕ್‌ಆಪ್.

ತುಮಕೂರು ಜಿಲ್ಲೆಯಿಂದ ರಾಯದುರ್ಗಕ್ಕೆ ಕೊರಟಗೆರೆ ಮಾರ್ಗವಾಗಿ ಸಂಚರಿಸುವ ರೈಲ್ವೆ ಕಾಮಗಾರಿ ಸ್ಥಗಿತ ಆಗಿರುವ ಮಾಹಿತಿ ತಿಳಿದಿದೆ. ಕೊರಟಗೆರೆ ಕ್ಷೇತ್ರದ ತುಂಬಾಡಿ ಮತ್ತು ಬೆಳಧರ ಸಮೀಪದ ರಾಜ್ಯ ಹೆದ್ದಾರಿಗೆ ಟೋಲ್ ದಿಗ್ಬಧನ ಹಾಕ ಲಾಗಿದೆ. ಕೊರಟಗೆರೆ ಕ್ಷೇತ್ರಕ್ಕೆ ಎತ್ತಿನಹೊಳೆ ಮತ್ತು ಹೇಮಾವತಿ ನೀರಿನ ಕಾಮಗಾರಿಯ ಜೊತೆಯಲ್ಲಿ ರೈಲ್ವೆ ಕಾಮಗಾರಿಯನ್ನು ನಾನು ಗೆದ್ದ ಮೂರೇ ತಿಂಗಳಲ್ಲಿ ಮತ್ತೇ ಪ್ರಾರಂಭ ಮಾಡ್ತೀನಿ ಎಂದರು.

ಪರಮೇಶಣ್ಣನ ಜೊತೆಗೂಡಿ ಅಭಿವೃದ್ಧಿ

ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಒಳ್ಳೆಯ ಕೆಲಸ ಮಾಡುವ ನಾಯಕರನ್ನು ಯಾರು ಕೀಳಾಗಿ ಕಾಣಬಾರದು. ನಾನು ಅಧಿಕಾರದಲ್ಲಿ ಇದ್ದಾಗ ಪರಮೇಶಣ್ಣ ಕೇಳಿದಷ್ಟು ಮನೆ ಮತ್ತು ಅನುದಾನ ನೀಡಿದ್ದೇನೆ. ಕೊರಟಗೆರೆ ಕ್ಷೇತ್ರದಲ್ಲಿ ನೀರಾವರಿ ಯೋಜನೆ, ರಾಜ್ಯ ಹೆದ್ದಾರಿ ಮತ್ತು ರೈಲ್ವೆ ಯೋಜನೆ ಕಾಮಗಾರಿ ಚಾಲನೆಗೆ ಗೃಹಸಚಿವ ಪರಮೇಶಣ್ಣನ ಜೊತೆಗೂಡಿ ಅಭಿವೃದ್ಧಿ ಮಾಡ್ತಿನಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಗೃಹಸಚಿವರ ಗುಣಗಾನ ಮಾಡಿದರು.

ಶ್ರೀಮಠಕ್ಕೆ ವಿ.ಸೋಮಣ್ಣ ಭೇಟಿ: ಎಲೆರಾಂಪುರದ ಶ್ರೀಕುಂಚಿಟಿಗ ಮಹಾಸಂಸ್ಥಾನ ಶ್ರೀಮಠಕ್ಕೆ ತುಮಕೂರು ಲೋಕಾಸಭಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬೇಟಿನೀಡಿ ಡಾ.ಹನುಮಂತನಾಥ ಸ್ವಾಮೀಜಿಯ ಆರ್ಶಿವಾದ ಪಡೆದ ನಂತರ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ೧ ಗಂಟೆಗೂ ಅಧಿಕ ಸಮಯ ಸುದೀರ್ಘವಾಗಿ ಚರ್ಚೆ ನಡೆಸಿದರು.

Latest Videos
Follow Us:
Download App:
  • android
  • ios