ಜ್ಯುಬಿಲಿಯಂಟ್ ತನಿಖೆಗೆ ಹರ್ಷ ಗುಪ್ತ ನೇಮಕ..?
ಕೊರೋನಾ ವೈರಸ್ ಹರಡಿದ ಪ್ರಕರಣದಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆ ವಿರುದ್ಧ ತನಿಖೆಗೆ ಸಂಬಂಧಿಸಿದಂತೆ ಹರ್ಷಗುಪ್ತ ಅವರನ್ನು ನೇಮಿಸಿಲ್ಲ, ಕೊರೋನಾ ಪ್ರಕರಣ ನಿರ್ವಹಣೆಗಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು(ಏ.15): ಕೊರೋನಾ ವೈರಸ್ ಹರಡಿದ ಪ್ರಕರಣದಲ್ಲಿ ಜ್ಯುಬಿಲಿಯಂಟ್ ಕಾರ್ಖಾನೆ ವಿರುದ್ಧ ತನಿಖೆಗೆ ಸಂಬಂಧಿಸಿದಂತೆ ಹರ್ಷಗುಪ್ತ ಅವರನ್ನು ನೇಮಿಸಿಲ್ಲ, ಕೊರೋನಾ ಪ್ರಕರಣ ನಿರ್ವಹಣೆಗಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮತಾನಾಡಿದ ಅವರು, ಕೊರೋನಾ ನಿಯಂತ್ರಣಕ್ಕಾಗಿ ಹರ್ಷಗುಪ್ತ ಅವರನ್ನು ನೇಮಿಸಲಾಗಿದೆ. ನಾವು ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ. ಆದರೆ ಅವರನ್ನು ಜ್ಯುಬಿಲಿಯಂಟ್ ಕಾರ್ಖಾನೆಯ ತನಿಖೆಗಾಗಿ ನೇಮಿಸಿಲ್ಲ ಎಂದರು.
ಲಾಕ್‌ಡೌನ್ ಉಲ್ಲಂಘಿಸಿದ 4 ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ರದ್ದು
ಬೆಂಗಳೂರು ನಂತರ ಕೊರೋನಾ ಪ್ರಕರಣದಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿರ್ವಹಣೆ, ಜಿಲ್ಲಾಧಿಕಾರಿಗೆ ಸಹಕಾರ ನೀಡಲು ಹರ್ಷವರ್ಧನ್ ಅವರನ್ನು ನೇಮಿಸಲಾಗಿದೆ. ನಾನು ಇತ್ತೀಚೆಗೆ ಜ್ಯುಬಿಲಿಯಂಟ್ ಕಾರ್ಖಾನೆಗೆ ಭೇಟಿ ನೀಡಿದ್ದೆ. ಕೊರೋನಾ ಹರಡಿರುವ ಕುರಿತು ಹಲವು ಮಾತುಗಳಿವೆ. ಅಲ್ಲಿನ ಕಾರ್ಮಿಕರು ಆಡಿಟರ್‌ಗಳಿಂದ ಹರಡಿದೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದರು.